More

    ರಾಗಿ, ಸಾಮೆ ನಷ್ಟ ಆತಂಕ

    ಬೂದಿಕೋಟೆ: ಸಮೃದ್ಧವಾಗಿ ಬೆಳೆದಿದ್ದ ರಾಗಿ ಹಾಗೂ ಸಾಮೆ ಬೆಳೆಗಳು ಇತ್ತೀಚೆಗೆ ಸುರಿದ ಸತತ ಗಾಳಿ ಸಹಿತ ಮಳೆಗೆ ನೆಲಕಚ್ಚಿದ್ದು, ರೈತರಿಗೆ ಸಲು ನಷ್ಟವಾಗುವ ಆತಂಕ ಕಾಡುತ್ತಿದೆ.

    ಬಂಗಾರಪೇಟೆ ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, 203 ಹೆಕ್ಟೇರ್‌ಗಳಲ್ಲಿ ಶೇಂಗಾ, 9,053 ಹೆಕ್ಟೇರ್ ರಾಗಿ, 420 ಹೆಕ್ಟೇರ್ ತೊಗರಿ, 747 ಹೆಕ್ಟೇರ್ ಅವರೆ, 93 ಹೆಕ್ಟೇರ್ ಅಲಸಂದೆ ಸೇರಿ ಒಟ್ಟು 1,260 ಹೆಕ್ಟರ್‌ಗಳಲ್ಲಿ ದ್ವಿದಳ ಧಾನ್ಯ ಬಿತ್ತನೆಯಾಗಿತ್ತು. ಶೇಂಗಾ ಬೆಳೆ ಬಹುತೇಕ ಕಟಾವು ವಾಡಲಾಗಿದ್ದು, ಹಲವು ಭಾಗಗಳಲ್ಲಿ ಉತ್ತಮ ಇಳುವರಿ ಕಂಡಿದ್ದಾರೆ.

    ಬೆಳೆ ಮಣ್ಣು ಪಾಲು: ಬಹುತೇಕ ರಾಗಿ ಹಾಗೂ ಸಾಮೆ ಬೆಳೆಗಳು ಕಾಳು ಕಟ್ಟುವ ಹಾಗೂ ಹಾಲು ಕಟ್ಟುವ ಹಂತದಲ್ಲಿದ್ದು, ಈ ಬಾರಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಇತ್ತೀಚೆಗೆ ಸುರಿದ ಸತತ ಗಾಳಿ ಸಹಿತ ಮಳೆಯು ದೊಡ್ಡ ಹೊಡೆದ ಕೊಟ್ಟಿದೆ. ಮಳೆಯಿಂದ ಸೊಂಪಾಗಿ ಬೆಳೆದ ಬೆಳೆಗಳು ನೆಲಕ್ಕೆ ಉರುಳಿದ್ದು, ಅನ್ನದಾತ ಕಂಗಾಲಾಗಿದ್ದಾನೆ.

    ಪ್ರತಿ ಜಮೀನಿನಲ್ಲಿ ಅಲ್ಲಲ್ಲಿ ರಾಗಿ ಬೆಳೆ ನೆಲಕ್ಕೆ ಉರುಳಿದ್ದರೆ, ಸಾಮೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಇದರಿಂದ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಲ್ಲಿ ನಿರಾಸೆ ಮೂಡಿದೆ.

    ನಷ್ಟ ತಡೆಯಲು ಪ್ರಯತ್ನ: ನೆಲಕ್ಕೆ ಬಿದ್ದಿರುವ ರಾಗಿ ಬೆಳೆಯನ್ನು ಕಾಪಾಡಿ ನಷ್ಟ ತಡೆಯಲು ಕೂಲಿಯಾಳುಗಳೊಂದಿಗೆ ಐದರಿಂದ ಆರು ಪೈರುಗಳನ್ನು ಒಟ್ಟಿಗೆ ಸೇರಿಸಿ ಗಂಟು ಕಟ್ಟಲು ರೈತರು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೊಮೆ ್ಮಭಾರಿ ಮಳೆಯಾದರೆ ಉಳಿದ ಬೆಳೆಯೂ ಮಣ್ಣು ಪಾಲಾಗಬಹುದು ಎಂಬ ಆತಂಕದಲ್ಲಿ ರೈತ ಕಾಲ ಕಳೆಯುವಂತಾಗಿದೆ.

    ಸಾಲ ವಾಡಿ ಕಷ್ಟಪಟ್ಟು ಬೆಳೆ ಬೆಳೆಯಲಾಗಿದ್ದು, ಫಸಲು ತುಂಬಾ ಚೆನ್ನಾಗಿ ಬಂದು ಕಾಳುಕಟ್ಟುವ ಹಂತದಲ್ಲಿತ್ತು. ಆದರೆ ಇತ್ತೀಚೆಗೆ ಸುರಿದ ಮಳೆಯಿಂದ ನೆಲಕ್ಕೆ ಉರುಳಿದ್ದು, ದಿಕ್ಕು ತೋಚದಂತಾಗಿದೆ.
    ನಾರಾಯಣಪ್ಪ, ಜ್ಯೋತೇನಹಳ್ಳಿ ರೈತ

    ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಬೆಳೆಗಳಿಂದ ಉತ್ತಮ ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಎತ್ತರ ಹಾಗೂ ತೆನೆ ತೂಕ ಅಧಿಕವಾದ ಕಾರಣ ರಾಗಿ ಬೆಳೆ ಗಾಳಿ ಮಳೆಗೆ ನೆಲಕ್ಕೆ ಬಿದ್ದಿದೆ. ನಾಲ್ಕೈದು ಗಿಡಗಳು ಸೇರಿ ಗಂಟು ಕಟ್ಟಿದರೆ ಬೆಳೆ ರಕ್ಷಿಸಬಹುದು.
    ಅಸಿಫ್ ವುಲ್ಲಾ, ಸಹಾಯಕ ಕೃಷಿ ನಿರ್ದೇಶಕ, ಕೃಷಿ ಇಲಾಖೆ, ಬಂಗಾರಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts