More

    ಯುವಶಕ್ತಿಯ ಕೈಯಲ್ಲಿದೆ ದೇಶದ ಪ್ರಗತಿ

    ಚಿಕ್ಕಮಗಳೂರು: ದೇಶದ ಪ್ರಗತಿ ಅಥವಾ ಅಧೋಗತಿ ಎರಡಕ್ಕೂ ಯುವಶಕ್ತಿಯೇ ಕಾರಣ. ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯುವ ಮನಸ್ಥಿತಿ ರೂಪಿಸಿಕೊಳ್ಳಲು ಯುವ ಸಂಪನ್ಮೂಲ ಕ್ರಿಯಾಶೀಲರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಹೇಳಿದರು. ನಗರದ ಕುವೆಂಪು ಕಲಾಮಂದಿರಲ್ಲಿ ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ಯಾವ ರಾಷ್ಟ್ರದಲ್ಲೂ ಇರದ ಯುವ ಸಂಪನ್ಮೂಲ ನಮ್ಮ ದೇಶದಲ್ಲಿದೆ. ಸ್ವಾತಂತ್ರ್ಯ ಬಂದಾಗಿನಿಂದ ಸ್ವಾತಂತ್ರ್ಯ ಅಮೃತಮಹೋತ್ಸವದವರೆಗೂ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚು ಸಾಧನೆ ಮಾಡಿರುವುದು ಯುವ ಸಮೂಹ ಎಂದರು.

    ನಕ್ಸಲಿಸಂ, ಡ್ರಗ್ಸ್ ಮಾಫಿಯಾದಂತ ಕಾನೂನು ಬಾಹಿರ ಚಟುವಟಿಕೆಯಲ್ಲೂ ತೊಡಗಿಸಿಕೊಂಡು ದೇಶವನ್ನು ಹಿಂದಕ್ಕೆ ತಳ್ಳಿರುವುದರಲ್ಲೂ ಯುವ ಜನಾಂಗದ ಪಾತ್ರ ಸಾಕಷ್ಟಿದೆ. ನಮ್ಮಲ್ಲಿರುವ ಕೀಳರಿಮೆ ಬಿಟ್ಟು ವಿಶಾಲ ಮನೋಭಾವದಿಂದ ದೇಶ, ರಾಜ್ಯದ ಐಕ್ಯತೆ, ಒಳಿತಿಗೆ ಚಿಂತಿಸಬೇಕು. ನಮ್ಮ ಶಿಕ್ಷಣ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದ್ದಾಗ ಮಾತ್ರ ರಾಷ್ಟ್ರವನ್ನು ಯಶಸ್ಸಿನತ್ತ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದರು.

    ರಾಷ್ಟ್ರಜಾಗೃತಿ, ರಾಷ್ಟ್ರಪ್ರೇಮ, ದೇಶಸೇವೆ ಮಾಡಬೇಕು ಎಂದಾಕ್ಷಣ ನಮಗೆ ನೆನಪಿಗೆ ಬರುವುದೇ ಸೇನೆ. ಹೊರಗಿನ ಶತ್ರುಗಳನ್ನು ಸೈನಿಕರು ಕಾಯುವಂತೆ ದೇಶದೊಳಗಿನ ಶತ್ರುಗಳಾದ ಅಜ್ಞಾನ, ಅನಕ್ಷರತೆ, ಬಡತನ, ಶೋಷಣೆ, ಮೂಢನಂಬಿಕೆಗಳನ್ನು ಮೆಟ್ಟಿನಿಂತು ದೇಶವನ್ನು ಮುನ್ನಡೆಗೆ ತರುವ ಕೆಲಸ ಮಾಡಿದಾಗ ಮಾತ್ರ ದೇಶದ ಅಭಿವೃದ್ಧಿಯೊಂದಿಗೆ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

    ಜಿಲ್ಲಾ ಕ್ರೀಡಾಧಿಕಾರಿ ಡಾ. ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ಜಾಗತೀಕರಣ ಯುವಕರಿಗೆ ಹಲವು ಸವಾಲುಗಳನ್ನು ಒಡ್ಡಿದೆ. ಆತ್ಮವಿಶ್ವಾಸ, ಸ್ಥೈರ್ಯ, ಆತ್ಮಬಲಗಳ ಮೂಲಕ ಅವುಗಳನ್ನು ಮಟ್ಟಿನಿಂತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ಭಾರತ ವಿಶ್ವದ ಶಕ್ತಿಯಾಗಲಿದೆ ಎಂದರು.

    ಜಿಲ್ಲೆಯ 25ಕ್ಕೂ ಹೆಚ್ಚು ಯುವಕರು ರಾಷ್ಟ್ರೀಯ ಯುವಜನೋತ್ಸವಕ್ಕೆ ಆಯ್ಕೆಯಾಗಿದ್ದಾರೆ. ಗೋವಾ, ಗುಜರಾತ್ ಅಥವಾ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಯುವಜನೋತ್ಸವ ನಡೆಯುವ ನಿರೀಕ್ಷೆಯಿದೆ. ಜನಪದಗೀತೆ, ಜನಪದ ನೃತ್ಯ, ನಾಟಕ, ಚಿತ್ರಕಲೆ, ಶಾಸ್ತೀಯ ನೃತ್ಯ ಸೇರಿದಂತೆ ಎಲ್ಲ ಪ್ರಕಾರಗಳಲ್ಲಿ ಜಿಲ್ಲೆಯ ಯುವಜನರು ಹೋಗಿ ಬಂದಿದ್ದಾರೆ. ಇಲ್ಲಿರುವ ಪ್ರತಿಭೆಗಳು ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿ ಹೊಸ ಅನುಭವ ಪಡೆಯಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts