More

    ರಸ್ತೆಗಿಳಿದ ವಾಹನಗಳು ಜಪ್ತಿ

    ಕಲಬುರಗಿ: ಕರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಜಾರಿಗೊಳಿಸಿರುವ ಲಾಕ್ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಲ್ಲದೆ ಹಲವರಿಗೆ ಊಟ್ ಬೈಟ್' ಮತ್ತುಕೋಳಿ ಕೂರುವ ಶಿಕ್ಷೆ’ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರು. ಅಲ್ಲಲ್ಲಿ ಲಾಠಿ ಏಟಿನ ರುಚಿಯೂ ತೋರಿಸಿದರು.
    ಸಾರ್ವಜನಿಕರಿಂದ ನಿರೀಕ್ಷಿತ ಸ್ಪಂದನೆ ಸಿಗದಿರುವುದರಿಂದ ವಿಸ್ತರಣೆಗೊಂಡ ಲಾಕ್ಡೌನ್ ಪರಿಣಾಮಕಾರಿ ಆಗಿಸಲು ಪೊಲೀಸರು ಕಾರ್ಯಾ ಚರಣೆ ಚುರುಕುಗೊಳಿಸಿದ್ದಾರೆ. ಅಗತ್ಯ ವಸ್ತುಗಳ ಅಂಗಡಿಗಳಿಗೆ ನೀಡಿರುವ ವಿನಾಯಿತಿಯಂತೆ ಮಧ್ಯಾಹ್ನ 2ರ ಬಳಿಕ ಬಂದ್ ಮಾಡಿಸಲು ಪೊಲೀಸರು ಎಲ್ಲೆಡೆ ಸೈರನ್ ಹಾಕಲು ಶುರುವಿಟ್ಟರು. ಆಸ್ಪತ್ರೆ, ಮೆಡಿಕಲ್ ಶಾಪ್ಗಳಿಗೆ ಲಾಕ್ಡೌನ್ನಿಂದ ವಿನಾಯ್ತಿ ಇದೆ.
    ಜನರು ತಮಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 2ರವರೆಗೂ ಅವಕಾಶ ಕಲ್ಪಿಸಿದ್ದರೂ ರಸ್ತೆಗಳಲ್ಲಿ ವಾಹನಗಳ ಓಡಾಟ ರಾತ್ರಿವರೆಗೂ ನಡೆದಿತ್ತು. ಹೀಗಾಗಿ ಪೊಲೀಸರು ಲಾಕ್ಡೌನ್ ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಇನ್ನಿಲ್ಲದ ಶ್ರಮ ಹಾಕುತ್ತಿದ್ದಾರೆ.
    ಸೋಮವಾರ ಜಗತ್ ವೃತ್ತದಲ್ಲಿ ಡಿಸಿಪಿ ಕಿಶೋರಬಾಬು ನೇತೃತ್ವದಲ್ಲಿ ಸಂಚಾರ ವಿಭಾಗದ ಎಸಿಪಿ ವೀರೇಶ ಕರಡಿಗುಡ್ಡ, ಇನ್ಸ್ಪೆಕ್ಟರ್ಗಳಾದ ಶಾಂತಿನಾಥ, ರಮೇಶ ಕಾಂಬಳೆ ಹಾಗೂ ಸಿಬ್ಬಂದಿ ರಸ್ತೆಗಿಳಿದ ಹಲವು ವಾಹನಗಳನ್ನು ಜಪ್ತಿ ಮಾಡಿಕೊಂಡರು. ಕೆಲವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬೆನ್ನಟ್ಟಿ ಲಾಠಿ ಬೀಸಿದರು. ಸರಿ ಕಾರಣ ಕೊಟ್ಟವರಿಗೆ ಹೋಗಲು ಬಿಟ್ಟರು. ವಿನಾಕಾರಣ ಮನೆಯಿಂದ ಹೊರ ಬಂದಿದ್ದವರಿಗೆ ಸಿಕ್ಕ-ಸಿಕ್ಕಂತೆ ಲಾಠಿ ರುಚಿ ತೋರಿಸಿದರು. ಕಾರುಗಳಲ್ಲಿ ಕುಳಿತವರಿಗೂ ಹಿಡಿದು ಬುದ್ಧಿ ಕಲಿಸಿದರು.


    ಆಸ್ಪತ್ರೆಗೆ ಹೋಗಲು, ಕೃಷಿ ಪರಿಕರ ಖರೀದಿಗಾಗಿ ವಾಹನದೊಂದಿಗೆ ಬಂದವರನ್ನು ಹೊರತುಪಡಿಸಿ ಅನವಶ್ಯಕವಾಗಿ ರಸ್ತೆಗಳಿಯದಂತೆ ತಡೆಯಲು ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ, ರಾತ್ರಿ ಹೀಗಾಗಿ ದಿನವಿಡೀ ಪೊಲೀಸ್ ಕಾಯರ್ಾಚರಣೆ ನಡೆಸಲಾಗುವುದು. ಮಧ್ಯಾಹ್ನದ ನಂತರ ದಿನಸಿ ಅಂಗಡಿ ಬಂದ್ ಆಗಿರುತ್ತವೆ. ಹೀಗಾಗಿ ಮಧ್ಯಾಹ್ನದ ನಂತರ ಲಾಕ್ಡೌನ್ ಬಿಗಿಗೊಳಿಸಲಾಗುತ್ತಿದೆ.
    | ಡಿ.ಕಿಶೋರಬಾಬು ಉಪ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts