More

    ಮೊದಲ ಹಂತದ ಹೋರಾಟ ಇಂದಿನಿಂದ

    ಹಾವೇರಿ: ವೇತನ ತಾರತಮ್ಯ ನಿವಾರಣೆ ಮತ್ತಿತರ ಸೌಲಭ್ಯಗಳಿಗಾಗಿ ಸರ್ಕಾರದ ಗಮನ ಸೆಳೆಯಲು ಜ. 3ರಿಂದ ನಾಲ್ಕು ಹಂತಗಳಲ್ಲಿ ಹೋರಾಟ ರೂಪಿಸಲಾಗಿದೆ ಎಂದು ರಾಜ್ಯ ಸರ್ಕಾರಿ ಫಾರ್ವಸಿಸ್ಟ್ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಪಾಟೀಲ ತಿಳಿಸಿದರು.

    ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲ ಹಂತದಲ್ಲಿ ಜ. 3ರಿಂದ 12ರವರೆಗೆ ರಾಜ್ಯಾದ್ಯಂತ ಫಾರ್ವಸಿಸ್ಟ್​ಗಳೆಲ್ಲರೂ ಕಪ್ಪುಪಟ್ಟಿ ಧರಿಸಿ ಕೆಲಸ ನಿರ್ವಹಿಸಲಿದ್ದಾರೆ. 2ನೇ ಹಂತದಲ್ಲಿ ಜ. 30ರಂದು ಬೆಂಗಳೂರು ಫ್ರೀಡಂ ಪಾರ್ಕ್​ನಲ್ಲಿ ರ‍್ಯಾಲಿ ನಡೆಸಿ ಆರೋಗ್ಯ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು. 3ನೇ ಹಂತದಲ್ಲಿ ಮಾ. 10ರಿಂದ 17ರವರೆಗೆ ಎಲ್ಲ ಹಂತದ ಆಸ್ಪತ್ರೆಗಳ ಹೊರರೋಗಿಗಳ ಸೇವಾ ವಿಭಾಗದಲ್ಲಿ ಫಾರ್ವಸಿಸ್ಟ್ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು. 4ನೇ ಹಂತದಲ್ಲಿ ಏ. 10ರಿಂದ ಬೇಡಿಕೆ ಈಡೇರುವವರೆಗೆ ಇಲಾಖೆಯ ಇನ್ನಿತರ ಸಂಘಗಳೊಂದಿಗೆ ಸೇರಿ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಲಾಗುವುದು’ ಎಂದರು.

    ಬೇಡಿಕೆಗಳು: ಇಂಜಿನಿಯರಿಂಗ್ ಡಿಪ್ಲೊಮಾದಂತೆ ವೇತನ ಭತ್ಯೆ ನೀಡಬೇಕು. ನೆರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಫಾರ್ವಸಿಸ್ಟ್​ಗಳು ಪಡೆಯುವ ಎಲ್ಲ ಸೌಲಭ್ಯಗಳನ್ನು ನಮಗೂ ವಿಸ್ತರಿಸಬೇಕು. ವಿದ್ಯಾರ್ಹತೆಗೆ ಅನುಗುಣವಾಗಿ ವೃಂದ ಮತ್ತು ನೇಮಕಾತಿ ಬದಲಾಯಿಸಿ ಬಡ್ತಿ ನೀಡಬೇಕು. ಜನಸಂಖ್ಯೆ ಹಾಗೂ ಆಸ್ಪತ್ರೆಗಳ ಹಾಸಿಗೆಗಳ ಸಾಂದ್ರತೆಯ ಮೇಲೆ ಹೆಚ್ಚಿನ ಹುದ್ದೆ ಸೃಷ್ಟಿಸಬೇಕು. ಸೇವಾನಿರತರಿಗೆ ಉನ್ನತ ವ್ಯಾಸಾಂಗಕ್ಕೆ ಇಲಾಖೆಯ ಇನ್ನಿತರರಿಗೆ ನೀಡಿರುವಂತೆ ಸೀಟು ಕಾಯ್ದಿರಿಸಲು ಸರ್ಕಾರ ಶಿಫಾರಸ್ಸು ಮಾಡಬೇಕು. ನೂತನ ಔಷಧಿಗಳ ಕುರಿತು ಅರಿಯಲು ಪುನರ್ಮನನ ಕಾರ್ಯಕ್ರಮ ಆರಂಭಿಸಬೇಕು. ಔಷಧಿಗಳ ಉಗ್ರಾಣಗಳನ್ನು ಅಭಿವೃದ್ಧಿ ಪಡಿಸಬೇಕು. ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ರಾಷ್ಟ್ರೀಯ ಕಾರ್ಯಕ್ರಮಗಳ ಅಂಕಿ-ಅಂಶಗಳನ್ನು ಕಂಪ್ಯೂಟರ್​ಗೆ ಅಳವಡಿಸಲು ಹೆಚ್ಚುವರಿ ಫಾರ್ವಸಿಸ್ಟ್ ನೇಮಕಗೊಳಿಸಬೇಕು ಸೇರಿ 19ಬೇಡಿಕೆಗಳ ಈಡೇರಿಕೆಗೆ ಈ ಹೋರಾಟ ನಡೆಸಲಾಗುತ್ತಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ರಾಜ್ಯ ಪರಿಷತ್ ಸದಸ್ಯ ಎಂ.ವೈ. ಪಟೇಲ, ಪ್ರಧಾನ ಕಾರ್ಯದರ್ಶಿ ಆನಂದಗೌಡ ಹಿರೇಗೌಡ್ರ, ಎಸ್.ಎಸ್. ಗದಗಿನಮಠ, ರವಿಕಿರಣ ಬುಕ್ಕದ, ಚಂದ್ರಶೇಖರ ಅಳಗವಾಡಿ, ವಿರೂಪಾಕ್ಷ ಲಮಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts