More

    ಮೊಟ್ಟೆ ಸೇವನೆಯಿಂದ ಪೌಷ್ಟಿಕಾಂಶ ಹೆಚ್ಚಳ

    ಹಾವೇರಿ: ಲಾಕ್​ಡೌನ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಪೌರಕಾರ್ವಿುಕರಿಗೆ ಪತ್ರಿ ಪೌಲ್ಟ್ರಿ ಫಾಮರ್್​ನಿಂದ ಮಂಗಳವಾರ 5 ಸಾವಿರ ಮೊಟ್ಟೆಗಳನ್ನು ಉಚಿತವಾಗಿ ವಿತರಿಸಲಾಯಿತು.

    ನಗರದ ಜಿಲ್ಲಾಸ್ಪತ್ರೆಯ ಆವರಣ ಹಾಗೂ ನಗರಸಭೆ ಆವರಣದಲ್ಲಿ ವೈದ್ಯರು ಹಾಗೂ ಪೌರಕಾರ್ವಿುಕರಿಗೆ ತಲಾ 1ಡಜನ್ ಮೊಟ್ಟೆಗಳನ್ನು ವಿತರಿಸಿದ ಶಾಸಕ ನೆಹರು ಓಲೇಕಾರ ಮಾತನಾಡಿ, ಮೊಟ್ಟೆ ಸೇವಿಸುವುದರಿಂದ ಯಾವುದೇ ಆತಂಕವಿಲ್ಲ. ಇದರಿಂದ ಪೌಷ್ಟಿಕಾಂಶ ಹೆಚ್ಚಳವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಲಾಕ್​ಡೌನ್ ಸಮಯದಲ್ಲಿ ಸೇವಾ ನಿರತರಿಗೆ ಉಚಿತವಾಗಿ ಮೊಟ್ಟೆಗಳನ್ನು ವಿತರಿಸುವ ಕಾರ್ಯಕ್ಕೆ ಪತ್ರಿಯವರು ಮುಂದಾಗಿರುವುದು ಶ್ಲಾಘನೀಯ ಎಂದರು.

    ಪತ್ರಿ ಪೌಲ್ಟ್ರಿ ಫಾಮರ್್​ನ ಈಶ್ವರ ಪತ್ರಿ ಮಾತನಾಡಿ, ಹಾವೇರಿಯಲ್ಲಿ ಅತಿಸಣ್ಣದಾಗಿ ಉದ್ಯಮ ಆರಂಭಿಸಲಾಗಿತ್ತು. ಇಂದು ದಿನಕ್ಕೆ 1ಲಕ್ಷ ಮೊಟ್ಟೆ ಮಾರಾಟವಾಗುತ್ತಿದೆ. ಮೊಟ್ಟೆ ತಿನ್ನುವುದರಿಂದ ಯಾವುದೇ ರೋಗ ಬರುವುದಿಲ್ಲ. ಆರೋಗ್ಯಕ್ಕೂ ಉತ್ತಮ. ಯಾರೂ ವದಂತಿಗಳಿಗೆ ಕಿವಿಗೊಡಬಾರದು. ಲಾಕ್​ಡೌನ್ ಸಮಯದಲ್ಲಿ ಕರ್ತವ್ಯ ನಿರತರ ಸೇವೆ ಪರಿಗಣಿಸಿ ಉಚಿತವಾಗಿ ವಿತರಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.

    ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ನಾಗರಾಜ ನಾಯ್ಕ, ತಹಸೀಲ್ದಾರ್ ಶಂಕರ ಜಿ.ಎಸ್., ತಾಪಂ ಇಒ ಬಸವರಾಜ ಡಿ.ಸಿ., ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪಿ.ಎನ್. ಹುಬ್ಬಳ್ಳಿ, ಡಾ. ಎಚ್.ಬಿ. ಸಣ್ಣಕ್ಕಿ, ಕೆಎಂಎಫ್​ನ ಶಿವಕುಮಾರ ಅಡ್ಮನಿ, ಅಕ್ಷರ ದಾಸೋಹ ಯೋಜನಾಧಿಕಾರಿ ಪುಷ್ಪಲತಾ ಬಿದರಿ, ನಗರಸಭೆ ಪೌರಾಯುಕ್ತ ಬಸವರಾಜ ಜಿದ್ದಿ, ಪ್ರಭು ಪತ್ರಿ, ಮಲ್ಲಿಕಾರ್ಜುನ ಅಗಡಿ, ವೀರಣ್ಣ ಪತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts