More

    ಯುವಸಮೂಹವನ್ನು ಬಡಿದ್ದೆಬಿಸಿ ಅಸ್ಪಶ್ಯತೆ,ಅಸಮಾನತೆ ಏಕೆ ನಿಂತಿಲ್ಲ?

    ಚಿತ್ರದುರ್ಗ: ಪ್ರತಿ ವರ್ಷ ಶಾಲಾ-ಕಾಲೇಜುಗಳಿಂದ ಮಕ್ಕಳು, ಯುವಸಮೂಹ ಶೇ 25ರಷ್ಟು ಡ್ರಾಪ್‌ಔಟ್ ಆಗುತ್ತಿದ್ದು, ಶಿಕ್ಷಣ ಕ್ಷೇತ್ರಕ್ಕೆ ಪೆಟ್ಟು ಬೀಳುತ್ತಿದೆ. ಇದನ್ನು ತಪ್ಪಿಸುವ ಕೆಲಸವಾಗಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಸಲಹೆ ನೀಡಿದರು.

    ಸರ್ಕಾರಿ ಕಲಾ ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನ ಸಭಾಂಗಣದಲ್ಲಿ ಸೋಮವಾರ ಯುವ ಕಾರ್ಯಕ್ರಮ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಪಂ, ನೆಹರು ಯುವ ಕೇಂದ್ರದಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವ ಉತ್ಸವ-ಪಂಚ್ ಪ್ರಣ್ ಮತ್ತು ಇಂಡಿಯಾ 2047 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಜಾಗತಿಕ ಮಟ್ಟದಲ್ಲಿ ರಾಷ್ಟ್ರ ನಿರ್ಮಿಸುವ ಜವಾಬ್ದಾರಿ ಜನಸಂಖ್ಯೆಯಲ್ಲಿ ಶೇ 65ರಷ್ಟಿರುವ ಯುವಸಮೂಹದ್ದಾಗಿದೆ. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಯುವಶಕ್ತಿಯ ಜ್ಞಾನಕ್ಕೆ ಅಗತ್ಯ ಸಹಕಾರ ಕೊಡುತ್ತಿದೆ. ಆದರೆ, ಯೋಜನೆಗಳ ಮಾಹಿತಿ ನಿಮ್ಮಲ್ಲಿ ಇಲ್ಲವಾಗಿದೆ. ಇನ್ನಾದರೂ ಪ್ರತಿಭೆಗೆ ಅನುಗುಣವಾಗಿ ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಂಡು ಮುನ್ನುಗ್ಗಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.

    • ರಿಪೋರ್ಟ್ ಕಾರ್ಡ್‌ಗೆ ಸೀಮಿತರಾಗಬೇಡಿ: ಎಲ್ಲಾ ಇಲಾಖೆಗಳಲ್ಲೂ ಮಾಸಾಂತ್ಯದ ರಿಪೋರ್ಟ್ ತೋರಿಸುವ ಪರಿಪಾಠ ಮುಂದುವರೆದಿದೆ. ಹೀಗಾಗಿ ದೇಶದಲ್ಲಿ ಬದಲಾವಣೆ ಸಾಧ್ಯವಾಗಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗಿಲ್ಲ. ಆಂಗ್ಲ ಭಾಷೆ ಕಲಿಕೆಯಲ್ಲಿ ಹಲವು ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಿಂದ ವಾರಕ್ಕೊಮ್ಮೆ ಚರ್ಚೆ ನಡೆಸಿದರೆ, ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಸಫಲರಾಗುವ ನೈಪುಣ್ಯತೆ ನಮ್ಮ ಮಕ್ಕಳಲ್ಲಿದೆ ಎಂದರು. ಅನ್ವೇಷಣೆ ಎಂಬುದು ಮಾನವನ ನಿತ್ಯ ಜೀವನದ ನಿರಂತರ ಪ್ರಕ್ರಿಯೆ. ಆದರೆ, ಇದರಲ್ಲಿ ತೊಡಗುವ ವಿಜ್ಞಾನಿಗಳ ಕೊಡುಗೆ ಏನು? ಮಾಹಿತಿ ಮತ್ತು ತಂತ್ರಜ್ಞಾನ ಪರಿಚಯಿಸುವ ಕೆಲಸವಾಗುತ್ತಿದೆಯೇ? ಇ-ಲೈಬ್ರರಿ ಅಂಗೈಯಲ್ಲಿದ್ದು, ಜ್ಞಾನ ಪಡೆಯಬಹುದಾ ಎಂದು ತನ್ನ ಬೆಳವಣಿಗೆ, ಪೋಷಕರ ಕನಸು, ದೇಶದ ಪ್ರಗತಿ, ಸಮಾಜಕ್ಕೆ ಕೊಡುಗೆ ನೀಡಲು ಯುವಸಮೂಹ ಮುಂದಾಗಬೇಕೆ ಹೊರತು ಮಾನಸಿಕ ಖಿನ್ನತೆಗೆ ಯಾರೂ ಒಳಗಾಗಬಾರದು ಎಂದರು. ಕೌಶಲಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಪ್ಯಾನ್ ಇಂಡಿಯಾ ರೀತಿಯಲ್ಲಿ ಉತ್ಸವಕ್ಕೆ ಚಾಲನೆ ದೊರೆತಿದೆ. ಯುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರತಿಯೊಂದರಲ್ಲೂ ಭಾಗವಹಿಸಲು ಆಸಕ್ತಿ ಬೆಳೆಸಿಕೊಳ್ಳಿ, ಆಕರ್ಷಣೆ ಅಲ್ಲ. ಸಾಧಿಸುವ ಛಲವಿರಲಿ ಎಂದು ಕಿವಿಮಾತು ಹೇಳಿದರು. ಎಡಿಸಿ ಟಿ.ಜವರೇಗೌಡ ಮಾತನಾಡಿ, ಪ್ರಯತ್ನ ಇಲ್ಲದೇ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ದಾರಿ ತಪ್ಪದೇ ಬದುಕು ರೂಪಿಸಿಕೊಳ್ಳುವ ವಯಸ್ಸಲ್ಲಿ ಶೇ 25ರಷ್ಟು ಕಷ್ಟಪಡದಿದ್ದರೆ, ಜೀವನವಿಡೀ ಶೇ 75ರಷ್ಟು ಸುಖ ಕಾಣಲಾಗದು. ನಿಮ್ಮಗಳ ಕನಸು ದೊಡ್ಡದಾದಂತೆ, ಗುರಿ ತಲುಪುವ ಮಾರ್ಗ ಸುಲಭ. ಅದಕ್ಕಾಗಿ ನಿರಂತರ ಪರಿಶ್ರಮವಿರಲಿ ಎಂದು ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ, ಪ್ರಾಧ್ಯಾಪಕರಾದ ಪ್ರೊ.ನಾಗರಾಜಪ್ಪ, ಪ್ರೊ.ಸುರೇಶ್, ಡಾ.ಎಸ್.ಆರ್.ಲೇಪಾಕ್ಷಿ, ಭಾರ್ಗವಿ ದ್ರಾವಿಡ್ ಇತರರಿದ್ದರು. ಕೋಟ್
      ಸ್ವಾತಂತ್ರ್ಯ ಶತಮಾನೋತ್ಸವ ಸಂಭ್ರಮಾಚರಣೆಗೆ ಇನ್ನೂ 25 ವರ್ಷ ಉಳಿದಿದ್ದು, ಅಷ್ಟರೊಳಗೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಯುವಸಮೂಹದ ಪಾತ್ರ ಮಹತ್ವದ್ದಾಗಿದೆ. ಹೆಚ್ಚಿನ ಆಸಕ್ತಿಯೊಂದಿಗೆ ಕಾರ್ಯಪ್ರವೃತ್ತರಾಗಿ ದೇಶ ಮುನ್ನಡೆಸಿ.
      ಎನ್.ಸುಹಾಸ್, ಜಿಲ್ಲಾ ಯುವಜನಾಧಿಕಾರಿ, ನೆಹರು ಯುವ ಕೇಂದ್ರ ಬಾಕ್ಸ್ ಕಾಲೇಜಿಗೆ ಸೀಮಿತವಾಗಿಸಿದ್ದು ಸರಿಯಲ್ಲ
      ಅಸ್ಪ್ರಶ್ಯತೆ, ಅಸಮಾನತೆ ಏಕೆ ನಿಂತಿಲ್ಲ. ಇದಕ್ಕೆ ಇನ್ನೂ ಎಷ್ಟು ಶತಮಾನ ಬೇಕು? ಮಾಧ್ಯಮಗಳ ಬಗ್ಗೆಯೂ ಮಾಹಿತಿ ಇಲ್ಲ. ಯಾವುದೇ ಕಾರ್ಯಕ್ರಮ ಕಾಲೇಜಿಗೆ ಮಾತ್ರವಲ್ಲ, ಯುವಸಮೂಹ ಸಂಪೂರ್ಣ ಪಾಲ್ಗೊಳ್ಳಬೇಕಿತ್ತು. ಕಾಲೇಜು ಸಂಭಾಗಣಕ್ಕೆ ಸೀಮಿತ ಆಗಬಾರದಿತ್ತು ಎಂದು ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts