More

    ರಸ್ತೆ ಗುಂಡಿ ಮುಚ್ಚುವರೇ?, ಹುಬ್ಬಳ್ಳಿ ವಿದ್ಯಾನಗರ ಅಮೃತ ಥೇಟರ್ ಕ್ರಾಸ್ ರಸ್ತೆಯಲ್ಲಿ ಜನರ ಯಾತನೆ

    ಹುಬ್ಬಳ್ಳಿ: ಇದು ಹುಬ್ಬಳ್ಳಿ- ಧಾರವಾಡ ಅವಳಿನಗರ ಮಧ್ಯದ ಮುಖ್ಯ ರಸ್ತೆ. ಇದನ್ನು ಅಭಿವೃದ್ಧಿ ಪಡಿಸಿ ಕೆಲವೇ ವರ್ಷಗಳು ಕಳೆದಿವೆ. ಆದರೆ, ಅಲ್ಲಲ್ಲಿ ತೆಗ್ಗು ಗುಂಡಿಗಳು ಆಗಲೇ ಗೋಚರವಾಗುತ್ತಿವೆ. ಪ್ರಯಾಣಿಕರು, ವಾಹನ ಸವಾರರಿಗೆ ನಿತ್ಯ ಯಾತನೆ ನೀಡುತ್ತಿವೆ.

    ಇಲ್ಲಿಯ ವಿದ್ಯಾನಗರ ಅಮೃತ ಥೇಟರ್ ಬಳಿಯಲ್ಲಿ ಕಿಮ್್ಸ ಹಿಂಬದಿ ರಸ್ತೆಯು ಮುಖ್ಯ ರಸ್ತೆಗೆ ಕೂಡುವಲ್ಲಿ ಹಲವು ದಿನಗಳಿಂದ ಗುಂಡಿ ಬಿದ್ದಿದೆ. ಸರಿಯಾಗಿ ಕೂಡು ರಸ್ತೆಯ ಮಧ್ಯದಲ್ಲೇ ಇರುವುದರಿಂದ ಕಾರು, ಬೈಕ್ ಸವಾರರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

    ಕಿಮ್್ಸ ಕಡೆಯಿಂದ ಏಕಾಏಕಿ ಮುಖ್ಯ ರಸ್ತೆಗೆ ವಾಹನಗಳು ಬರುವುದರಿಂದ ಅಪಘಾತಗಳಾಗುವ ಸಂಭವ ಒಂದೆಡೆಯಾದರೆ, ಬೈಕ್, ಕಾರಿನ ಬ್ಯಾಲನ್ಸ್ ತಪ್ಪಿ ಕೆಲವೊಮ್ಮೆ ಸ್ವತಃ ಅಪಘಾತಕ್ಕೆ ಈಡಾಗುವ ಪ್ರಸಂಗ ಎದುರಾಗುತ್ತಿದೆ. ಈ ಗುಂಡಿ ಸರಿಯಾಗಿ ವಿದ್ಯಾನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಂಪೌಂಡ್ ಬಳಿಯಲ್ಲಿಯೇ ಇದೆ.

    ಮೂರ್ನಾಲ್ಕು ತಿಂಗಳಿಂದ ಚಿಕ್ಕದಾಗಿದ್ದ ರಸ್ತೆ ಗುಂಡಿಯು ದಿನ ಕಳೆದಂತೆ ಆಳವಾಗುತ್ತ ಹೋಗಿದೆ. ಈಗ ಅದರ ಆಳ ಒಂದು ಅಡಿ ಇರಬಹುದು. ಸಣ್ಣ ಕಾರುಗಳು ಕೆಲವೊಮ್ಮೆ ಗುಂಡಿಗೆ ಇಳಿದಾಗ ಚಸ್ಸಿ ನೆಲಕ್ಕೆ ತಾಗಿ ಪರದಾಡಿದ ಪ್ರಸಂಗಗಳು ಜರುಗಿವೆ.

    ಇಷ್ಟೆಲ್ಲ ಇದ್ದರೂ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಈ ರಸ್ತೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದನ್ನು ಗಮನಿಸಿಲ್ಲ. ಬಹುತೇಕ ಸರ್ಕಾರಿ ವಾಹನಗಳು ನುಣುಪಾದ ಬಿಆರ್​ಟಿಎಸ್ ಕಾರಿಡಾರ್​ನಲ್ಲಿ ಸರ›ನೇ ಹೋಗಿ ಬಿಡುತ್ತವೆ. ಹಾಗಾಗಿ ಅವರಿಗೆ ಸಾಮಾನ್ಯ ಜನರು ರಸ್ತೆ ಗುಂಡಿಯಲ್ಲಿ ಬಿದ್ದು ಒದ್ದಾಡುವುದು ಕಾಣುವುದಿಲ್ಲ ಎಂದು ಜನರು ಟೀಕಿಸುತ್ತಾರೆ.

    ಇಂತಹ ಹಲವು ಗುಂಡಿಗಳು ರಸ್ತೆಯಲ್ಲಿ ಕಾಣಸಿಗುತ್ತವೆ. ಇನ್ನು ಬಿಆರ್​ಟಿಎಸ್ ಪಕ್ಕದ ಮಿಶ್ರ ಪಥದಲ್ಲಿ ಕೆಲವೆಡೆ ಪೈಪ್​ಲೈನ್ ಹಾಗೂ ಕೇಬಲ್ ಸಲುವಾಗಿ ಆಳುದ್ದದ ಚೇಂಬರ್​ಗಳನ್ನು ಮಾಡಿ ಮುಚ್ಚಳಗಳನ್ನು ಹಾಕಲಾಗಿದೆ. ಮುಚ್ಚಳಗಳು ಅರ್ಧ ಅಡಿಯಷ್ಟು ಕೆಳಗೆ ಇಳಿದಿರುವುದರಿಂದ ಅನೇಕ ಅಪಘಾತಗಳಿಗೆ ಕಾರಣವಾಗುತ್ತಿವೆ. ಹೊಸೂರ, ವಿದ್ಯಾನಗರ ಭಾಗದಲ್ಲಿ ಇಂತಹ ಮುಚ್ಚಳಗಳು ಕಂಡು ಬರುತ್ತವೆ.

    ಉಣಕಲ್ಲ ಕೆರೆ ಬಸ್ ನಿಲ್ದಾಣ ಬಳಿಯ ಆರ್​ಎನ್​ಎಸ್ ಮೋಟರ್ಸ್ ಎದುರು ಚೇಂಬರ್ ಮುಚ್ಚಳ ಕೆಳಗೆ ಕುಸಿದಿದ್ದು, ಅಲ್ಲಿಯೂ ಅವಘಡಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.

    ಹೀಗೆ, ಅವಳಿನಗರ ಮಧ್ಯದ ರಸ್ತೆಯು ಎಂಟು ಪಥವಾಗಿದ್ದರೂ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಕಿರಿಕಿರಿಯ ಮಾರ್ಗವಾಗಿ ಪರಿಣಮಿಸಿದೆ. ಟ್ರಾಫಿಕ್ ಸಮಸ್ಯೆ ಕಾಯಂ ಆಗಿರುತ್ತದೆ ಎಂದು ಸ್ಥಳೀಯರಾದ ಸಚಿನ್ ಇಕ್ಕಲಮಾರ್, ರಾಜೇಶ ಎಚ್, ಚನ್ನಪ್ಪ ಎನ್. ಇತರರು ದೂರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts