More

    ರಕ್ತದಾನ ಮಾಡಿ ಜೀವ ಉಳಿಸಿ

    ಕೊಟ್ಟೂರು: ರಕ್ತದಾನ ಮಾಡುವುದರಿಂದ ಯಾವುದೇ ಅಪಾಯವಿಲ್ಲ. ಆದರೆ ರಕ್ತವಿಲ್ಲದೆ ಜೀವನ್ಮರಣ ಹೋರಾಟ ಮಾಡುತ್ತಿದ್ದ ವ್ಯಕ್ತಿಗೆ ರಕ್ತದಾನ ಮಾಡಿ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ ಎಂದು ಕೊಟ್ಟೂರೇಶ್ವರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ್ ಕಲ್ಮಠ ಹೇಳಿದರು.

    ಶಿಬಿರಕ್ಕೆ ಚಾಲನೆ

    ಇಲ್ಲಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಗುರುವಾರ ಸ್ವಾಮಿ ವಿವೇಕಾನಂದ ಬ್ಲಡ್ ಬ್ಯಾಂಕ್ ಹಾಗೂ ಎನ್‌ಎಸ್‌ಎಸ್ ಮತ್ತು ಎನ್‌ಸಿಸಿ ಐಕ್ಯೂಎಸಿ ಜಂಟಿಯಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

    ನೀವು ದಾನ ಮಾಡಿದ ರಕ್ತ ನಿಮಗೆ ಅರಿವಿಲ್ಲದೆ ಸಂಕಷ್ಟದಲ್ಲಿರುವ ವ್ಯಕ್ತಿಯ ಜೀವವನ್ನು ಉಳಿಸುತ್ತದೆ. ಆದ್ದರಿಂದ ರಕ್ತದಾನ ಮಾಡುವಲ್ಲಿ ಸ್ವಾರ್ಥಿಗಳಾಗಬೇಡಿ ಎಂದರು.

    ಇದನ್ನೂ ಓದಿ: ಬ್ಲಡ್ ಬ್ಯಾಂಕ್‌ಗಳಿಗೆ ರಕ್ತದ ಕೊರತೆ

    ಸ್ವಾಮಿ ವಿವೇಕಾನಂದ ಬ್ಲಡ್ ಬ್ಯಾಂಕ್‌ನ ಸ್ಥಾಪಕ ಗೋಪಾಲರೆಡ್ಡಿ 24 ವರ್ಷಗಳಿಂದಲೂ ನಮ್ಮ ಬ್ಲಡ್ ಬ್ಯಾಂಕ್ ರಕ್ತ ಸಂಗ್ರಹಿಸಿ ರಕ್ತದ ಕೊರತೆ ಇರುವವರಿಗೆ ಸಹಾಯಮಾಡುತ್ತ ಬಂದಿದೆ. ಈ ಕಾಲೇಜಿನಲ್ಲಿ 10 ವರ್ಷಗಳಿಂದಲೂ ರಕ್ತದಾನ ಶಿಬಿರ ಏರ್ಪಡಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ರಕ್ತವನ್ನು ಮಾರಾಟಮಾಡುವುದಿಲ್ಲ. ಸರ್ಕಾರ ನಿಬಂಧನೆಗೆ ಒಳಪಟ್ಟು ರಕ್ತಕೊಡುತ್ತೇವೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜು ಪ್ರಾಚಾರ್ಯ ಡಾ. ಎಂ. ರವಿ ಕುಮಾರ್. ನಮ್ಮ ಕಾಲೇಜಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಿರುವುದು ವಿದ್ಯಾರ್ಥಿಗಳಲ್ಲಿ ರಕ್ತದಾನದ ಮಹತ್ವ ಅರಿತುಕೊಂಡು ರಕ್ತದಾನ ಮಾಡಲಿ ಎಂಬ ಸದುದ್ದೇಶದಿಂದ ಎಂದರು.

    ಕಾಲೇಜು ಆಡಳಿತ ಮಂಡಳಿ ಸದಸ್ಯ ಖಾನಾವಳಿ ಶಿವಕುಮಾರ್, ಬಿಡಿಸಿಸಿ ಬ್ಯಾಂಕ್ ಮ್ಯಾನೇಜರ್ ಕನ್ನಳ್ಳಿ ಮಂಜುನಾಥಗೌಡ ಮಾತನಾಡಿದರು.
    ಕೋರಿ ಬಸವರಾಜ. ಎಂ. ಕೊಟ್ರೇಶ. ಎಂ. ಪ್ರವೀಣ್. ಡಾ. ಸಿದ್ದನಗೌಡ. ಪ.ಪೂ.ಕಾಲೇಜು ಪ್ರಾಚಾರ್ಯ ಪ್ರಶಾಂತ ಮುಂತಾದವರಿದ್ದರು. ಎಸ್.ಪಿ.ಶಾಂತಾ ಪ್ರಾರ್ಥಿಸಿದರು. ವಿಜಯಲಕ್ಷ್ಮೀ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts