More

    ಮೊಟ್ಟೆ ಎಸೆತ ವಿರೋಧಿಸಿ ರಸ್ತೆ ತಡೆ

    ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಡಿಕೇರಿಗೆ ಅತಿವೃಷ್ಟಿ ಹಾನಿ ವೀಕ್ಷಣೆಗೆ ಹೋದಾಗ ಹಿಂದುಪರ ಸಂಘಟನೆಗಳಿಂದ ಕಪ್ಪುಪಟ್ಟಿ ಪ್ರದರ್ಶನ ಹಾಗೂ ಕಾರಿಗೆ ಮೊಟ್ಟೆ ಹೊಡೆದಿರುವುದನ್ನು ಖಂಡಿಸಿ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿ ನಿರ್ವಿುಸಿ ಸೋಮವಾರ ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿಯಿಂದ ಹೊರಟ ಕಾಂಗ್ರಸ್ ಕಾರ್ಯಕರ್ತರು, ಬಿಜೆಪಿ ಹಾಗೂ ಸಂಘಪರಿವಾರದವರ ವಿರುದ್ಧ ಘೊಷಣೆ ಕೂಗುತ್ತ ಮೆರವಣಿಗೆ ಮೂಲಕ ಸಾಗಿ ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.

    ಕೊಡಗಿನಲ್ಲಿ ಸತತ ಮೂರು ವರ್ಷಗಳಿಂದ ಅತಿವೃಷ್ಟಿಯಿಂದ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ನೀಡಬೇಕಿದ್ದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭೂಮಿ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸದ ಹಿನ್ನೆಲೆಯಲ್ಲಿ ವಿಧಾನಸಭೆ ವಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರವಾಸ ಕೈಗೊಂಡಿದ್ದರು. ಬಿಜೆಪಿಗರು ನೈಜ ವಿಚಾರಗಳನ್ನು ಮರೆಮಾಚಿ ಪುಂಡರನ್ನು ಬಿಟ್ಟು ಮೊಟ್ಟೆ ಎಸೆದು, ಕಪ್ಪು ಪಟ್ಟಿ ಪ್ರದಶಿಸುವ ಮೂಲಕ ಅವಮಾನಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ದೂರಿದರು.

    ಆಪರೇಷನ್ ಕಮಲದ ಮೂಲಕ ಅನೈತಿಕ ಸರ್ಕಾರ ರಚಿಸಿಕೊಂಡು ಜನ ವಿರೋಧಿ ನೀತಿಗಳ ಮೂಲಕ ಬಡವರಿಗೆ ನಿರಂತರ ಅನ್ಯಾಯ ಮಾಡುತ್ತಿದೆ. ಕೆಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ನೈಜ ವಿಚಾರವನ್ನು ಮರೆಮಾಚಲು ಜನರ ಭಾವನೆ ಕೆರಳಿಸುವ ವಿಚಾರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

    ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಬಿಜೆಪಿಗರು ಹೋರಾಟ ಮಾಡುತ್ತಿರುವುದು ಕನ್ನಡಕ್ಕಾಗಿಯಾ ಅಥವಾ ದೇಶಕ್ಕಾಗಿಯಾ? ಸಾವರ್ಕರ್ ಬಗ್ಗೆ ಮಾತನಾಡಿದಕ್ಕೆ ಬಟ್ಟೆ ಹರಿದುಕೊಂಡು ಹೋರಾಟ ಮಾಡುತ್ತಿದ್ದಾರೆ. ಯಾರು ಆ ಸಾವರ್ಕರ್? ದೇಶಕ್ಕೆ ಏನು ತ್ಯಾಗ ಮಾಡಿದ್ದಾರೆ? ಮೊಟ್ಟೆ ಎಸೆದ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ ಎಂದು ದೂರಿದರು.

    ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ದಾವಣೆಗೆರೆಯ ಸಿದ್ದರಾಮೋತ್ಸವದಲ್ಲಿ ಸೇರಿದ್ದ ಲಕ್ಷಾಂತರ ಜನರನ್ನು ನೋಡಿ ಬಿಜೆಪಿ ನಾಯಕರು ಹತಾಶರಾಗಿದ್ದಾರೆ. ರಾಜ್ಯದಲ್ಲಿ ಶೇ.40 ಕಮಿಷನ್ ಸರ್ಕಾರ ಅಸ್ತಿತ್ವದಲ್ಲಿದೆ. ಇಲ್ಲಿನ ತಾಲೂಕು ಕಚೇರಿಯಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಸಿದ್ದರಾಮಯ್ಯ ಅವರಿಗೆ ರಕ್ಷಣೆ ಕೊಡಿ ಎಂದು ಪೊಲೀಸರಿಗೆ ಹೇಳಿದರೆ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ವಿಪಕ್ಷದ ನಾಯಕರಿಗೆ ಪೊಲೀಸ್ ಇಲಾಖೆ ರಕ್ಷಣೆಕೊಡಲು ಆಗದಿದ್ದರೆ ಈ ಇಲಾಖೆ ಇದ್ದೂ ಪ್ರಯೋಜವಿಲ್ಲದಂತಾಗಿದೆ. ಯಾವ ಅಧಿಕಾರಿಗಳು ಈಗ ನಿಮ್ಮನ್ನು ಕಡೆಗಣಿಸಿದ್ದಾರೋ ಅವರೇ ನಿಮಗೆ ಬೆಂಗಾವಲಾಗಿ ನಿಲ್ಲುವ ಸ್ಥಿತಿ ನಿರ್ವಣವಾಗುವ ಕಾಲ ದೂರವಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts