More

    ರಸ್ತೆ ದುರಸ್ತಿಗೆ ಆಗ್ರಹಿಸಿ ಕರವೇ ಪ್ರತಿಭಟನೆ

    ಗಜೇಂದ್ರಗಡ: ಪಟ್ಟಣದಿಂದ ರೋಣ, ನರೇಗಲ್, ಗದಗ ಸಂಪರ್ಕ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ಗದಗ ರಸ್ತೆಯಲ್ಲಿ ಗುರುವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

    ಪಟ್ಟಣದಿಂದ ನರೇಗಲ್ ಮಾರ್ಗವಾಗಿ ಗದಗ ಸಂರ್ಪಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಸಂಸದ ಶಿವಕುಮಾರ ಉದಾಸಿ ಅವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಹಿಂದೆ ಪ್ರತಿಭಟನೆ ನಡೆಸಿದಾಗ ಪಿಡಿಬ್ಲ್ಯುಡಿ ಅಧಿಕಾರಿಗಳು ನೀಡಿದ ಭರವಸೆ ಹುಸಿಯಾಗಿದೆ. ರಸ್ತೆ ದುರಸ್ತಿಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಇದರಿಂದ ಕೆಲಕಾಲ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು.

    ಸ್ಥಳಕ್ಕಾಗಮಿಸಿದ ಪಿಡಿಬ್ಲ್ಯುಡಿ ರೋಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಐ.ಎಸ್. ಹೊಸೂರ ಮಾತನಾಡಿ, ಗದಗ ರಸ್ತೆಯಲ್ಲಿ 3.5 ಕಿಮೀ ರಸ್ತೆ ನಿರ್ವಣಕ್ಕೆ ಇನ್ನೊಂದು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ. ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಎಚ್.ಎಸ್. ಸೋಂಪುರ, ರಾಜು ಸಾಂಗ್ಲೀಕರ, ರಜಾಕ ಡಾಲಾಯತ, ಹನುಮಂತ ಅಬ್ಬಿಗೇರಿ, ರವಿ ಗುಗಲೋತ್ತರ, ಬುಡ್ಡಾ ಮುಜಾವರ, ವೀರೇಶ ಸಂಗಮದ, ಪಾಶಾ ಗಂಗಾವತಿ, ರಾಚಯ್ಯ ಬಾಳಿಕಾಯಿಮಠ, ತಾಪಂ ಉಪಾಧ್ಯಕ್ಷ ಶಶಿಧರ ಹೂಗಾರ, ಪುರಸಭೆ ಸದಸ್ಯರಾದ ವೆಂಕಟೇಶ ಮುದಗಲ್, ಮುರ್ತಜಾ ಡಾಲಾಯತ, ಪ್ರಶಾಂತ ರಾಠೋಡ, ಬಸವರಾಜ ಚನ್ನಿ, ಅನಿಲ ಕರ್ಣೆ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts