More

    ಮೋದಿ, ಶಾ ನೇತೃತ್ವದಲ್ಲಿ ರೂಪುರೇಷೆ ಸಿದ್ಧ; ಚುನಾವಣಾ ಯುದ್ಧಕ್ಕೆ ಬಿಜೆಪಿ ಸಜ್ಜು: ಸಿ.ಟಿ.ರವಿ

    ಸೊರಬ: ಬಿಜೆಪಿಗಿರುವ ಚುನಾವಣೆಯ ಸಂಘಟನೆ, ನೇತೃತ್ವ, ವಾತಾವರಣ ನಮ್ಮ ಎದುರಾಳಿಗಳಾದ ಕಾಂಗ್ರೆಸ್, ಜೆಡಿಎಸ್‌ಗಿಲ್ಲ. ಎರಡು ಪಕ್ಷಗಳು ನಿರಾಯಾಸವಾಗಿ ಸೋಲುಣ್ಣಲಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
    ಸೋಮವಾರ ಪಟ್ಟಣದಲ್ಲಿ ತಾಲೂಕು ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಪೇಜ್ ಪ್ರಮುಖರ ಸಮಾವೇಶದಲ್ಲಿ ಪೇಜ್ ಪ್ರಮುಖರ ಸಾಕ್ಷ್ಯಾಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿ, ಚುನಾವಣೆ ಯುದ್ಧಕ್ಕೆ ಸಮಾನವಾದದ್ದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ನೇತೃತ್ವದಲ್ಲಿ ಚುನಾವಣಾ ಯುದ್ಧಕ್ಕೆ ರೂಪುರೇಷೆ ಸಿದ್ಧವಾಗಿದೆ. ಅದಕ್ಕೆ ಜೋಡೆತ್ತಿನಂತೆ ಲೋಕಸಭಾ ಸದಸ್ಯರು ಹಾಗೂ ಶಾಸಕರ ಅಭಿವೃದ್ಧಿ ಕೆಲಸಗಳು ಶ್ರೀರಕ್ಷೆಯಾಗಿವೆ ಎಂದರು.
    ನಾಲ್ವರು ಮುಖ್ಯಮಂತ್ರಿಗಳನ್ನು ಪಡೆದ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಆಡಳಿತದಿಂದ ಯಾವುದೇ ಅಭಿವೃದ್ಧಿಯಾಗಲಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಅಭಿವೃದ್ಧಿ ಕಹಳೆ ಮೊಳಗಿಸಿದ್ದು ಬಿಜೆಪಿ ಆಡಳಿತದಲ್ಲಿ ಜಿಲ್ಲೆಗೆ 1 ಲಕ್ಷ ಕೋಟಿ ರೂ. ಅನುದಾನ ನೀಡಿ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಶಾದಿ ಭಾಗ್ಯ ಒಂದೇ ಕಾಂಗ್ರೆಸ್‌ನ ಕೊಡುಗೆಯಾಗಿದ್ದು ಮತದಾನ ಕೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
    ವೀರಶೈವ ಲಿಂಗಾಯತರನ್ನು ಒಡೆದ ಸಿದ್ದ ರಾಮಯ್ಯ ನಿರಂತರವಾಗಿ ಜಾತಿ, ಧರ್ಮ ವಿಷಯಾಂತರ ಮಾಡುತ್ತಾರೆ. ನಾಡಿನಲ್ಲಿ 29 ಹಿಂದು ಕಾರ್ಯಕರ್ತರ ಹತ್ಯೆಯಾಗಿದ್ದು ಜನ ಎಚ್ಚೆತ್ತು ರಾಷ್ಟ್ರ ರಕ್ಷಣೆಗೆ ಬಿಜೆಪಿ ಬೆಂಬಲಿಸಬೇಕಿದೆ. ಮತಕ್ಕಿಂತ ಸಿದ್ಧಾಂತ, ದೇಶ ದೊಡ್ಡದು. ಎಲ್ಲರನ್ನು ಮೇಲೆತ್ತುವ ದೃಷ್ಟಿಯಲ್ಲಿ ಸರ್ಕಾರಗಳು ಹಲವು ಯೋಜನೆಗಳನ್ನು ಹೊರ ತಂದಿದ್ದು ಶೇ.70 ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳಿದ್ದಾರೆ ಎಂದು ತಿಳಿಸಿದರು.
    ಕೇಂದ್ರದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ನಾಯಕತ್ವ ಬಿಜೆಪಿಗಿದೆ. ಹಾಗೆಯೇ ರಾಜ್ಯದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು ನಮ್ಮ ನಾಯಕರಾಗಿದ್ದು ಅವರ ನೇತೃತ್ವದಲ್ಲಿ ಕಾರ್ಯಕರ್ತರು ತಳಹಂತದ ಸಂಘಟನೆ ಮಾಡಿ ಮತದಾರರನ್ನು ಸೆಳೆಯಬೇಕಿದೆ. ಪ್ರತಿಷ್ಠೆ ಬಿಟ್ಟು, ಬೇಧ ಭಾವಗಳನ್ನು ತೊರೆದು ಸಮಾಧಾನದಿಂದ ಕೆಲಸ ಮಾಡಿ ಮತಗಳನ್ನು ಸೆಳೆಯಲು ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು.
    ನಮೋ ವೇದಿಕೆ ಸದಸ್ಯರು ಗೈರು: ಸಭೆಗೂ ಮೊದಲು ಶ್ರೀ ರಂಗನಾಥ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರು ಬೈಕ್ ರ‌್ಯಾಲಿಯ ಮೂಲಕ ರಾಜ್ಯ ನಾಯಕರನ್ನು ಸಭೆಗೆ ಕರೆತಂದರು. ಸಭೆಯಲ್ಲಿ ಅಂದಾಜು 2 ಸಾವಿರ ಜನರು ಪಾಲ್ಗೊಂಡಿದ್ದರು. ಶಾಸಕ ಕುಮಾರ್ ಬಂಗಾರಪ್ಪ ಅವರ ವಿರೋಧಿ ಬಣವಾದ ನಮೋ ವೇದಿಕೆಯವರು ಪಾಲ್ಗೊಂಡಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts