More

    ರಾಜಸ್ಥಾನಕ್ಕೆ ಪ್ರಯಾಣ ಬೆಳೆಸಿದ ಕಾರ್ವಿುಕರು

    ಹುಬ್ಬಳ್ಳಿ: ಇಲ್ಲಿಯ ವಾಯವ್ಯ ಸಾರಿಗೆ ಸಂಸ್ಥೆಅಧ್ಯಕ್ಷ ವಿ.ಎಸ್. ಪಾಟೀಲ್ ಸೋಮವಾರ ನಗರದ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ನಗರದಲ್ಲಿ ಸಿಲುಕಿಕೊಂಡಿರುವ ಅನ್ಯ ರಾಜ್ಯಗಳ ವಲಸಿಗ ಕಾರ್ವಿುಕರಿಗೆ ತಮ್ಮ ರಾಜ್ಯಕ್ಕೆ ಮರಳಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಒಪ್ಪಂದದ ಬಸ್​ಗಳ ಕಾರ್ಯುಚರಣೆ ಹಾಗೂ ಪ್ರಕ್ರಿಯೆ ಪರಿಶೀಲಿಸಿದರು.

    ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ಹಾಗೂ ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ ಕಾರ್ಯಾಚರಣೆಯ ಮಾಹಿತಿ ನೀಡಿದರು.

    ಸೋಮವಾರ ಒಪ್ಪಂದದ ಎರಡು ಬಸ್​ಗಳಲ್ಲಿ 47 ವಲಸಿಗ ಕಾರ್ವಿುಕರು ಹುಬ್ಬಳ್ಳಿಯಿಂದ ರಾಜಸ್ಥಾನಕ್ಕೆ ತೆರಳುತ್ತಿದ್ದಾರೆ. ಸಾವಿರಾರು ಕಿ.ಮೀ. ಕ್ರಮಿಸಬೇಕಾದ್ದರಿಂದ ಹೊಸ ಬಸ್​ಗಳೊಂದಿಗೆ ಮಾರ್ಗದ ಮಾಹಿತಿ ಇರುವ ಹಾಗೂ ಹಿಂದಿ ಭಾಷೆ ಬಲ್ಲ ಇಬ್ಬರು ಅನುಭವಿ ಚಾಲಕರನ್ನು ನಿಯೋಜಿಸಲಾಗಿದೆ. ಈವರೆಗೆ ಹುಬ್ಬಳ್ಳಿಯಿಂದ 8 ಬಸ್​ಗಳಲ್ಲಿ ಒಟ್ಟು 192 ಕಾರ್ವಿುಕರು ರಾಜಸ್ಥಾನದ ತಮ್ಮ ಮೂಲಸ್ಥಳಗಳಿಗೆ ತೆರಳಿದ್ದಾರೆ ಎಂದು ವಿವರಿಸಿದರು.

    ವಿ.ಎಸ್. ಪಾಟೀಲ್ ಮಾತನಾಡಿ, ಕರ್ತವ್ಯದ ಸಮಯದಲ್ಲಿ ಸಿಬ್ಬಂದಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಬಸ್​ಗಳ ಶುಚಿತ್ವ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿಗಾ ವಹಿಸಬೇಕು. ಎಲ್ಲ ಪ್ರಯಾಣಿಕರಿಗೆ ಮತ್ತು ಚಾಲಕರಿಗೆ ಕಡ್ಡಾಯವಾಗಿ ಮಾಸ್ಕ್ , ಕೈ ಗವಸು, ಸ್ಯಾನಿಟೈಸರ್ ಬಳಸಲು ಹಾಗೂ ಪರಸ್ಪರ ಅಂತರ ಕಾಯ್ದುಕೊಂಡು ಪ್ರಯಾಣ ಮಾಡಲು ಸಲಹೆ ನೀಡಿದರು.

    ಸಾರ್ವಜನಿಕ ಸಾರಿಗೆ ಪುನಾರಂಭಿಸಲು ಸರ್ಕಾರದಿಂದ ಆದೇಶ ಬಂದ ಕೂಡಲೇ ಮಾರ್ಗಸೂಚಿಗಳ ಪ್ರಕಾರ ಮುಂಜಾಗ್ರತಾ ಕ್ರಮಗಳೊಂದಿಗೆ ಬಸ್​ಗಳ ಸಂಚಾರಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts