More

    ಯಲ್ಲಾಪುರ ಹೆರಿಗೆ ಆಸ್ಪತ್ರೆಗೆ ಸೂರ್ಯಶಕ್ತಿ

    ಶ್ರೀಧರ ಅಣಲಗಾರ ಯಲ್ಲಾಪುರ

    ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವಾರದಲ್ಲಿ ಸುಸಜ್ಜಿತ ಸೌರಶಕ್ತಿ ಆಧಾರಿತ ಪ್ರಸೂತಿಗೃಹ ನಿರ್ವಣವಾಗಿದ್ದು, ಹೆರಿಗೆಯಲ್ಲಿ ಸಮಸ್ಯೆ ಉಂಟಾದಾಗ ಮಹಿಳೆಯರನ್ನು ದೂರದ ಊರುಗಳ ಆಸ್ಪತ್ರೆಗೆ ಕರೆದೊಯ್ಯುವುದು ಇನ್ನು ಮುಂದೆ ತಪ್ಪಲಿದೆ.

    ತಾಲೂಕು ಪಂಚಾಯಿತಿಯ ಅನುದಾನ ಹಾಗೂ ಸೆಲ್ಕೊ ಫೌಂಡೇಷನ್ ಸಹಯೋಗದಲ್ಲಿ ಜಿಲ್ಲೆಯಲ್ಲೇ ಮೊದಲ ಸೌರಶಕ್ತಿ ಆಧಾರಿತ ಪ್ರಸೂತಿಗೃಹ ತಲೆಯೆತ್ತಿದೆ. ತಾಪಂನ 2021 ನೇ ಸಾಲಿನ ಹೆರಿಗೆ ಕೋಣೆ ಬಲವರ್ಧನೆ ಯೋಜನೆಯಡಿ 6 ಲಕ್ಷ ರೂಪಾಯಿ ಅನುದಾನ ವನ್ನು ಇದಕ್ಕೆ ನೀಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಬೇಕಾದ ಅನುದಾನವನ್ನು ತಾಪಂ ಅಧ್ಯಕ್ಷೆ ಚಂದ್ರಕಲಾ ಭಟ್ಟ ಅವರು ಸದಸ್ಯರ ಮನವೊಲಿಸಿ ಈ ಪ್ರಸೂತಿಗೃಹ ನಿರ್ವಣಕ್ಕೆ ನೀಡಿದ್ದಾರೆ.

    ಸೆಲ್ಕೊ ಫೌಂಡೇಷನ್​ನ ಸಹಕಾರದೊಂದಿಗೆ ಸುಸಜ್ಜಿತ ಹೆರಿಗೆ ಕೋಣೆ ಯಲ್ಲಾಪುರದಲ್ಲಿ ನಿರ್ವಣಗೊಳ್ಳಲು ಫೌಂಡೇಷನ್​ನ ಸಂಸ್ಥಾಪಕ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ ಹಂದೆ ಹಾಗೂ ಚಂದ್ರಕಲಾ ಭಟ್ಟ ಪ್ರಮುಖ ಪಾತ್ರ ವಹಿಸಿದ್ದಾರೆ. ಸೆಲ್ಕೊ ಫೌಂಡೇಷನ್​ನವರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡದ ನಿರ್ವಣ, ಆಧುನಿಕ ಯಂತ್ರೋ ಪಕರಣಗಳು, ಸೋಲಾರ್ ಇತ್ಯಾದಿ ವ್ಯವಸ್ಥೆಗಳನ್ನು ಮಾಡಿದ್ದು, ಒಟ್ಟು 31 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ವಣಗೊಂಡಿದೆ.

    ಸಂಪೂರ್ಣ ಸೋಲಾರ್ ಆಧಾರಿತ ವ್ಯವಸ್ಥೆಯನ್ನು ಕಟ್ಟಡ ಹೊಂದಿದೆ. ಹೆರಿಗೆಗೆ ಅಗತ್ಯವಾದ ಆಧುನಿಕ ಯಂತ್ರೋಪಕರಣಗಳು, ಬೇಬಿ ವಾರ್ಮರ್, ರಕ್ತ ಸಂಗ್ರಹಣಾ ಘಟಕ ಇತ್ಯಾದಿ ವ್ಯವಸ್ಥೆಗಳನ್ನು ಈ ಕೊಠಡಿ ಹೊಂದಿದೆ. ಪ್ರಸೂತಿಗೃಹ ಆರಂಭವಾಗುವುದರಿಂದ ತಾಲೂಕಿನ ಮಹಿಳೆಯರಿಗೆ ಹೆರಿಗೆ ವೇಳೆ ಸಮಸ್ಯೆ ಉಂಟಾದರೆ ಶಿರಸಿ, ಮಂಗಳೂರು, ಹುಬ್ಬಳ್ಳಿಯ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆಗೆ ತೆರೆ ಬೀಳಲಿದೆ.

    ಸರ್ಕಾರಿ ಆಸ್ಪತ್ರೆಯಲ್ಲಿ ಸುಸಜ್ಜಿತ ಹೆರಿಗೆ ಕೋಣೆ ನಿರ್ವಣದಿಂದ ತಾಲೂಕಿನ ಜನತೆಗೆ ಅನುಕೂಲವಾಗಲಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬಲ್ಲ ತರಬೇತಿ ಹೊಂದಿದ ವೈದ್ಯರು ನಮ್ಮಲ್ಲಿದ್ದು, ಸೆಲ್ಕೊ ಫೌಂಡೇಷನ್ ಹಾಗೂ ತಾಪಂ ಅನುದಾನದಿಂದ ನಿರ್ವಣಗೊಂಡ ಪ್ರಸೂತಿಗೃಹ ಸದ್ಭಳಕೆಯಾಗಲಿದೆ. | ಡಾ.ರಾಮಾ ಹೆಗಡೆ ಆಡಳಿತ ವೈದ್ಯಾಧಿಕಾರಿ, ತಾಲೂಕು ಆಸ್ಪತ್ರೆ ಯಲ್ಲಾಪುರ

    ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಆಧುನಿಕ ಸೌಲಭ್ಯಗಳನ್ನು ನೀಡಿದರೆ ವೈದ್ಯರೂ ಸಂತಸದಿಂದ ಕಾರ್ಯನಿರ್ವಹಿಸಲು ಸಾಧ್ಯ. ಅಲ್ಲದೆ, ಜನರಿಗೂ ಅನುಕೂಲವಾಗುವುದು. ಸರ್ಕಾರವೂ ಬೇರೆಡೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿಯ ವ್ಯವಸ್ಥೆ ಕಲ್ಪಿಸುವ ಅವಕಾಶವಿದೆ ಎಂಬುದಕ್ಕೆ ಮಾದರಿಯಾಗಿ ಯಲ್ಲಾಪುರದಲ್ಲಿ ಸುಸಜ್ಜಿತ ಪ್ರಸೂತಿಗೃಹ ನಿರ್ವಿುಸಿದ್ದೇವೆ. ಸರ್ಕಾರ ಬೇರೆಡೆ ಇದನ್ನು ಮಾಡುವುದಿದ್ದರೆ ಸೆಲ್ಕೊ ಫೌಂಡೇಷನ್ ಸದಾ ಸಹಕಾರ ನೀಡಲಿದೆ. | ಮಂಜುನಾಥ ಭಾಗ್ವತ ಏರಿಯಾ ಮ್ಯಾನೇಜರ್, ಸೆಲ್ಕೊ ಫೌಂಡೇಷನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts