More

    ರಣಕಹಳೆ ಮುಳುಗಿಸಲು ಕೇಸರಿ ಪಡೆ ಸನ್ನದ್ಧ

    ಸೇಡಂ: ರಾಜಕೀಯ ಪಕ್ಷಗಳ ಬುನಾದಿ ಎಂದೇ ಕರೆಯಲ್ಪಡುವ ಗ್ರಾಪಂ ಚುನಾವಣೆಗೆ ಈಗಾಗಲೇ ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಹಳ್ಳಿ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆಯಲು ಕೇಸರಿ ಪಡೆ ಸನ್ನದ್ಧವಾಗಿದೆ.
    ಗ್ರಾಪಂ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಆಯೋಜಿಸಿರುವ ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ಪಟ್ಟಣದಲ್ಲಿ ಎಲ್ಲಿಲ್ಲದ ತಯಾರಿ ನಡೆದಿದ್ದು, ಚಿಂಚೋಳಿ, ಚಿತ್ತಾಪುರ, ಸೇಡಂ ತಾಲೂಕು ಒಳಗೊಂಡ ಸಮಾವೇಶ ಇದಾಗಿದೆ. ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಸಮಾವೇಶಕ್ಕೆ ಸ್ಥಳ ಗುರುತಿಸಲಾಗಿದ್ದು, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಆಗಿರುವ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಖುದ್ದು ಮೇಲುಸ್ತುವಾರಿ ವಹಿಸಿ ತಯಾರಿಯತ್ತ ಹೆಚ್ಚಿನ ಗಮನ ಹರಿಸಿದ್ದಾರೆ.
    2 ಸಾವಿರ ಜನ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಬುಧವಾರ ಸಂಜೆ 4ಕೆ್ಕೆ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ವಿ. ಸೋಮಣ್ಣ, ಬಿ.ಶ್ರೀರಾಮಲು ಸೇರಿ ಸಂಸದರು, ಶಾಸಕರು, ಪಕ್ಷದ ರಾಜ್ಯ ಮಟ್ಟದ ಪದಾಧಿಕಾರಿಗಳು ಚಾಲನೆ ನೀಡಲಿದ್ದಾರೆ. ಈ ಮೂಲಕ ಕಾರ್ಯಕರ್ತರ ಚುನಾವಣೆಗೆ ರಣಕಹಳೆ ಮುಳುಗಿಸಲು ಕೇಸರಿ ಪಾಳಯ ಸಜ್ಜಾಗಿ ನಿಂತಿದೆ. ಕಾರ್ಯಕ್ರಮಕ್ಕೆ ಬರುವ ಅತಿಥಿಗಳನ್ನು ಕಲಬುರಗಿ ರಸ್ತೆಯಲ್ಲಿರುವ ಜ್ಯೋತಿ ಪೆಟ್ರೋಲ್ ಪಂಪ್ನಿಂದ ಸಾವಿರ ಬೈಕ್ಗಳ ರ್ಯಾಲಿ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲು ಯುವ ಮೋಚರ್ಾ ಅಧ್ಯಕ್ಷ ಪ್ರಶಾಂತ ಕೇರಿ ನೇತೃತ್ವದ ತಂಡ ತಯಾರಿಯಲ್ಲಿ ತೊಡಗಿದೆ. ಏನಾದರೂ ಸರಿ ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸುವ ಮೂಲಕ ಪ್ರಬಲವಾಗಿ ಪಕ್ಷ ಬೇರೂರಲು ಕೆಲಸ ಮಾಡಬೇಕು ಎನ್ನುವ ಸಂದೇಶ ಸಮಾವೇಶದ ಮೂಲಕ ನೀಡಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts