More

    ರಕ್ತದಿಂದ ಪತ್ರ ಬರೆದ ಕರವೇ ಕಾರ್ಯಕರ್ತರು

    ಯಾದಗಿರಿ: ಕಾವೇರಿ ನದಿ ನೀರಿನ ವಿವಾದ ಶಮನಕ್ಕೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಲು ಒತ್ತಾಯಿಸಿ ಕರವೇ ಕಾರ್ಯಕರ್ತರು ಮಂಗಳವಾರ ನಗರದ ಅಂಚೆ ಕಚೇರಿ ಮುಂದುಗಡೆ ರಕ್ತದಲ್ಲಿ ಪತ್ರ ಬರೆಯುವ ಚಳುವಳಿ ನಡೆಸಿದರು.


    ಪ್ರತಿ ಕಾರ್ಯಕರ್ತರು ತಮ್ಮ ರಕ್ತದಿಂದ ಬಿಳಿಹಾಳೆ ಮೇಲೆ ಕಾವೇರಿ ಹೋರಾಟಕ್ಕೆ ಜಯವಾಗಲಿ, ಕಾವೇರಿ ನಮ್ಮದು, ಕಾವೇರಿ ನಮ್ಮ ಜೀವ ನದಿ ಎಂಬ ಘೋಷವಾಕ್ಯ ಬರೆದು ಪ್ರದಶರ್ಿಸಿದರು. ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮಾತನಾಡಿ, ರಾಜ್ಯಾದ್ಯಂತ ಕಾವೇರಿ ನೀರಿಗಾಗಿ ಪ್ರತಿನಿತ್ಯ ಬೇರೆಬೇರೆ ವಿಭಿನ್ನ ರೀತಿಯ ಹೋರಾಟಗಳನ್ನು ನಮ್ಮ ನಾಯಕ ಟಿ.ಎ.ನಾರಾಯಣಗೌಡರು ಹಮ್ಮಿಕೊಳ್ಳುತ್ತಿದ್ದಾರೆ. ಅವರ ಆದೇಶದಂತೆ ಚಳುವಳಿ ಆಯೋಜಿಸಲಾಗಿದೆ ಎಂದರು.

    ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ ಬರ ಆವರಿಸಿದೆ. ಮುಂಗಾರು ಮಳೆ ನಿರೀಕ್ಷಿತವಾಗಿ ಬೀಳದ ಕಾರಣ ನಾಡಿನ ಜಲಾಶಯಗಳು ಬರಿದಾಗಿವೆ. ಅದರಲ್ಲೂ ಕಾವೇರಿ ಕಣಿವೆ ಸಂಪೂರ್ಣ ಬರಿದಾಗಿದೆ. ಇಂಥ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ, ನಮ್ಮ ರೈತರ ಬೆಳೆ ಒಣಗಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ಅ.15ರ ವರೆಗೆ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ರಾಜ್ಯ ಸರಕಾರಕ್ಕೆ ಆದೇಶ ಮಾಡಿರುವುದು ಆಘಾತಕಾರಿ ಸಂಗತಿ. ಕೂಡಲೇ ಈ ವಿಷಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಿ, ವಿವಾದ ಬಗೆಹರಿಸಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts