More

    ಯಮನೂರು ಗ್ರಾಮಕ್ಕೆ ಕಲುಷಿತ ನೀರು

    ನವಲಗುಂದ: ಕರೊನಾ ರೋಗ ಭೀತಿಯಿಂದ ಮುಂಜಾಗ್ರತೆ ಕ್ರಮವಾಗಿ ರಾಜ್ಯ ಸರ್ಕಾರವು ಜಾತ್ರೆ, ಮದುವೆ, ಸಭೆ, ಸಮಾರಂಭಗಳಿಗೆ ಒಂದು ವಾರ ನಿಷೇಧ ಹೇರಿದ್ದರೂ ತಾಲೂಕಿನ ಯಮನೂರ ಗ್ರಾಮದಲ್ಲಿ ಮಾತ್ರ ಚಾಂಗದೇವನ ಜಾತ್ರೆ ಸಾಂಗವಾಗಿ ಮುಂದುವರಿದಿದೆ.

    ಭಕ್ತರಲ್ಲಿ ಕರೊನಾ ಭೀತಿ ಒಂದೆಡೆಯಾದರೆ, ಮತ್ತೊಂದೆಡೆ ಗ್ರಾಮಕ್ಕೆ ಮತ್ತು ಭಕ್ತರಿಗೆ ಕೆರೆಯ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಕಲುಷಿತ ನೀರು ಸೇವಿಸಿದ ಮಕ್ಕಳು, ವೃದ್ಧರು, ಮಹಿಳೆಯರು ಮತ್ತು ಗ್ರಾಮಸ್ಥರು ಹೊಟ್ಟೆ ನೋವು, ವಾಂತಿ, ಭೇದಿಗೆ ತುತ್ತಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಚಾಂಗದೇವನ ಜಾತ್ರೆಗೆ ಭಕ್ತರ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದೆ. ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸá-ತ್ತಿದ್ದಾರೆ. ಜಾತ್ರೆಯ ಸಾರ್ವಜನಿಕ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಚಾಂಗದೇವರ ಜಾತ್ರೆ ಪ್ರಾರಂಭವಾಗಿದ್ದು, ಈಗಾಗಲೇ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ರಾಯಚೂರು, ಕಲಬá-ರಗಿ, ವಿಜಯಪುರ, ಗದಗ, ಬಾಗಲಕೋಟೆ, ಬೆಳಗಾವಿ ಸೇರಿ ರಾಜ್ಯದ ವಿವಿಧೆಡೆಯಿಂದ ಭಕ್ತರು ಬರುತ್ತಾರೆ.

    ಚಾಂಗದೇವನ ಜಾತ್ರೆಯಲ್ಲಿ ಬಾಡೂಟ ತಯಾರಿಸಿ ಸವಿಯುತ್ತಾರೆ. ಇದರಿಂದ ಜಾತ್ರೆಯಲ್ಲಿ ಮಾಂಸ, ಬಿಸಾಕಿದ ತ್ಯಾಜ್ಯದಿಂದಲೂ ವಾತಾವರಣ ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಕಾಣಿಸುತ್ತವೆ.

    ಈಗಾಗಲೇ ಕೆರೆ ಸುತ್ತಲೂ ಗಿಡಗಂಟಿ ತೆಗೆಸಿ ಕೆರೆ ಸ್ವಚ್ಛಗೊಳಿಸಿದ್ದೇವೆ. ಕೆರೆ ನೀರು ಕಲುಷಿತಗೊಳ್ಳದಂತೆ ನೋಡಿಕೊಂಡಿದ್ದೇವೆ. ಕೆರೆಯ ಕೋಡಿ ನೀರು ಹೊರಗೆ ಹಾಕದೆ ಕೆರೆಗೆ ನೀರು ತುಂಬಿಸಿಕೊಂಡಿದ್ದರಿಂದ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಆದರೂ ವೈದ್ಯಾಧಿಕಾರಿಗಳು ತಪಾಸಣೆ ನಡೆಸಿ ನೀರು ಕ್ರಮಬದ್ಧವಾಗಿದೆ ಎಂದು ತಿಳಿಸಿದ್ದಾರೆ. ನಿತ್ಯ ಲ್ಯಾಬ್ ಟೆಸ್ಟಿಂಗ್ ಮಾಡಿಸಿ ನೀರಿನ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದೇವೆ. ಗ್ರಾಮಸ್ಥರು ಯಾವುದಕ್ಕೂ ಭಯಪಡಬಾರದು. | ನವೀನ ಹುಲ್ಲೂರ ತಹಸೀಲ್ದಾರ್, ನವಲಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts