More

    ಯೋಜನೆಗೆ ರಕ್ಷಿತಾಬಾಯಿ ಹೆಸರು ನಾಮಕರಣ

    ಕಡೂರು: ಮೃತ ಬಾಲಕಿ ರಕ್ಷಿತಾಬಾಯಿ ಕುಟುಂಬಕ್ಕೆ ಬಂಜಾರ ಅಭಿವೃದ್ಧಿ ನಿಗಮದಿಂದ 1 ಲಕ್ಷ ಪರಿಹಾರ ಧನ ಮತ್ತು ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ಸಹಾಯಧನ ಶೀಘ್ರದಲ್ಲಿ ವಿತರಿಸಲಾಗುವುದು. ಬಂಜಾರ ಸಮಾಜದ ಕೀರ್ತಿಯನ್ನು ಶಾಶ್ವತವಾಗಿ ಉಳಿಸಿರುವ ರಕ್ಷಿತಾಬಾಯಿ ಹೆಸರನ್ನು ಅಭಿವೃದ್ಧಿ ನಿಗಮದ ಯಾವುದಾದರೂ ಒಂದು ಯೋಜನೆಗೆ ಹೆಸರಿಡುವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಬಂಜಾರ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ತಿಳಿಸಿದರು.

    ಸೋಮನಹಳ್ಳಿ ತಾಂಡಾದ ರಕ್ಷಿತಾಬಾಯಿ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದರು.  ಶಾಸಕ ಬೆಳ್ಳಿಪ್ರಕಾಶ್ ಜತೆಗೂಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ. ಮಂಜೂರು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲಿಯೇ ಮಂಜೂರಾತಿ ದೊರಕಲಿದೆ ಎಂದರು.

    ಮಗಳನ್ನು ಕಳೆದುಕೊಂಡ ನೋವು ಪಾಲಕರ ಕುಟುಂಬಕ್ಕೆ ಇದ್ದರೆ, 9 ಜೀವಗಳಿಗೆ ಬೆಳಕಾದ ಬಾಲಕಿ ರಕ್ಷಿತಾಬಾಯಿ ಇತರರಿಗೆ ಸ್ಪೂರ್ತಿಯಾಗಿದ್ದಾಳೆ. ಕುಟುಂಬದವರ ಜತೆಗೆ ನಾವೆಲ್ಲರೂ ನಿಲ್ಲಬೇಕಿದೆ. ಸಾವಿನಲ್ಲೂ ಇತರೆ ಜೀವಗಳಿಗೆ ನೆರವಾಗುವ ಮೂಲಕ ಮರಣದ ನಂತರವೂ ಬದುಕಿರುವ ಬಾಲಕಿ ನಾಡಿಗೆ ಕೀರ್ತಿ ತಂದಿದ್ದಾಳೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts