More

    ರಾಜ್ಯಕ್ಕೆ ಚೊಂಬು ಕೊಟ್ಟಿರುವುದು ಕಾಂಗ್ರೆಸ್

    ಚಿತ್ರದುರ್ಗ: ತನ್ನ ವೈಫಲ್ಯ ಮುಚ್ಚಿಕೊಳ್ಳಲು ಚೊಂಬಿನ ಅಪಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ರಾಜ್ಯಕ್ಕೆ ನಿಜಕ್ಕೂ ಚೊಂಬು ನೀಡಿದೆ ಎಂದು ಮಾಜಿ ಶಾಸಕ ಪಿ.ರಾಜೀವ್ ದೂರಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತರಿಗೆ ಮೀಸಲಿಟ್ಟ 25 ಸಾವಿರ ಕೋಟಿ ರೂ. ಅನುದಾನ ದುರ್ಬಳಕೆ, ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಸೇರುತ್ತಿದ್ದ 4 ಸಾವಿರ ರೂ. ಕಡಿತ, ಕೃಷಿ ಇಲಾಖೆಗೆ ನೀಡುತ್ತಿದ್ದ 7,500 ಕೋಟಿ ರೂ. ಅನ್ನು 4 ಸಾವಿರ ಕೋಟಿ ರೂ.ಗೆ ಇಳಿಸಿದ್ದು, ಕಳೆದ 10 ತಿಂಗಳಿನಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡದಿರುವುದು, ಬಡ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಪೂರೈಸದೆ ಕಾಂಗ್ರೆಸ್ ಚೊಂಬು ನೀಡಿದೆ ಎಂದು ಆರೋಪಿಸಿದರು.

    ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಕೇಂದ್ರ ಸರ್ಕಾರದಿಂದ 37 ಸಾವಿರ ಕೋಟಿ ರೂ. ಬರಬೇಕಿದೆ ಎಂಬ ಹೇಳಿಕೆ ನೀಡಿದ್ದರು. ಆದರೆ, ಫೆಬ್ರವರಿ ಅಂತ್ಯದೊಳಗೆ 37,600 ಕೋಟಿ ರೂ. ಬಂದಿದೆ. ಆದರೂ ಸುಳ್ಳು ಮುಂದುವರೆಸಿದ್ದಾರೆ ಎಂದು ಕಿಡಿಕಾರಿದರು.

    ರಾಜ್ಯದಲ್ಲಿ 2.38 ಲಕ್ಷ ಕೋಟಿ ರೂ. ಸಂಗ್ರಹಿಸುವುದಾಗಿ ಹೇಳಿ, ಈಗ 2.05 ಲಕ್ಷ ಕೋಟಿ ರೂ. ಸಂಗ್ರಹಿಸಿದ್ದು, ಕೇಂದ್ರದ ಮೇಲೆ ಬೊಟ್ಟು ಮಾಡುವುದು ಎಷ್ಟು ಸರಿ. ತನ್ನ ವೈಫಲ್ಯ ಮುಚ್ಚಿಡಲು ಸಿಎಂ ಮೋದಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಸಚಿವ ಸಂಪುಟದಲ್ಲಿ ಒಬ್ಬರೂ ಬಂಜಾರ ಸಮುದಾಯದವರಿಲ್ಲ. ಈ ಬಾರಿ ಒಬ್ಬರಿಗೂ ಟಿಕೆಟ್ ನೀಡಿಲ್ಲ. ತಾಳಿ ಸುರಕ್ಷಿತವಾಗಿ ಇದೆಯೇ ಎಂಬ ಆತಂಕ ಸ್ತ್ರೀಯರನ್ನು ಕಾಡುತ್ತಿದೆ. ದೇಶ ಆತಂಕವಾದಿಗಳ ತೋಟ ಆಗಿಸದೇ ಶಾಂತಿಯ ತೋಟವಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದರು.

    ಮಾಜಿ ಸಚಿವ ಬೆಳ್ಳುಬ್ಬಿ, ಶಾಸಕರಾದ ರಾಜೇಶ್ ನೇಮಿಚಂದ್, ಕೃಷ್ಣನಾಯ್ಕ, ಮಾಯಕೊಂಡ ಮಾಜಿ ಶಾಸಕ ಬಸವರಾಜ ನಾಯ್ಕ್, ಡಾ.ಚಿತ್ರಲಮಾಣಿ, ಶಂಕರ್ ನಾಯ್ಕ್, ಮೃತುಂಜಯ ಬಾದಾಮಿ, ನಾಗರಾಜ್ ಬೇದ್ರೇ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts