More

    ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

    ರಟ್ಟಿಹಳ್ಳಿ: ರಟ್ಟಿಹಳ್ಳಿ-ಚಿಕ್ಕಯಡಚಿ ರಸ್ತೆ ಡಾಂಬರೀಕರಣ ಮತ್ತಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪಟ್ಟಣದ ಹೊಸ ಬಸ್ ನಿಲ್ದಾಣದ ವೃತ್ತದ ಬಳಿ ವಾಹನ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರಟ್ಟಿಹಳ್ಳಿ-ಚಿಕ್ಕಯಡಚಿ ಮಾರ್ಗವಾಗಿ ಕೋಡ ಗ್ರಾಮ ಸಂರ್ಪಸುವ ಪ್ರಮುಖ ರಸ್ತೆ ಹದಗೆಟ್ಟು 20 ವರ್ಷಗಳಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಈ ರಸ್ತೆಯಲ್ಲಿ ಬರೀ ತಗ್ಗು-ಗುಂಡಿಗಳೇ ಕಾಣುತ್ತಿವೆ. ಕೂಡಲೆ ರಸ್ತೆ ಡಾಂಬರೀಕರಣ ಮಾಡಬೇಕು. ರಸ್ತೆ ಬದಿಯ ಕಂಬಗಳಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳನ್ನು ಹೆಸ್ಕಾಂನವರು ದುರಸ್ತಿಪಡಿಸಬೇಕು. ಚಿಕ್ಕಯಡಚಿ ಗ್ರಾಮದ ಆರೋಗ್ಯ ಉಪಕೇಂದ್ರದಲ್ಲಿ ಕಾಯಂ ನರ್ಸ್​ಗಳನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು.

    ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಎಸ್.ವಿ. ಪುರಾಣಿಕ ಮಾತನಾಡಿ, ಇನ್ನೊಂದು ತಿಂಗಳಲ್ಲಿ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದರು.

    ಹೆಸ್ಕಾಂ ಶಾಖಾಧಿಕಾರಿ ಸುರೇಶ ನಾಯ್ಕ ಮಾತನಾಡಿ, ಜೋತು ಬಿದ್ದ ವಿದ್ಯುತ್ ತಂತಿಗಳ ದುರಸ್ತಿ ಮತ್ತು ಬದಲಾವಣೆಗಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.

    ತಾಲೂಕು ವೈದ್ಯಾಧಿಕಾರಿ ಡಾ. ಜೆಡ್.ಆರ್. ಮಕಂದರ ಮಾತನಾಡಿ, 5 ದಿನಗಳಲ್ಲಿ ಚಿಕ್ಕಯಡಚಿ ಗ್ರಾಮದ ಆರೋಗ್ಯ ಉಪಕೇಂದ್ರಕ್ಕೆ ನರ್ಸ್ ಒಬ್ಬರನ್ನು ನಿಯೋಜಿಸಲಾಗುವುದು ಎಂದರು.

    ರೈತ ಸಂಘದ ಚಿಕ್ಕಯಡಚಿ ಗ್ರಾಮ ಘಟಕಾಧ್ಯಕ್ಷ ಮಂಜನಗೌಡ ಸಣ್ಣಗೌಡ್ರ, ನಾಗಪ್ಪ ದೊಡ್ಡಬಸಪ್ಪಳವರ, ಶಂಭು ಮುತ್ತಗಿ, ಬಸವರಾಜ ದೊಡ್ಡಬಸಪ್ಪಳವರ, ಚನ್ನಬಸಪ್ಪ ಬಸನಾಳ, ಶಿವಕುಮಾರ ಸಣ್ಣಗೌಡ್ರ, ಶಿದ್ದನಗೌಡ ಗುಬ್ಬೇರ, ಬಸನಗೌಡ ಗಂಗಪ್ಪಳವರ, ಮಂಜು ನಾಗವಂದ, ಪ್ರಭುಗೌಡ ದ್ಯಾವಕ್ಕಳವರ, ಚಂದ್ರಪ್ಪ ಅಂಗಡಿ, ಮಲ್ಲೇಶಪ್ಪ ಗುಬ್ಬೇರ, ಮಂಜಪ್ಪ ಬಾಗೋಡಿ, ಶಿವಬಸಪ್ಪ ದೊಡ್ಡಬಸಪ್ಪಳವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts