More

    ರಂಗಭೂಮಿಗೆ ಬಾಳಪ್ಪನವರ ಕೊಡುಗೆ ಅಪಾರ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ರಂಗಭೂಮಿಯ ಸಾಪ್ರಜ್ಞೆಯಂತಿದ್ದ ನಾಡೋಜ ಏಣಗಿ ಬಾಳಪ್ಪನವರು ಜಗಜ್ಯೋತಿ ಬಸವೇಶ್ವರನ ನಾಟಕದ ಮೂಲಕ ನಾಡಿಗೆ ಬಸವಣ್ಣನನ್ನು ಪರಿಚಯಿಸಿದರು ಎಂದು ಹಿರಿಯ ವಿಮರ್ಶಕ ಡಾ. ವೀರಣ್ಣ ರಾಜೂರ ಹೇಳಿದರು.
    ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ನಾಡೋಜ ಡಾ. ಏಣಿಗಿ ಬಾಳಪ್ಪ ದತ್ತಿ ನಿಮಿತ್ತ ಬುಧವಾರ ಏರ್ಪಡಿಸಿದ್ದ ವಿಶ್ವರಂಗಭೂಮಿ ದಿನ, ಉಪನ್ಯಾಸ ಹಾಗೂ ರಂಗ ಗೌರವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಏಣಗಿ ಬಾಳಪ್ಪನವರು 1947ರಲ್ಲಿ ಕಲಾವೈಭವ ನಾಟ್ಯ ಸಂ ಆರಂಭಿಸಿ ಜಗಜ್ಯೋತಿ ಬಸವೇಶ್ವರ ನಾಟಕವನ್ನು ಅನೇಕ ಪ್ರದರ್ಶನ ಕಾಣುವಂತೆ ಮಾಡಿದರು. ಈ ನಾಟಕ ಅವರಿಗೆ ಆಥಿರ್ಕ ಸದೃಢತೆ, ಜನಮನ್ನಣೆ ತಂದುಕೊಟ್ಟಿತು. ವೃತ್ತಿ ರಂಗಭೂಮಿ ವೈಭವ ಇಂದು ಇಲ್ಲದಾಗಿದೆ. ಕೆಲವೇ ವೃತ್ತಿ ರಂಗಭೂಮಿ ನಾಟಕ ಕಂಪನಿಗಳು ಉಳಿದಿವೆ. ಆದರೆ ರಂಗಭೂಮಿಗೆ ಎಂದೂ ಅಳಿವಿಲ್ಲ. ಅದಕ್ಕೆ ತನ್ನದೇ ಆದ ಶಕ್ತಿ ಇದ್ದು ಸದಾ ಜೀವಂತವಾಗಿರುತ್ತದೆ ಎಂದರು.
    ಹಿರಿಯ ಕಲಾವಿದ ಡಾ. ಶಶಿಧರ ನರೇಂದ್ರ ಮಾತನಾಡಿದರು. ರಂಗ ವಿದ್ವಾಂಸ ಡಾ. ರಾಮಕೃಷ್ಣ ಮರಾಠೆ ಅವರು ಗದಗ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂ. ಪಂಚಾಕ್ಷರ ಗವಾಯಿಗಳ ನಾಟಕ ಮಂಡಳಿ ಕುರಿತು ಮಾತನಾಡಿದರು. ಮಹಾದೇವ ಹೊಸೂರ, ಸತ್ಯಬೋಧ ಸವಣೂರ ಅವರಿಗೆ ರಂಗ ಗೌರವ ನೀಡಿ ಸನ್ಮಾನಿಸಲಾಯಿತು. ಡಾ. ವಿಜಯಲಕ್ಷಿ$್ಮ ಭೋಸಲೆ ಅವರನ್ನು ದತ್ತಿದಾನಿ ಪರ ಸನ್ಮಾನಿಸಲಾಯಿತು.
    ಚಂದ್ರಕಾಂತ ಬೆಲ್ಲದ, ಮೋಹನ ಏಣಗಿ, ಸುಭಾಷ ಏಣಗಿ, ನಿಂಗಣ್ಣ ಕುಂಟಿ, ಕೆ.ಎಚ್​. ನಾಯಕ, ಬಸವರಾಜ ಬೆಂಗೇರಿ, ಅರವಿಂದ ಏಣಗಿ, ಎಂ.ಎಂ. ಚಿಕ್ಕಮಠ, ಅಶೋಕ ಚಿಕ್ಕೋಡಿ, ಅನಿಲ ಮೇತ್ರಿ, ಸಿದ್ಧರಾಮ ಹಿಪ್ಪರಗಿ, ಅಶೋಕ ನಿಡವಣಿ, ಅಶೋಕ ಭಂಡಾರಿ, ಎಸ್​.ಕೆ. ಕುಂದರಗಿ,ಇತರರು ಇದ್ದರು.
    ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಬಸವರಾಜ ಜಗಜಂಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts