More

    ಯಳಂದೂರಿನಲ್ಲೂ ಅಭಿಮಾನಿಗಳ ಆಕ್ರೋಶ


    ಚಾಮರಾಜನಗರ : ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ 4 ಸ್ಥಾನಗಳ ಪೈಕಿ 3 ರಲ್ಲಿ ಜಯ ಗಳಿಸಿದೆ. ಆದರೆ ಈ ಬಾರಿಯ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಅನ್ಯಾಯವಾಗಿದ್ದು ಇಲ್ಲಿನ ಜನರ ನಿರೀಕ್ಷೆಯನ್ನು ಸರ್ಕಾರ ಹುಸಿಗೊಳಿಸಿದೆ ಎಂದು ಯಳಂದೂರು ಪಟ್ಟಣದ ಕಾಂಗ್ರೆಸ್ ಕಚೇರಿ ಬಳಿ ಶನಿವಾರ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


    ಈ ಸಂದರ್ಭದಲ್ಲಿ ಪಪಂ ಸದಸ್ಯ ಮಹೇಶ್ ಮಾತನಾಡಿ, ಜಿಲ್ಲೆಯಲ್ಲಿ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಇಲ್ಲಿನ ಅಭ್ಯರ್ಥಿಗಳಲ್ಲಿ ನಾಲ್ಕು ಬಾರಿ ಜಯ ಗಳಿಸಿರುವ ಚಾಮರಾಜನಗರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನವನ್ನು ನೀಡುವ ಭರವಸೆ ಇತ್ತು. ಆದರೆ ಇವರಿಗೆ ಉಪ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಕೊಳ್ಳೇಗಾಲದಲ್ಲಿ ಎ.ಆರ್. ಕೃಷ್ಣಮೂರ್ತಿ ಹಾಗೂ ಗುಂಡ್ಲುಪೇಟೆಯಲ್ಲಿ ಗಣೇಶ್‌ಪ್ರಸಾದ್ ಕೂಡ ಜಯ ಗಳಿಸಿದ್ದಾರೆ. ಅವರನ್ನೂ ಕಡೆಗಣಿಸಲಾಗಿದೆ ಎಂದರು.


    ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಮಾತನಾಡಿ, ಸಿ. ಪುಟ್ಟರಂಗಶೆಟ್ಟಿ ಉಪ್ಪಾರ ಸಮುದಾಯದ ಪ್ರಬಲ ನಾಯಕರಾಗಿದ್ದು, ರಾಜ್ಯದ ಏಕೈಕ ಶಾಸಕರಾಗಿದ್ದಾರೆ. ಈ ಹಿಂದೆ ಪುಟ್ಟರಂಗಶೆಟ್ಟಿ ಸಚಿವರಾಗಿದ್ದರು. ಈ ಬಾರಿಯೂ ಇವರಿಗೆ ಸಚಿವ ಸ್ಥಾನ ಲಭಿಸುವ ಭರವಸೆ ಇತ್ತು. ಆದರೆ ಇದು ಹುಸಿಯಾಗಿದ್ದು ಈ ಬಗ್ಗೆ ಸಂಬಂಧಪಟ್ಟವರು ಕ್ರಮ ವಹಿಸಬೇಕು ಎಂದರು.


    ಪಪಂ ಸದಸ್ಯ ವೈ.ಜಿ. ರಂಗನಾಥ ಮಾತನಾಡಿ, ಸಿ.ಪುಟ್ಟರಂಗಶೆಟ್ಟಿ ಅವರ ಹೆಸರು ಸಚಿವರ ಅಂತಿಮ ಪಟ್ಟಿಯಲ್ಲಿತ್ತು. ಆದರೆ ಮಧ್ಯರಾತ್ರಿ ಏಕಾಏಕಿ ಇವರ ಹೆಸರು ತೆಗೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇವರಿಗೆ ಸಚಿವ ಸ್ಥಾನವನ್ನು ನೀಡಲು ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


    ರಿಜ್ವಾನ್, ಮಾರನಾಯಕ, ಲಿಂಗರಾಜು, ಮಲ್ಲು, ರಾಜಶೇಖರ್, ಗ್ರಾಪಂ ಸದಸ್ಯ ಸ್ವಾಮಿ, ಪುಟ್ಟ, ಕೆ. ವೆಂಕಟೇಶ್, ಎ. ವೆಂಕಟೇಶ್, ಇಬ್ರಾಹಿಂ, ಮಹದೇವಶೆಟ್ಟಿ, ಗೋವಿಂದಶೆಟ್ಟಿ, ಕುಮಾರ, ರಂಗಸ್ವಾಮಿ, ನಿಂಗರಾಜು, ರಾಜಶೇಖರ್, ಗೋವಿಂದನಾಯಕ, ಕಾಮಶೆಟ್ಟಿ ದುಗ್ಗಹಟ್ಟಿ ಕಾಮರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts