More

    ಯುವಕರಿಂದಲೇ ಸದೃಢ ಸಮಾಜ ನಿರ್ಮಾಣ ಸಾಧ್ಯ

    ಯಾದಗಿರಿ: ಭಾರತದ ಸಂಸ್ಕೃತಿ-ಸಂಪ್ರದಾಯವನ್ನು ಎತ್ತಿ ತೋರಿಸಿದ ಸ್ವಾಮಿ ವಿವೇಕಾನಂದರು ವಿಶ್ವದಲ್ಲೇ ವೀರ ಸನ್ಯಾಸಿ ಎಂಬ ಪದಕ್ಕೆ ಪಾತ್ರರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್. ಹೇಳಿದರು.

    ಸ್ವಾಮಿ ವಿವೇಕಾನಂದರ ಜಯಂತಿ ಹಿನ್ನೆಲೆಯಲ್ಲಿ ಬುಧವಾರ ನಗರದ ಸಕರ್ಾರಿ ಪದವಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿವೇಕಾನಂದರ ತತ್ವಾದರ್ಶಗಳನ್ನು ಪ್ರತಿಯೊಬ್ಬ ಯುವಕರು ಮೈಗೂಡಿಸಿಕೊಂಡಾಗ ಮಾತ್ರ ಸದೃಢ ದೇಶ ನಿಮರ್ಾಣ ಮಾಡಲು ಸಾಧ್ಯ ಎಂದರು.

    ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಭಾಷಣಕ್ಕೆ ಇಡೀ ವಿಶ್ವವೇ ಬೆರಗಾಗಿ ತಲೆಬಾಗಿತು. ಅವರಲ್ಲಿ ಲವಲವಿಕೆ, ಮುಖದಲ್ಲಿನ ತೇಜಸ್ಸು ಈ ದೇಶದ ಧರ್ಮದ ಬಗ್ಗೆ ಒಪ್ಪುವಂತೆ ಮಾಡಿತ್ತು. ದೇಶದ ಸಾರ್ವಭೌಮತೆ ಹಾಗೂ ಯುವಕರಿಂದಲೇ ಸದೃಢ ಸಮಾಜ ನಿಮರ್ಾಣ ಸಾಧ್ಯ ಎಂಬುದು ಸ್ವಾಮಿಜೀಯ ಅಖಂಡ ನಿಲುವಾಗಿತ್ತು. ಹೀಗಾಗಿ ಯುವ ಜನಾಂಗ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ವಿವೇಕಾನಂದ ಮಾತುಗಳು ಚಿನ್ನದ ತೂಕಕ್ಕೆ ಸಮ. ಅವರ ಆಲೋಚನೆಗಳು ಭಾರತೀಯರ ವೈವಿದ್ಯಮಯ ಬದುಕಿನ ಮೇಲೆ ಪ್ರಭಾವ ಬೀರುತ್ತದೆ. ವಿವೇಕಾನಂದರ ವಿವೇಕಯುತ ಮಾತುಗಳು ಭಾರತವನ್ನೂ ಮೀರಿ ಹೊರ ದೇಶಗಳಿಗೂ ಪಸರಿಸಿದೆ ಎಂದರು. ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿದರು.

    ಜಿಪಂ ಉಪ ಕಾರ್ಯದರ್ಶಿ ಅಶೋಕ ತೋಟದ, ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ರಾಜು ಬಾವಿಹಳ್ಳಿ ಇದ್ದರು. ಡಾ.ದೇವಿಂದ್ರಪ್ಪ ಹಳಿಮನಿ ಸ್ವಾಗತಿಸಿದರು. ರಾಘವೇಂದ್ರ ಬಂಡಿಮನಿ ನಿರೂಪಿಸಿದರು.

    ಕರವೇ ಕಚೇರಿ: ನಗರದ ಕರವೇ ಜಿಲ್ಲಾ ಕಚೇರಿಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಮಾತನಾಡಿ, ವಿವೇಕಾನಂದರು ಜೀವಿಸಿದ ಅತ್ಯಲ್ಪ ಅವಧಿಯಲ್ಲಿನ ಅವರ ಬದುಕು ದೇಶ ಅಷ್ಟೇ ಅಲ್ಲದೇ, ಜಗತ್ತಿನ ಯುವ ಸಮುದಾಯಕ್ಕೆ ದಾರಿದೀಪವಾಗಿದೆ ಎಂದರು. ಮಲ್ಲು ಮಾಳಿಕೇರಿ, ಅಂಬ್ರೇಶ ಹತ್ತಿಮನಿ, ವಿಶ್ವಾರಾಧ್ಯ ದಿಮ್ಮೆ, ಸಾಹೇಬ್ ಗೌಡ, ಸಾಬು ಹೋರುಂಚಿ, ಕಾಶೀನಾಥ ನಾನೇಕ, ಸುರೇಶ ಬೆಳಗುಂದಿ, ದೀಪಕ ಒಡೆಯರ್, ಈಶ್ವರ ಇದ್ದರು.

    ಜಿಲ್ಲಾ ಬಿಜೆಪಿ ಕಚೇರಿ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಮಂಡಲದ ಯುವ ಮೋರ್ಚಾದಿಂದ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಅಧ್ಯಕ್ಷ ಶ್ರೀಧರ ರಾಯಚೂರ, ಪ್ರಧಾನ ಕಾರ್ಯದರ್ಶಿ ಅಜಯ್ ಮಡ್ಡಿ, ಸಿದ್ಧಲಿಂಗರೆಡ್ಡಿ ಅಡಕಿ, ಶಿವು ಗಣಪುರ, ಸಾಯಿಕುಮಾರ, ಸುರೇಶ ರಾಯಚೂರ, ಅಶೋಕ, ಕಾರ್ತಿಕ, ಗುರು ಪ್ರಸಾದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts