More

    ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

    ಮುಂಡಗೋಡ: ಪಟ್ಟಣದ ಮಹಾಲೆ ಮಿಲ್ ಬಳಿಯ ರಸ್ತೆ ತೀರಾ ಹದಗೆಟ್ಟಿದ್ದು, ಅಪಘಾತಗಳು ಸಂಭವಿಸುತ್ತಿವೆ. ಮಂಗಳವಾರ ಯುವಕನೊಬ್ಬ ಅಪಘಾತಕ್ಕೀಡಾಗಿದ್ದು, ನಾಗರಿಕರು ಲೋಕೋಪಯೋಗಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಅಪಘಾತದಲ್ಲಿ ಆನಂದ ನಗರದ ನಿವಾಸಿ ಮಂಜುನಾಥ ತಳವಾರ ಎಂಬುವವರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದರು. ರಸ್ತೆಯಲ್ಲಿ ದೊಡ್ಡ-ದೊಡ್ಡ ಗುಂಡಿಗಳಿದ್ದು, ಯುವಕನ ಸಾವಿಗೆ ಪಿಡಬ್ಲು್ಯಡಿ ನೇರ ಹೊಣೆ. ಕಳೆದ 3-4 ತಿಂಗಳಿಂದ ರಸ್ತೆ ದುರಸ್ತಿಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಅವರ ಬೇಜವಾಬ್ದಾರಿಯಿಂದ ಬಡ ಕುಟುಂಬದ ಯುವಕ ಜೀವ ಕಳೆದುಕೊಂಡಿದ್ದಾನೆ. ಬೇಜವಾಬ್ದಾರಿ ತೋರಿರುವ ಅಧಿಕಾರಿ ಹಾಗೂ ಗುತ್ತಿಗೆದಾರರು ಮೃತ ಯುವಕನ ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಇತ್ತೀಚೆಗೆ ಇದೇ ಜಾಗದಲ್ಲಿ ಬೈಕ್ ಸವಾರನೊಬ್ಬ ಬಿದ್ದು ಗಾಯಗೊಂಡಿದ್ದಾನೆ. ಒಬ್ಬ ಯುವಕ ಕೋಮಾ ಸ್ಥಿತಿಗೆ ಹೋಗಿದ್ದಾನೆ. ಮಂಗಳವಾರ ರಾತ್ರಿ ಕಾರೊಂದು ರಸ್ತೆ ಬದಿಯ ಬೇಲಿಯಲ್ಲಿ ಸಿಲುಕಿಕೊಂಡಿದೆ. ಇಷ್ಟೆಲ್ಲ ನಡೆದರೂ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಎಇಇ ದಯಾನಂದ ಬಿ.ಆರ್. ಅವರನ್ನು ತರಾಟೆಗೆ ತೆಗೆದುಕೊಂಡರು.

    ಪ್ರತಿಕ್ರಿಯಿಸಿದ ದಯಾನಂದ, ಶೀಘ್ರವೇ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು. ಜತೆಗೆ ಅನಾಹುತ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

    ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ, ಫಣಿರಾಜ ಹದಳಗಿ, ಶೇಖರ ಲಮಾಣಿ, ಮಂಜುನಾಥ ಹರಮಲಕರ, ಪ್ರಕಾಶ ಬಡಿಗೇರ, ಮಂಜುನಾಥ ಹರಿಜನ, ವಿಠ್ಠಲ ಬಾಳಂಬೀಡ, ಮಂಜುನಾಥ ಶೇಟ್, ?ಣ್ಮುಖ ಕೋಳೂರ, ಕಿರಣ ಶೇರಖಾನೆ, ವಿಶ್ವನಾಥ ಭಜಂತ್ರಿ, ಬಾಬುರಾವ ವಾಲ್ಮೀಕಿ, ಚನ್ನಪ್ಪ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts