More

    ಯುಪಿಎಸ್ಸಿ ಸ್ಪರ್ಷಾಗೆ 443ನೇ ಶ್ರೇಣಿ

    ವಾದಿರಾಜ ವ್ಯಾಸಮುದ್ರ ಕಲಬುರಗಿ
    ಇದು ಛಲದಂಕ ಮಲ್ಲೆ ಎನಿಸಿರುವ ಸುಶಿಕ್ಷಿತ ಯುವತಿಯ ಕಥೆ. ಮಂಗಳವಾರ ಯುವತಿ ಮನೆಯಲ್ಲಿ ಹಬ್ಬದ ಸಂಭ್ರಮವಿತ್ತು. ಪರಸ್ಪರ ಸಿಹಿ ಹಂಚುವುದು ನಡೆದಿತ್ತು. ಅನೇಕ ಸಂಬಂಧಿಕರು, ಸ್ನೇಹಿತೆಯರು ಮನೆಗೆ ಬಂದು ಯುವತಿಗೆ ಅಭಿನಂದನೆ ಸಲ್ಲಿಸುತ್ತಿದ್ದರು. ಹೀಗಾಗಿ ಮನೆಯಲ್ಲಿ ವಾತಾವರಣ ಒಂದು ರೀತಿಯಲ್ಲಿ ಪುಳಕವಾಗಿತ್ತು.
    ಹೌದು ಇಲ್ಲಿಯ ಅಕ್ಕಮಹಾದೇವಿ ಕಾಲನಿಯಲ್ಲಿರುವ ಸ್ಪರ್ಷಾ ನಿಲಂಗಿ ಎಂಬ ಯುವತಿಯ ಸಂತಸದ ಕಥೆ ಇದು. ಮಂಗಳವಾರ ಪ್ರಕಟವಾಗಿರುವ ಯುಪಿಎಸ್ಸಿ ಫಲಿತಾಂಶದಲ್ಲಿ ಸ್ಪರ್ಶಾ ಅವರು 443ನೇ ರ್ಯಾಂಕ್ ಪಡೆದುಕೊಳ್ಳುವ ಮೂಲಕ ಕಲಬುರಗಿ ಜನರ
    ಸಂಭ್ರಮ ಇಮ್ಮಡಿಯಾಗುವಂತೆ ಮಾಡಿದ್ದಾರೆ.
    ಐಎಎಸ್ ಮಾಡಲೇಬೇಕು, ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಲೇಬೇಕೆಂದು ಛಲ ಬಿಡದ ತ್ರಿವಿಕ್ರಮನಂತೆ ಹೋರಾಡಿದ ಕಲ್ಲುನಾಡಿನ ಕಲಿ ಸ್ಪರ್ಶಾ ನೀಲಂಗಿ ಕೊನೆಗೂ ಅದರಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಹುದ್ದೆಗಾಗಿ ಈಗ ಕಾಯುತ್ತಿದ್ದಾರೆ. ಸ್ಪರ್ಶಾ ಭಾರತೀಯ ರೈಲ್ವೆ ಟ್ರಾಫಿಕ್ ಸವರ್ಿಸ್ದಲ್ಲಿ ಆಸ್ಸಾಂನ ದಿಬ್ರುಗಡದಲ್ಲಿ ಏರಿಯಾ ಆಫೀಸರ್ ಎಂದು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ.
    ರಜೆಯ ಮೇಲೆ ಕಲಬುರಗಿಗ್ಕೆ ಬಂದ ಅವರಿಗೆ ಸಿಕ್ಕ ಈ ಸಿಹಿ ಸುದ್ದಿ ಸಂಭ್ರಮಪಡುವಂತೆ ಮಾಡಿದೆ. ತಾಯಿ ಪಾರ್ವತಿ ನಿಲಂಗಿಯವರ ಜತೆ ಇರುವ ಸ್ಪರ್ಶಾ ಇಡೀ ದಿನ ಖುಷಿಯಲ್ಲಿದ್ದಾರೆ.
    2017ರಲ್ಲಿಯೇ ಐಎಎಸ್ ಪರೀಕ್ಷೆ ಕಟ್ಟಿದ್ದ ಸ್ಪರ್ಶಾ ಆಗ 805ನೇ ರ್ಯಾಂಕ್ ಗಳಿಸಿದ್ದರು. ಅವರಿಗೆ ರೈಲ್ವೆ ಇಲಾಖೆಯಲ್ಲಿ
    ಕಾರ್ಯ ನಿರ್ವಹಿಸಲು ಸೂಚಿಸಲಾಗಿತ್ತು. ಆದರೆ ಕಳೆದ ಫಲಿತಾಂಶ ಅವರಿಗೆ ಸಮಾಧಾನ ತಂದಿರಲಿಲ್ಲ. ಹೀಗಾಗಿ 2019ರಲ್ಲಿ
    ಮತ್ತೊಮ್ಮೆ ಪರೀಕ್ಷೆ ಕಟ್ಟಿ ಯಶಸ್ಸು ತಮ್ಮದಾಗಿಸಿಕೊಂಡಿದ್ದಾರೆ.
    ನೀವು ಈ ರೀತಿಯ ಫಲಿತಾಂಶವನ್ನು ನಿರೀಕ್ಷಿಸಿದ್ದಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮೊದಲು ಪರೀಕ್ಷೆ ಕಟ್ಟಿದಾಗ ನನಗೆ ಎಲ್ಲ
    ರೀತಿಯ ಅನುಭವವಾಗಿತ್ತು. ಅದೇ ಈಗ ನನಗೆ ಸ್ಪೂತರ್ಿಯಾಯಿತು. ಅಂತೆಯೇ ನಾನು ರೀತಿಯ ಫಲಿತಾಂಶ ನಿರೀಕ್ಷಿಸಿದ್ದೆ ಎಂದು ಪ್ರತಿಕ್ರಿಯಿಸಿದರು.
    ಸ್ಪಶರ್ಾ ಕಲಬುರಗಿಯವರೇ ಆಗಿದ್ದಾರೆ. ದಿ. ಡಾ. ಶರಣಪ್ಪ ನಿಲಂಗಿ ಮತ್ತು ಪಾರ್ವತಿ ನಿಲಂಗಿಯವರ ಏಕೈಕ ಪುತ್ರಿಯಾದ ಇವರು ತಮ್ಮ ಪ್ರಾರಂಭಿಕ ಶಿಕ್ಷಣದಿಂದ ಪಿಯುಸಿವರೆಗೆ ಇಲ್ಲಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಮುಗಿಸಿದ್ದಾರೆ. ಮುಂದೆ ಬೆಂಗಳೂರಿಗೆ ತೆರಳಿ ಅಲ್ಲಿ ಪದವಿ ಮುಗಿಸಿದರು. ಅದಾದ ಮೇಲೆ ಐಎಎಸ್ ಮಾಡಬೇಕೆನ್ನುವ ಛಲಗಾರಿಕೆ ಅವರ ಮನದಲ್ಲಿ ಮೂಡಿದ್ದೇ ತಡ ತರಬೇತಿಗೆ ಎಲ್ಲ ಸಿದ್ಧತೆ ಮಾಡಿಕೊಂಡರು.
    ದೆಹಲಿಗೆ ತೆರಳಿ ಅಲ್ಲಿ ಪರೀಕ್ಷೆ ಎದುರಿಸುವುದು, ಸಾಮಾನ್ಯ ಜ್ಞಾನ ಹೀಗೆ ನಾನಾ ವಿಷಯಗಳ ಮೇಲೆ ತರಬೇತಿ ಪಡೆದುಕೊಂಡರು. 2017ರಲ್ಲಿ ಮೊದಲ ಬಾರಿಗೆ ಪರೀಕ್ಷೆ ಎದುರಿಸಿದಾಗ ಯುಪಿಎಸ್ಸಿಯಲ್ಲಿ ಇವರಿಗೆ 800ನೇ ರ್ಯಾಂಕ್ ಬಂದಿತು. ಆರಂಭದಲ್ಲಿ ಇದಕ್ಕೆ ತೃಪ್ತರಾಗದ ಇವರು ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ನಿತ್ಯದ ಕಾರ್ಯದ ಜತೆಗೆ ಮತ್ತೊಂದು ಪ್ರಯತ್ನ ಮಾಡೆಬಿಡೋಣ ಎಂದು ಪ್ರಯತ್ನಿಸಿ ಒಂದೆಡೆ ನೌಕರಿ ಮಾಡುತ್ತಲೇ ಇನ್ನೊಂದೆಡೆ ಪರೀಕ್ಷಾ ಸಿದ್ಧತೆ ನಡೆಸಿ ಈ ಸಲ ಅದರಲ್ಲಿ ಯಶಸ್ವಿಯಾದರು.
    ಸ್ಪರ್ಶಾ ಅವರಿಗೆ ತಂದೆ ಇಲ್ಲ. ಇವರ ತಂದೆ ದಿ. ಶರಣಪ್ಪ ಪಶುಸಂಗೋಪನಾ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ತಾಯಿ ಪಾರ್ವತಿ ಮನೆಯಲ್ಲಿಯೇ ಇರುತ್ತಾರೆ. ತಂದೆ-ತಾಯಿ ಮತ್ತು ದೇವರ ಆಶೀರ್ವಾದದ ಫಲ ಹಾಗೂ ಎಲ್ಲ ಆತ್ಮೀಯರ ನಿರೀಕ್ಷೆ ತನ್ನ ಯಶಸ್ಸಿಗೆ ಕಾರಣ ಎನ್ನುತ್ತಾರೆ ಸ್ಪರ್ಶಾ .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts