More

    ರಸ್ತೆ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ

    ಕುಮಟಾ: ತಾಲೂಕಿನ ಮಿರ್ಜಾನದ ಐತಿಹಾಸಿಕ ಕೋಟೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ತಡೆ ಒಡ್ಡಿರುವ ಪ್ರಾಚ್ಯವಸ್ತು ಇಲಾಖೆ ಕ್ರಮದಿಂದಾಗಿ ಸಾರ್ವಜನಿಕರಿಗೆ ತೀರಾ ಸಮಸ್ಯೆಯಾಗಿದೆ. ಕೂಡಲೆ ಪ್ರಾಚ್ಯವಸ್ತು ಇಲಾಖೆಯಿಂದ ಅನುಮತಿ ಕೊಡಿಸಿ, ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಶಾಸಕ ದಿನಕರ ಶೆಟ್ಟಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

    ಮಿರ್ಜಾನ ಕೋಟೆ ರಸ್ತೆಯು ಪ್ರವಾಸಿಗರಿಗೆ ಮಾತ್ರವಲ್ಲದೆ, ಈ ಭಾಗದ ನೂರಾರು ಮನೆಗಳಿಗೆ ಸಂಪರ್ಕ ಕೊಂಡಿಯೂ ಹೌದು. ರಸ್ತೆಯಲ್ಲಿ ವಾಹನಗಳ ಓಡಾಟ, ಜನರು ನಡೆದಾಡಲು ಕೂಡ ಕಷ್ಟ ಅನ್ನುವಷ್ಟರ ಮಟ್ಟಿಗೆ ಜಲ್ಲಿ, ಕಲ್ಲುಗಳೆದ್ದು ಅಪಾಯಕಾರಿಯಾಗಿದೆ. ಜನರ ಒತ್ತಾಸೆ ಮೇರೆಗೆ ಮಂಜೂರಾದ ಹಣದಲ್ಲಿ ಆರಂಭವಾದ ರಸ್ತೆ ಕಾಮಗಾರಿಯನ್ನು ಕೋಟೆ ಬಳಿ ಪ್ರಾಚ್ಯವಸ್ತು ಇಲಾಖೆಯವರು ತಡೆದು ಸ್ಥಗಿತಗೊಳಿಸಿದ್ದಾರೆ. ಪ್ರಾಚ್ಯವಸ್ತು ಇಲಾಖೆಯ ಅನುಮತಿ ಪಡೆಯದ ಹೊರತು ಕಾಮಗಾರಿ ನಡೆಸುವುದು ಅಸಾಧ್ಯ. ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಾರ್ವಜನಿಕರು ಶಾಸಕರಲ್ಲಿ ವಿನಂತಿಸಿದರು.

    ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ದಿನಕರ ಶೆಟ್ಟಿ, ಪ್ರವಾಸೋದ್ಯಮ ಇಲಾಖೆಯಿಂದ 40 ಲಕ್ಷ ರೂ. ಅನುದಾನ ಒದಗಿಸಿ ಕೋಟೆ ರಸ್ತೆ ಅಭಿವೃದ್ಧಿಗೆ ಅನುಕೂಲ ಮಾಡಲಾಗಿತ್ತು. ಆದರೆ, ಪ್ರಾಚ್ಯವಸ್ತು ಇಲಾಖೆ ಯಾವ ಕಾರಣಕ್ಕೆ ಕಾಮಗಾರಿ ತಡೆಹಿಡಿದಿದೆ ಎಂಬುದನ್ನು ತಿಳಿದು ಸಮಸ್ಯೆ ಬಗೆಹರಿಸಲು ಮೇಲಧಿಕಾರಿಗಳ ಜತೆಗೆ ಮಾತುಕತೆ ನಡೆಸುತ್ತೇನೆ. ಸಮಸ್ಯೆ ಬಗೆಹರಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು. ಮಿರ್ಜಾನದ ಗಣೇಶ ಅಂಬಿಗ, ಬಾಳ ಡಿಸೋಜಾ, ದಯಾನಂದ ಪಟಗಾರ, ಪುರುಷೋತ್ತಮ, ಯುವ ಬಳಗದ ಗೋವಿಂದ, ಶಿವಾನಂದ ಪಟಗಾರ, ರವಿ, ಭಾಸ್ಕರ, ಶಿವಾನಂದ, ಮಂಜುನಾಥ, ರಾಜೇಶ, ಗಣೇಶ, ಚಂದ್ರಶೇಖರ, ಕೃಷ್ಣ, ದಿನೇಶ, ವಿದ್ಯಾಧರ, ನವೀನ, ವಿನಾಯಕ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts