More

    ಯೋಗ ಒಂದು ಧರ್ಮದ ಆಚರಣೆಯಲ್ಲ -ಬಿ. ರಾಮರಾಜು ಹೇಳಿಕೆ 

    ದಾವಣಗೆರೆ: ಭಾರತೀಯರು ಮನುಕುಲಕ್ಕೆ ನೀಡಿರುವ ಅದ್ಭುತ ಕೊಡುಗೆಗಳಲ್ಲಿ ಯೋಗವೂ ಒಂದು. ಇದೊಂದು ಜೀವನ ಕ್ರಮವೇ ಹೊರತು ಒಂದು ಧರ್ಮದ ಆಚರಣೆಯಲ್ಲ ಎಂದು ಪುತ್ತೂರಿನ ವೈದ್ಯ ಬಿ. ರಾಮರಾಜು ಹೇಳಿದರು.

    ಮೋಕ್ಷ ಹೆಲ್ತ್ ಹ್ಯೂಮನ್ ರಿಸೋರ್ಸ್ ಆ್ಯಂಡ್ ರೂರಲ್ ಡೆವಲಪ್‌ಮೆಂಟ್ ಆರ್ಗನೈಸೇಷನ್ ವತಿಯಿಂದ ವಿದ್ಯಾನಗರದ ಎಸ್‌ಟಿ ಆರ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಋಷಿಮುನಿಗಳು ಮನುಷ್ಯನನ್ನೇ ಕೇಂದ್ರವಾಗಿರಿಸಿ ಅವರ ದು:ಖ ದುಮ್ಮಾನ ನಿವಾರಣೆ ಮಾಡಲು ಯೋಗ ವಿದ್ಯೆ ನೀಡಿದ್ದಾರೆ. ಸಧೃಢ ಶರೀರ ಹಾಗೂ ಸ್ವಸ್ಥ ಮನಸ್ಸನ್ನು ರೂಪಿಸಲು ಯೋಗ ಮಾರ್ಗ ಸಹಕಾರಿಯಾಗಿದೆ. ಒತ್ತಡ, ಉದ್ವೇಗ, ಅತೃಪ್ತಿ, ಅರಿಷಡ್ವರ್ಗಗಳ ಮೇಲೆ ನಿಯಂತ್ರಣ ಸಾಧಿಸಲು ಈ ಮಾರ್ಗ ಅತ್ಯವಶ್ಯಕ ಎಂದರು.
    ಎಸ್.ಟಿ.ಆರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ವಿಂಧ್ಯಾ ಗಂಗಾಧರ ವರ್ಮ ಮಾತನಾಡಿ ಯೋಗವೆಂಬುದು ಕೇವಲ ವ್ಯಾಯಾಮವಲ್ಲ. ಇದೊಂದು ಜೀವನ ಶೈಲಿ. ಪತಂಜಲಿ ಮುನಿಯು ಯೋಗವನ್ನು ಅಷ್ಟಾಂಗ ಯೋಗದ ಮೂಲಕ ವಿಭಾಗಿಸಿದ್ದಾರೆ.
    ಮುಖ್ಯ ಅತಿಥಿಯಾಗಿದ್ದ ತುಳಸಿ ಮಾತನಾಡಿ ಯೋಗವು ವಿಶ್ವದಾದ್ಯಂತ ಜನಪ್ರಿಯವಾಗುತ್ತಿದೆ. ಆದರೆ ಇದರ ಮೂಲ ಉದ್ದೇಶವೇ ಮರೆಯಾಗುತ್ತಿದೆ ಎಂದರು.
    ಸುಧಾ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಪವಿತ್ರಾ ಪ್ರಾರ್ಥಿಸಿದರು. ಪ್ರಹ್ಲಾದ್ ಕೊಪ್ಪದ್ ಸ್ವಾಗತಿಸಿದರು. ಕೃತಿಕ್ ರೋಷನ್, ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts