More

    ಯಡಿಐಡಿ ಕಾರ್ಡ್,ಅಂಗವಿಕಲರಲ್ಲಿ ಜಾಗೃತಿ ಮೂಡಿಸಿ

    ಚಿತ್ರದುರ್ಗ: ಕೀಳರಿಮೆ,ಸಂಕೋಚ ಬಿಟ್ಟು ಯುಡಿಐಡಿ ಕಾರ್ಡ್ ಮಾಡಿಸಿಕೊಳ್ಳುವ ಮೂಲಕ ಸರ್ಕಾರಿ ಸವಲತ್ತುಗಳ ಸುದುಪಯೋಗ ಪಡೆದುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಎಂ.ವೀಣಾ ಅಂಗವಿಕಲರಿಗೆ ಮನವಿ ಮಾಡಿದರು.
    ಬೆಂಗಳೂರು ಎನೇಬಲ್‌ಇಂಡಿಯಾ ಸಂಸ್ಥೆ, ಸ್ಫೂರ್ತಿ ಅಂಗವಿಕಲರ ಟ್ರಸ್ಟ್,ಜನಮುಖಿ ಶಿಕ್ಷಣ ಸಂಸ್ಥೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಸಹಯೋಗದೊಂದಿಗೆ ನಗರದ ಕ್ರೀಡಾಭವನದಲ್ಲಿ ಮಂಗಳವಾರ ಏರ್ಪಡಿ ಸಿದ್ದ ನಮ್ಮ ವಾಣಿ ಸಮುದಾಯ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಈ ಕಾರ್ಯಕ್ರಮ ನಮ್ಮ ಇಲಾಖೆಗೆಯದ್ದಾಗಿದ್ದು,ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಅಂಗವಿಕಲರಿಗೆ ಕಾ ರ್ಡ್ ಮಾಹಿತಿ ಹಾಗೂ ಅದರ ದೊರೆಯುವ ನಾನಾ ಪ್ರಯೋಜನಗಳ ಬಗ್ಗೆ ತಿಳಿಸ ಬೇಕೆಂದರು.
    ಕಾರ‌್ಯಕ್ರಮ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ವಿಜಯ್‌ಕುಮಾರ್ ಮಾತನಾಡಿ,ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಅಂಗವಿಕಲರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕೆಂದರು.
    ವಕೀಲ ಬಿ.ಕೆ.ರಹಮತ್‌ವುಲ್ಲಾ ಮಾತನಾಡಿ,ಹಿರಿಯ ನಾಗರಿಕರು ಮಕ್ಕಳಿಂದ ಕಿರುಕುಳಕ್ಕೆ ಒಳಗಾದರೆ ಉಪವಿಭಾಗಾಧಿಕಾರಿಗೆ ದೂರು ಕೊಟ್ಟು ರಕ್ಷಣೆ ಪಡೆದುಕೊಳ್ಳಬಹುದೆಂದರು.ಎನೋಬಲ್ ಇಂಡಿಯಾದ ಮುಖ್ಯಸ್ಥೆ ರೋಸ್ಲಿನ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷೆ ತಿಪ್ಪಮ್ಮ ಅಧ್ಯಕ್ಷತೆ ವಹಿಸಿದ್ದರು. ಏನೋಬಲ್ ಇಂಡಿಯಾದ ಗುರುಪ್ರಸಾದ್, ಸಾಮಾಜಿಕ ಕಾರ್ಯಕರ್ತ ನರೇನಹಳ್ಳಿಅರುಣ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts