More

    ಯುವಜನತೆ ಸಂಸ್ಕೃತಿ ಉಳಿಸಲು ಮುಂದಾಗಿ

    ಹಗರೆ: ಮೊಬೈಲ್, ಟಿವಿ ಯಂತಹ ದೃಶ್ಯಮಾಧ್ಯಮಗಳ ನಡುವೆ ಜಾನಪದ ಕಲೆ ಸಂಸ್ಕೃತಿ ಮಂಕಾಗುತ್ತಿವೆ. ನಾಡು ನುಡಿ ವೈಭವವನ್ನು ಉಳಿಸಿ ಬೆಳೆಸಲು ಇಂದಿನ ಯುವಜನತೆ ಮುಂದಾಗಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ತಿಳಿಸಿದರು.

    ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಲು ಆಗಮಿಸಿರುವ ಅವರು, ಹಗರೆಯಲ್ಲಿರುವ ತಮ್ಮ ಸಂಬಂಧಿ ಮಂಜು ಎಂಬುವರ ಮನೆಗೆ ಭಾನುವಾರ ಭೇಟಿ ನೀಡಿ ವಿಜಯವಾಣಿಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

    ಇಪ್ಪತ್ತು ವರ್ಷಗಳ ಹಿಂದೆ ನಾಟಕಕಾರನಾಗಿ ಕೆಲಸ ಮಾಡುವ ಸಂಧರ್ಭ ಬೇಲೂರಿಗೆ ಆಗಮಿಸಿದ್ದೆ. ಆ ಸಮಯದಲ್ಲಿ ಸಾಕ್ಷ್ಯಚಿತ್ರ ತಯಾರಿಸಲು ಚನ್ನಕೇಶವ ದೇವಸ್ಥಾನದ ಶಿಲ್ಪಕಲೆಗಳ ಚಿತ್ರಗಳನ್ನು ಸೆರೆ ಹಿಡಿದಿದ್ದನ್ನು ನೆನಪಿಸಿಕೊಂಡರು. ದೇವಸ್ಥಾನಗಳ ಸ್ವಚ್ಛತೆಗೆ ಸರ್ಕಾರ ಹಾಗೂ ಸ್ಥಳೀಯರು ಹೆಚ್ಚಿನ ಆಸಕ್ತಿವಹಿಸಿದರೆ ಪ್ರವಾಸೋಧ್ಯಮ ಇನ್ನಷ್ಟು ಬೆಳೆಯುತ್ತದೆ. ಮುಂದಿನ ಪೀಳಿಗೆಗೆ ನಾವು ಕಲೆಯನ್ನು ಉಳಿಸಬೇಕು. ಚೀನಾದವರು ನಮ್ಮ ಶಿಲ್ಪಕಲೆಯನ್ನು ನೋಡಿ ಕಲಿತು ಯಂತ್ರಗಳನ್ನು ಬಳಸಿ ಮರಗಳಲ್ಲಿ ಅವುಗಳನ್ನು ಕೆತ್ತನೆ ಮಾಡಿ ನಮಗೇ ಮಾರಾಟ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲೂ ಸಹ ಒಳ್ಳೆಯ ಪ್ರತಿಭೆಗಳಿದ್ದು ಅವರನ್ನೆಲ್ಲ ಪ್ರೋತ್ಸ್ಸಾಹಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts