More

    ರಾಗಿ ಖರೀಡಿಗೆ ನಿರೀಕ್ಷೆ ಮೀರಿದ ಸ್ಪಂದನೆ; ಬೆಂಬಲ ಬೆಲೆ ಘೋಷಣೆಯಿಂದ ರಾಗಿ ಮಾರಾಟಕ್ಕೆ ಮುಂದಾರ ರೈತರು, 56 ಸಾವಿರ ಕ್ವಿಂಟಲ್​ ರಾಗಿ ಮಾರಾಟ

    ಬೂದಿಕೋಟೆ: ರಾಗಿ ಖರೀದಿ ಕೇಂದ್ರಗಳಲ್ಲಿ ಉತ್ತಮ ಬೆಲೆ ನಿಗದಿ ಮಾಡಿರುವ ಕಾರಣ ರೈತರಿಂದ ನಿರೀೆಗೂ ಮೀರಿದ ಸ್ಪಂದನೆ ದೊರತಿದೆ. ಜಿಲ್ಲೆಯಲ್ಲಿ ಬಂಗಾರಪೇಟೆ ತಾಲೂಕಿನಲ್ಲಿಯೇ ಅತೀ ಹೆಚ್ಚು ರೈತರು ಖರೀದಿ ಕೇಂದ್ರದಲ್ಲಿ ನೋಂದಾಯಿಸಿ ರಾಗಿ ಮಾರಾಟ ಮಾಡಿದ್ದಾರೆ.

    ರೈತರ ಬೆಳೆಗಳಿಗೆ ಸಮರ್ಪಕ ಬೆಲೆ ದೊರೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಬೆಂಬಲ ಬೆಲೆ (ಎಂಎಸ್​ಪಿ) ಘೋಷಿಸಿದೆ. ಅದರಂತೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಆರಂಭಿಸಿರುವ ರಾಗಿ ಖರೀದಿ ಕೇಂದ್ರಕ್ಕೆ ಎರಡು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರಾಗಿ ಮಾರಾಟಕ್ಕೆ ಮುಂದೆ ಬರುತ್ತಿದ್ದಾರೆ. ಮುಕ್ತ ಮಾರುಕಟ್ಟೆಗಳಿಗಿಂತಲೂ ಸುಮಾರು ಎರಡು ಪಟ್ಟು ಬೆಂಬಲ ಬೆಲೆ ನಿಗದಿ ಮಾಡಿರುವುದರಿಂದ ಕೇಂದ್ರಗಳಿಗೆ ದಾಖಲೆಗಳನ್ನು ನೀಡಿ ನೋಂದಾಯಿಸಿಕೊಂಡು ದಲ್ಲಾಳಿಗಳ ಕಾಟ ಇಲ್ಲದೇ ರೈತರೇ ನೇರವಾಗಿ ತಮ್ಮ ಸಲನ್ನು ಮಾರಾಟ ಮಾಡುತ್ತಿದ್ದಾರೆ.

    ಬಂಗಾರಪೇಟೆ ತಾಲೂಕಿನಲ್ಲಿ 2019&20ರಲ್ಲಿ ಸುಮಾರು 500 ರೈತರು ಖರೀದಿ ಕೇಂದ್ರದಲ್ಲಿ ಕೇವಲ 7,242 ಕ್ವಿಂಟಾಲ್​ ರಾಗಿಯನ್ನು 3,150 ರೂ.ಗೆ ಮಾರಾಟ ಮಾಡಿದ್ದರು. 2020&21ನೇ ಸಾಲಿನಲ್ಲಿ ಉತ್ತಮ ಮಳೆಯ ಜತೆಗೆ ಉತ್ತಮ ಬೆಂಬಲ ಬೆಲೆ ನಿಗದಿ ಮಾಡಿರುವುದರಿಂದ ಹೆಚ್ಚು ಏರಿಕೆ ಕಂಡಿತು. ಆ ವರ್ಷದಲ್ಲಿ ಸುಮಾರು 44,829 ಕ್ವಿಂಟಲ್​ ರಾಗಿಯನ್ನು 3,307 ರೂ.ಗೆ ಪ್ರತಿ ಕ್ವಿಂಟಲ್​ ಮಾರಾಟ ಮಾಡಿದ್ದರು. 2021&22ರ ಸಾಲಿನಲ್ಲಿ 4,240 ರೈತರು ನೋಂದಾಯಿಸಿದ್ದು ಈಗಾಗಲೇ 4,071 ರೈತರು ಸುಮಾರು 56,606 ಕ್ವಿಂಟಲ್​ ರಾಗಿಯನ್ನು ಪ್ರತಿ ಕ್ವಿಂಟಲ್​ಗೆ 3,377 ರೂ.ನಂತೆ ಮಾರಾಟ ಮಾಡಿದ್ದು ರಾಗಿ ಬೆಳೆದ ರೈತರು ಖುಷಿಯಾಗಿದ್ದಾರೆ.

    ಈ ಮೊದಲು ರೈತರು ಮುಕ್ತ ಮಾರುಕಟ್ಟೆಯಲ್ಲಿ ಕನಿಷ್ಠ 1,500 ರೂ.ನಿಂದ ಗರಿಷ್ಠ 1,800 ರೂ.ಗಳಿಗೆ ರಾಗಿ ಮಾರಾಟ ಮಾಡುತ್ತಿದ್ದರು. ಯಾವಾಗ ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸಿ 3,377 ರೂ. ಬೆಂಬಲ ಬೆಲೆ ಘೋಷಣೆ ಮಾಡಿತೋ ಆಗ ರಾಗಿ ಬೆಳೆದ ರೈತರ ಮುಖದಲ್ಲಿ ಮಂದಹಾಸ ಮೂಡಿ, ಖರೀದಿ ಕೇಂದ್ರಗಳತ್ತ ಮುಖಮಾಡಿದರು. ರೈತರು ಅವಕಾಶ ಕೇಳಿದ ಕಾರಣದಿಂದ ಎರಡನೇ ಬಾರಿಗೆ ರಾಗಿ ಖರೀದಿಗೆ ಅವಕಾಶ ಕಲ್ಪಿಸಿದ್ದರು. ಖರೀದಿ ಮಾಡಿದ ರಾಗಿಯ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ.

    ರೈತರಿಂದ ಖರೀದಿ ಮಾಡಿದ ರಾಗಿಯನ್ನು ಪುನ@ ರೈತರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಜೂನ್​ನಲ್ಲಿ ಅಕ್ಕಿಯ ಜತೆಗೆ ಪ್ರತಿಯೊಬ್ಬರಿಗೆ 4 ಕೆ.ಜಿ ರಾಗಿ ನೀಡಲಾಗುತ್ತಿದ್ದು, ಜುಲೈ ತಿಂಗಳಿನಲ್ಲಿ ತಲಾ 5 ಕೆ.ಜಿ ವಿತರಣೆಯಾಗುವ ಸಾಧ್ಯತೆ ಇದೆ.

    ತಾಲೂಕು ನೊಂದಣಿ ಮಾಡಿದ ರೈತರ ಸಂಖ್ಯೆ ಮಾರಾಟವಾದ ರಾಗಿ
    ಬಂಗಾರಪೇಟೆ 4,240 5,6606
    ಮಾಲೂರು 2,978 39,745
    ಮುಳಬಾಗಿಲು 512 6,033
    ಶ್ರೀನಿವಾಸಪುರ 741 8,260
    ಕೆಜಿಎ್​ 279 3,231
    ಕೋಲಾರ 4,030 50,048
    ಒಟ್ಟು 12,780 1,63,923

    ಸರ್ಕಾರ ರೈತರಿಂದ ನೇರವಾಗಿ ರಾಗಿ ಖರೀದಿ ಮಾಡುತ್ತಿರುವ ಕಾರಣ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ಬಾರಿ ಖರೀದಿಗೆ ದಿನಾಂಕವನ್ನು ಹೆಚ್ಚು ಮಾಡಿ ಅವಕಾಶ ನೀಡಲಾಗಿತ್ತು. ಇದರಿಂದ ರೈತರು ದಲ್ಲಾಳಿಗಳ ಪ್ರಮೇಯವಿಲ್ಲದೆ ನೇರವಾಗಿ ಖರೀದಿ ಕೇಂದ್ರಗಳಲ್ಲಿ ರಾಗಿ ಮಾರಾಟ ಮಾಡಿದ್ದಾರೆ.
    | ಎಚ್​.ಡಿ ಸೋಮಶಂಕರಪ್ಪ, ಸಹಾಯಕ ನಿರ್ದೇಶಕರು,
    ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಕೋಲಾರ

    ಖರೀದಿ ಕೇಂದ್ರದಲ್ಲಿ ನೋಂದಣಿಯಾದ ರೈತರಿಂದ ರಾಗಿ ಪಡೆಯಲಾಗುತ್ತಿದೆ. ಈ ಬಾರಿ ರೈತರಿಗೆ ಪ್ರತಿ ಕ್ವಿಂಟಲ್​ ರಾಗಿಗೆ 3,377 ರೂ. ನಿಗದಿ ಮಾಡಲಾಗಿದ್ದು, ಖರೀದಿಯ ಹಣ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ರಾಗಿ ಮಾರಾಟ ಮಾಡದ ರೈತರು ಆದಷ್ಟು ಬೇಗ ನೋಂದಾಯಿಸಿ ಮಾರಾಟಕ್ಕೆ ಮುಂದಾಗಬೇಕು. ರೈತರಿಗೆ ಕಳೆದ ಬಾರಿ ಹೆಚ್ಚುವರಿಯಾಗಿ ಗೋಣಿ ಚೀಲದ ಹಣ ನೀಡಲಾಗಿತ್ತು. ಆದರೆ ಈ ಬಾರಿ ಗೋಣಿ ಚೀಲವನ್ನು ರೈತರಿಗೆ ಹಿಂದಿರುಗಿಸಲಾಗುತ್ತದೆ.
    | ಕಲೀಂ ಉಲ್ಲಾ ಷರೀಫ್​, ಖರೀದಿ ಅಧಿಕಾರಿ,
    ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಬಂಗಾರಪೇಟೆ.

    ಬೆಂಬಲ ಬೆಲೆಯೊಂದಿಗೆ ಸರ್ಕಾರವೇ ನೇರವಾಗಿ ರಾಗಿ ಖರೀದಿ ಮಾಡುತ್ತಿರುವುದು ಒಳ್ಳೆಯದು. ಖಾತೆಗಳಿಗೆ ಹಣವನ್ನು ತಡವಾಗಿ ಜಮಾ ಮಾಡುತ್ತಿರುವ ಕಾರಣ ರೈತರಿಗೆ ಕಷ್ಟವಾಗುತ್ತಿದ್ದು, ಈ ಬಾರಿ ಆದಷ್ಟು ಬೇಗ ಹಣ ನೀಡಿದರೆ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲಿದೆ.
    | ರಮೇಶ್​, ರೈತ ಬೂದಿಕೋಟೆ

    19 ಬೂದಿಕೋಟೆ 1
    ಬಂಗಾರಪೇಟೆಯ ಕೆಎಫ್​ಸಿಎಸ್​ಸಿ ರಾಗಿ ಕೇಂದ್ರದ ಗೋದಾಮಿನಲ್ಲಿ ರೈತರಿಂದ ಖರೀದಿಸಿದ ರಾಗಿಯನ್ನು ಶೇಖರಣೆ ಮಾಡಲಾಗಿದೆ.

    19 ಬೂದಿಕೋಟೆ 2
    ಖರೀದಿ ಮಾಡಿದ ರಾಗಿಯನ್ನು ಜನರಿಗೆ ವಿತರಣೆ ಮಾಡಲು ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡುತ್ತಿರುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts