More

    ಯಾತ್ರಾಸ್ಥಳ ಅಸೋಗಾ ಅಭಿವೃದ್ಧಿಗೆ ಆದ್ಯತೆ – ಮಹಾಂತೇಶ ಕವಟಗಿಮಠ

    ಖಾನಾಪುರ: ಮಲಪ್ರಭಾ ನದಿ ದಂಡೆ ಮತ್ತು ರಾಮಲಿಂಗೇಶ್ವರ ದೇವಸ್ಥಾನ ಇರುವುದರಿಂದ ಅಸೋಗಾ ಗ್ರಾಮವು ಧಾರ್ಮಿಕ ಮಹತ್ವ ಹೊಂದಿದೆ. ಈ ಯಾತ್ರಾಸ್ಥಳವನ್ನು ಅಭಿವೃದ್ಧಿ ಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುವುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

    ತಾಲೂಕಿನ ಅಸೋಗಾ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ರವಳನಾಥ ದೇವಸ್ಥಾನಗಳನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
    ಅಸೋಗವು ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾಗಿರುವುದರಿಂದ ವರ್ಷವಿಡೀ ಪ್ರವಾಸಿಗರು ಮತ್ತು ಭಕ್ತರು ಬರುತ್ತಾರೆ.

    ಭಕ್ತರಿಗಾಗಿ ನದಿ ದಂಡೆಯಲ್ಲಿ 800 ಮೀಟರ್ ಉದ್ದದ ಘಾಟ್, ಮಂಗಲ ಕಾರ್ಯಾಲಯ, ಪ್ರವಾಸಿಗರು ಮತ್ತು ಭಕ್ತರಿಗೆ ಯಾತ್ರಿ ನಿವಾಸ, ನದಿ ದಂಡೆಯಲ್ಲಿ ಉದ್ಯಾನವನ, ಬೋಟಿಂಗ್ ಯೋಜನೆಗೆ ಮಂಜೂರಾತಿ ನೀಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ ಮಾತನಾಡಿ, ಭಕ್ತಿಗೆ ಅಗಾಧವಾದ ಶಕ್ತಿ ಇದ್ದು, ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಯಶಸ್ಸು ಸಿಗುತ್ತದೆ ಎಂದರು.

    ಟ್ರಸ್ಟ್ ಕಮಿಟಿ ಅಧ್ಯಕ್ಷ ಜಯವಂತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿಯ ಹಿರಿಯ ಮುಖಂಡ ವಿಠ್ಠಲ ಹಲಗೇಕರ, ತಾಲೂಕಾಧ್ಯಕ್ಷ ಸಂಜಯ ಕುಬಲ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಧನಶ್ರೀ ಸರ್ದೇಸಾಯಿ, ಮಾಜಿ ಜಿಪಂ ಸದಸ್ಯ ಜ್ಯೋತಿಬಾ ರೇಮಾನಿ, ಅರಣ್ಯ ನಿಗಮದ ನಿರ್ದೇಶಕ ಸುರೇಶ ದೇಸಾಯಿ, ಪಂಡಿತ ಓಗ್ಲೆ ಮಾತನಾಡಿದರು.

    ರಾಯಚೂರು ನ್ಯಾಯಾಧೀಶೆ ದೀಪಾ ಉತ್ತಮ ಪಾಟೀಲ, ನ್ಯಾಯವಾದಿ ಸಂಘದ ಅಧ್ಯಕ್ಷ ಈಶ್ವರ ಘಾಡಿ, ಡೊಂಗರಗಾಂವ ಮಠಾಧೀಶ ಭಯಂಕರನಾಥ ಮಹಾರಾಜ, ಜಿಪಂ ಮಾಜಿ ಸದಸ್ಯ ಬಾಬುರಾವ ದೇಸಾಯಿ, ಕೆ.ಪಿ.ಪಾಟೀಲ, ಗುಂಡು ತೋಪಿನಕಟ್ಟಿ, ಅಶೋಕ ದೇಸಾಯಿ, ಸದಾನಂದ ಕಪಿಲೇಶ್ವರಿ, ರಾಜೇಂದ್ರ ರೈಕ, ಸೋಮಣ್ಣ ಮೋರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts