More

    ರಾಘವೇಂದ್ರತೀರ್ಥರ ಆರಾಧನಾ ಮಹೋತ್ಸವ ನಾಳೆಯಿಂದ

    ದಾವಣಗೆರೆ: ಶ್ರೀ ಗುರುರಾಜ ಸೇವಾ ಸಂಘದಿಂದ ನಗರದ ಕೆ.ಬಿ.ಬಡಾವಣೆ ದೀಕ್ಷಿತ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.30 ರಿಂದ ಸೆ.2ರವರೆಗೆ ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
    ಆರಾಧನಾ ದಿನಗಳಲ್ಲಿ ಪ್ರಾತಃಕಾಲ 6 ಗಂಟೆಗೆ ಸುಪ್ರಭಾತ, 7ಕ್ಕೆ ಫಲ ಪಂಚಾಮೃತ, 7.30ಕ್ಕೆ ಶ್ರೀ ಹರಿವಾಯು ಸ್ತುತಿ ಪಾರಾಯಣ, ಶ್ರೀ ರಾಘವೇಂದ್ರ ಸ್ತೋತ್ರ, ಅಷ್ಟೋತ್ತರ ಪಾರಾಯಣ, 8ಕ್ಕೆ ಕನಕಾಭಿಷೇಕ, 10.30ಕ್ಕೆ ಉಪನ್ಯಾಸ, 12 ಗಂಟೆಗೆ ಮಹಾನೈವೇದ್ಯ, ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
    ಸಂಜೆ 5.30 ರಿಂದ ದೀವುಟಗಿ ಸೇವೆ, 6.30ಕ್ಕೆ ಪ್ರಾಕಾರ ರಥೋತ್ಸವ, ಅಷ್ಟಾವಧಾನ, ಮಹಾ ಮಂಗಳಾರತಿ, 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 8.30 ರಿಂದ ಪ್ರಸಾದ ವಿನಿಯೋಗ ಕಾರ್ಯಕ್ರಮ ನೆರವೇರಲಿವೆ.
    ಆರಾಧನಾ ಮಹೋತ್ಸವ ಪ್ರಯುಕ್ತ ಆ.30ರಂದು ಸಂಜೆ 6 ಗಂಟೆಗೆ ಗೋ ಪೂಜೆ, ಧ್ವಜಾರೋಹಣ, ಲಕ್ಷ್ಮೀಪೂಜೆ, ಧಾನ್ಯಪೂಜೆ, ಧ್ವಜಾರೋಹಣ, 7ಕ್ಕೆ ರಥೋತ್ಸವ ಜರುಗಲಿದೆ. 31ರಂದು ಸಂಜೆ ಶ್ರೀ ಗುರುರಾಯರ ಪೂರ್ವಾರಾಧನೆ ನಡೆಯಲಿದ್ದು ಸಂಜೆ 7 ಗಂಟೆಗೆ ನಮನ ಅಕಾಡೆಮಿಯ ಡಿ.ಕೆ.ಮಾಧವಿ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ ನಡೆಯಲಿದೆ.
    ಸೆ.1ರಂದು ಶ್ರೀ ಗುರುರಾಯರ ಮಧ್ಯಾರಾಧನೆ ಜರುಗಲಿದ್ದು ಸಂಜೆ 6 ಗಂಟೆಗೆ ರಥೋತ್ಸವ, ಅಷ್ಟಾವಧಾನ, 7 ಗಂಟೆಯಿಂದ ರಾಜಗೋಪಾಲ್ ಭಾಗವತರ್ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
    ಸೆ.2 ರಂದು ಶ್ರೀ ಗುರುರಾಯರ ಉತ್ತರಾರಾಧನೆ ಪ್ರಯುಕ್ತ ಬೆಳಗ್ಗೆ 10.30 ರಿಂದ ರಾಜಬೀದಿಗಳಲ್ಲಿ ವೇದ, ವಾದ್ಯ, ಭಜನೆ, ನಾದಸ್ವರ, ಶ್ರೀಮನ್ಯಾಯ ಸುಧಾಪರಿಮಳ ಗ್ರಂಥದೊಂದಿಗೆ ಶ್ರೀಗುರು ಸಾರ್ವಭೌಮರ ಮಹಾರಥೋತ್ಸವ ಜರುಗಲಿದೆ. ಸಂಜೆ 6 ರಿಂದ ವಿಶ್ವಂಭರ ಆರ್. ಭಾಗವತ್ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts