More

    ರಂಗ ಮಂದಿರ ಕಾಮಗಾರಿ ಕಳಪೆ ಆರೋಪ

    ಜೊಯಿಡಾ: ತಾಲೂಕಿನ ಗಾವಡೆವಾಡಾ ಖಾಪ್ರೀ ದೇವಸ್ಥಾನದ ಮುಂದೆ ರಂಗ ಮಂದಿರ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಸ್ಥಳೀಯರು ಬುಧವಾರ ಕಾಮಗಾರಿಗೆ ತಡೆಯೊಡ್ಡಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು.

    ಗ್ರಾಮ ಪಂಚಾಯಿತಿ ಗ್ರಾಮ ವಿಕಾಸ ಯೋಜನೆಯಡಿ 5 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ. ತಳಪಾಯಕ್ಕೆ ನಿಗದಿತ ಪ್ರಮಾಣದಲ್ಲಿ ಸಿಮೆಂಟ್ ಬಳಸದೆ ಮಣ್ಣು ಮಿಶ್ರಿತ ಖಡಿ ಹಾಕಿ ಕಾಮಗಾರಿ ಮಾಡಲಾಗಿದೆ. ಸಿಮೆಂಟ್ ಹಾಕಿ 6 ದಿನ ಕಳೆದರೂ ಕಾಂಕ್ರಿಟ್ ಗಟ್ಟಿಯಾಗಿಲ್ಲ ಎಂಬುದು ಸ್ಥಳೀಯರ ಆರೋಪ.

    ಸ್ಥಳಕ್ಕೆ ಆಗಮಿಸಿದ ಜಿ.ಪಂ. ಕಿರಿಯ ಇಂಜಿನಿಯರ್ ಪ್ರವೀಣ ಅವರಿಗೆ ಸ್ಥಳೀಯರು ಕಾಂಕ್ರೀಟ್ ಪುಡಿಯನ್ನು ತೆಗೆದು ತೋರಿಸಿದರು.ಬಳಿಕ ಗುತ್ತಿಗೆದಾರನನ್ನು ಸ್ಥಳಕ್ಕೆ ಕರೆಸಿ ಎಇಇ ಮಹಮ್ಮದ್ ಇಜಾಜ್ ಸುಭಾರ್ ಅವರ ಸಮ್ಮುಖದಲ್ಲಿ ಸ್ಥಳ ಪರಿಶೀಲಿಸಿದರು.

    ‘ಎಲ್ಲವನ್ನೂ ಕಿತ್ತು ತೆಗೆದು ಗುಣಮಟ್ಟದ ಕಾಮಗಾರಿ ಮಾಡಿ. ಇಲ್ಲವಾದರೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಂದು ಗುತ್ತಿಗೆದಾರರಿಗೆ ಎಇಇ ಎಚ್ಚರಿಸಿದರು.

    ಒಪ್ಪಿಕೊಂಡ ಗುತ್ತಿಗೆದಾರ: ಕಾಮಗಾರಿ ಸರಿಯಾಗಿ ಆಗಿಲ್ಲ ಎಂಬುದನ್ನು ಒಪ್ಪಿಕೊಂಡ ಗುತ್ತಿಗೆದಾರ ಸಿದ್ರಾಮಪ್ಪ ಪಾತ್ರೋಟ ಅವರು ಕಾಲಂ ಮತ್ತು ಕಾಂಕ್ರೀಟ್ ಹಾಕಿದ ಎಲ್ಲ ತಳಪಾಯವನ್ನು ತೆಗೆದು ಹೊಸದಾಗಿ ಕಾಮಗಾರಿ ಮಾಡಿಕೊಡಲಾಗುತ್ತದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು. ಗ್ರಾ.ಪಂ. ಮಾಜಿ ಸದಸ್ಯ ಸಂತೋಷ ಮಂಥೆರೋ, ಶಾಮ ಪೋಕಳೆ, ಪಿ.ವಿ. ದೇಸಾಯಿ, ದತ್ತಾ ಗಾವಡಾ ಇತರರಿದ್ದರು.

    ಗಾವಡೆವಾಡಾದ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ನಮ್ಮ ಗಮನಕ್ಕೆ ತರದೇ ಕಾಂಕ್ರೀಟ್ ಕೆಲಸ ಮಾಡಲಾಗಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
    | ಮಹಮ್ಮದ್ ಇಜಾಜ್ ಸುಭಾರ್ ಎಇಇ ಜೊಯಿಡಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts