More

    ಯಲ್ಲಾಪುರ ವಿಭಾಗಕ್ಕೆ ಅತ್ತಿವೇರಿ ಪಕ್ಷಿಧಾಮ

    ಮುಂಡಗೋಡ: ತಾಲೂಕಿನ ಅತ್ತಿವೇರಿ ಪಕ್ಷಿಧಾಮವನ್ನು ಯಲ್ಲಾಪುರ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಆಡಳಿತ ವ್ಯಾಪ್ತಿಗೆ ಒಳಪಡಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ ಆದೇಶ ಹೊರಡಿಸಿದ್ದಾರೆ.

    ಈವರೆಗೆ ದಾಂಡೇಲಿಯ ಕಾಳಿ ಹುಲಿ ಯೋಜನೆ ವ್ಯಾಪ್ತಿಗೆ ಅತ್ತಿವೇರಿ ಪಕ್ಷಿಧಾಮ ಒಳಪಟ್ಟಿತ್ತು. ಪಕ್ಷಿಧಾಮ ಇರುವುದು ಒಂದೆಡೆಯಾದರೆ, ನಿರ್ವಹಣೆ ಇನ್ನೊಂದು ಕಡೆ ಇತ್ತು. ಪ್ರತಿವರ್ಷ ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಇಲ್ಲಿ ಅಭಿವೃದ್ಧಿ ಕುಂಠಿತಗೊಂಡಿತ್ತು.

    ಶಾಸಕರ ಮನವಿಗೆ ಸ್ಪಂದನೆ: ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಅತ್ತಿವೇರಿ ಪಕ್ಷಿಧಾಮವನ್ನು ಯಲ್ಲಾಪುರ ಉಪ ವಿಭಾಗಕ್ಕೆ ಹಸ್ತಾಂತರಿಸುವಂತೆ ಶಾಸಕ ಶಿವರಾಮ ಹೆಬ್ಬಾರ ಅವರು ಈ ಹಿಂದೆ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಿದ್ದರು. 70 ಕಿ.ಮೀ. ದೂರದಲ್ಲಿರುವ ಕುಳಗಿ ವನ್ಯಜೀವಿಧಾಮದ ಅಧೀನಕ್ಕೆ ಈ ಪಕ್ಷಿಧಾಮ ಒಳಪಡಿಸಿರುವುದನ್ನು ರದ್ದುಪಡಿಸುವಂತೆ ಆಗ್ರಹಿಸಿದ್ದರು. ಶಾಸಕರ ಮನವಿ ಪರಿಗಣಿಸಿ ಅರಣ್ಯಪಡೆ ಮುಖ್ಯಸ್ಥರು ಈಗ ಆದೇಶ ಹೊರಡಿಸಿದ್ದಾರೆ. ಅತ್ತಿವೇರಿ ಪಕ್ಷಿಧಾಮವನ್ನು ದೇಶ- ವಿದೇಶ ಹಕ್ಕಿಗಳ ಹೆರಿಗೆ ಆಸ್ಪತ್ರೆ ಎಂದೇ ಗುರುತಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts