More

    ಮೋದಿ ಸಮಾವೇಶಕ್ಕೆ 5 ಲಕ್ಷ ಜನ ನಿರೀಕ್ಷೆ

    ಬೆಳಗಾವಿ: ಇಲ್ಲಿನ ಬಿ.ಎಸ್.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಫೆ.27ರಂದು ಜರುಗಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ಲಕ್ಷಾಂತರ ಜನರಿಗೆ ಊಟ, ಪಾರ್ಕಿಂಗ್ ಇತರ ವ್ಯವಸ್ಥೆ ಮಾಡಲು 1,600 ಸ್ವಯಂ ಸೇವಕರನ್ನು ನಿಯೋಜನೆ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

    ಸದಾಶಿವ ನಗರದ ರಡ್ಡಿ ಸಭಾಂಗಭದಲ್ಲಿ ಬುಧವಾರ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗುಮಿಸುತ್ತಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾವೇಶಕ್ಕೆ ಸುಮಾರು 5 ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಇಂತಹ ಸಂದರ್ಭದಲ್ಲಿ ಊಟ, ಪಾರ್ಕಿಂಗ್, ಆಸನಗಳ ಸಮಸ್ಯೆ ಉಂಟಾಗಬಾರದು. ಅಲ್ಲದೆ, ಯಾವುದೇ ರೀತಿಯ ಅಹಿತಕ ಘಟನೆಗಳ ಸಂಭವಿಸದಂತೆ ಸ್ವಯಂ ಸೇವಕರು, ಪ್ರಬಂಧಕರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು..

    ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಷೋ, ವಿವಿಧ ಅಭಿವೃದ್ಧಿ ಕೆಲಸಗಳ ಉದ್ಘಾಟನೆ ಸೇರಿ ವಿವಿಧ ಕಾರ್ಯಕ್ರಮ ಜರುಗಲಿವೆ. ಹಾಗಾಗಿ, ಪಕ್ಷದ ವಹಿಸಿದ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸಮಾವೇಶಕ್ಕೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಮೋದಿ ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯಕರ್ತರು ಅಲ್ಲದೆ, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕರ್ತರು, ಮುಖಂಡರು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಕೊನೆಯ ಗಳಿಗೆಯಲ್ಲಿ ಕಾರ್ಯಕ್ರಮ, ಸಮಯ ಬದಲಾವಣೆ ಸಾಧ್ಯತೆಯಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಕ್ಷದ ಮುಖಂಡರು ಕೈಗೊಳ್ಳಬೇಕು. ಈ ವಿಷಯದಲ್ಲಿ ಯಾರೂ ನಿರ್ಲಕ್ಷೃ ವಹಿಸಬೇಡಿ ಎಂದು ಹೇಳಿದರು.

    ಬೆಳಗಾವಿ ಮಹಾನಗರ ಜಿಲ್ಲಾ ಅಧ್ಯಕ್ಷರು ಹಾಗೂ ಶಾಸಕ ಅನಿಲ ಬೆನಕೆ, ಪಾಲಿಕೆ ಮೇಯರ್ ಶೋಭಾ ಸೋಮನಾಚೆ, ಉಪಮೇಯರ ರೇಷ್ಮಾ ಪಾಟೀಲ, ಪ್ರಮುಖರಾದ ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವನಾಚೆ, ರಾಜ್ಯ ವಕ್ತಾರರಾದ ಎಂ.ಬಿ. ಝಿರಲಿ, ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಬಸವರಾಜ ಯಂಕಂಚಿ, ಪ್ರಕಾಶ ಅಕ್ಕಲಕೋಟ, ಎಂ.ಸಿ. ಜಯಪ್ರಕಾಶ, ದಾದಾಗೌಡ ಬಿರಾದಾರ, ಗೀತಾ ಸುತಾರ, ವಿಜಯ ಕೊಡಗಾನೂರ, ಶರದ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts