More

    ಮೈನವಿರೇಳಿಸಿದ ವಡಗಾಂವ ರಣಗಂಬ ಉತ್ಸವ

    ಔರಾದ್: ವಡಗಾಂವ (ದೇ) ಗ್ರಾಮದಲ್ಲಿ ಶನಿವಾರ ಮೈನವಿರೇಳಿಸುವ ರಣಗಂಬ ಉತ್ಸವ ವೈಭವದಿಂದ ಜರುಗಿತು. ಕರೊನಾ ಮಹಾಮಾರಿ ಪರಿಣಾಮ ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ಜಾತ್ರಾ ಮಹೋತ್ಸವಕ್ಕೆ ಈ ವರ್ಷ ಕಳೆ ಬಂದಿದ್ದು, ಭಕ್ತಿ ಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಸ್ಥಳೀಯರಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ ದೇವರಿಗೆ ನೈವೇದ್ಯೆ ಅರ್ಪಿಸಿ ಕೃತಾರ್ಥರಾದರು.

    ಪರಂಪರಾಗತವಾಗಿ ಈ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಇದಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ವಡಗಾಂವನಲ್ಲಿ ಆಳ್ವಿಕೆ ನಡೆಸುತ್ತಿದ್ದ ದೇಶಮುಖರೆಂಬ ಪಾಳೆಗಾರರು ವಿರೋಧಿ ಸೈನ್ಯವನ್ನು ಯುದ್ಧದಲ್ಲಿ ಸೋಲಿಸಿದ ಸವಿನೆನಪಿಗಾಗಿ ದೊಡ್ಡ ಗಾತ್ರದ ಕಟ್ಟಿಗೆಯ ದಿಮ್ಮಿಯನ್ನು ದೇಶಮುಖರ ಕೋಟೆ (ಗಡಿ) ಮುಂಭಾಗದ ಆವರಣದಲ್ಲಿ ಮೇಲಕ್ಕೆ ಎತ್ತಿ ನಿಲ್ಲಿಸಿ ವಿಜಯೋತ್ಸವ ಆಚರಿಸುತ್ತಿದ್ದರು. ಮುಂದೆ ಇದು ರಣಗಂಬ ಉತ್ಸವವಾಗಿದೆ. ರಣಗಂಬವನ್ನು ದೇವತೆಯ ಪ್ರತಿರೂಪವೆಂದು ಊರಿನ ನಾಗರಿಕರು ಆರಾಧಿಸುತ್ತಾರೆ ಎಂದು ಹಿರಿಯರು ಹೇಳುತ್ತಾರೆ.

    ನೂರಾರು ಕ್ವಿಂಟಾಲ್ ಭಾರವಿರುವ ರಣಗಂಬವನ್ನು ಯಾವುದೇ ಯಂತ್ರದ ಸಹಾಯವಿಲ್ಲದೆ ಬೃಹತ್ ಗಾತ್ರದ ಹಗ್ಗ ಮತ್ತು ಕಟ್ಟಿಗೆಗಳ ಸಹಾಯದಿಂದ ಕೈಬಲದ ಮೇಲೆ ಎತ್ತಿ ನಿಲ್ಲಿಸಲಾಯಿತು. ನೆಲದ ಮೇಲೆ ಅಡ್ಡಲಾಗಿ ಬಿದ್ದ ಕಂಬವನ್ನು ಬೆಳಗ್ಗೆ ಮೇಲಕ್ಕೆತ್ತಲು ಆರಂಭಿಸಿದರೆ ಸೂರ್ಯ ನೆತ್ತಿ ಮೇಲೆ ಬರುವವರೆಗೂ ಈ ಸಾಹಸ ನಡೆಯಿತು. ಕೋಲಾಟ, ನೃತ್ಯ, ಮೆರವಣಿಗೆ, ಭಜನೆ ಕಾರ್ಯಕ್ರಮದ ನಂತರ ಸಂಜೆ ಮತ್ತೆ ಕಂಬವನ್ನು ನೆಲಕ್ಕೆ ಬೀಳಿಸಲಾಯಿತು.

    ಜಾತ್ರೆಯ ಪ್ರಮುಖ ಆಕರ್ಷಣೆಯಾದ ಕುಸ್ತಿಯಲ್ಲಿ ಬೀದರ್ ಜಿಲ್ಲೆ ಮತ್ತು ತೆಲಂಗಾಣ, ಮಹಾರಾಷ್ಟ್ರದ ಪಟುಗಳು ಭಾಗವಹಿಸಿದ್ದರು. ಊರಿನ ಯುವಕರು ಪ್ರದಶರ್ಿಸಿದ ಕೋಲಾಟ ಗಮನ ಸೆಳೆಯಿತು. ಬಸವರಾಜ ದೇಶಮುಖ, ಶರಣಬಸಪ್ಪ ದೇಶಮುಖ, ಡಾ.ಉಮಾ ದೇಶಮುಖ, ಸುರೇಖಾ ದೇಶಮುಖ, ಮಲ್ಲಿಕಾಜರ್ುನ, ಅಲ್ಲಂಪ್ರಭು ದೇಶಮುಖ, ಶಂಕ್ರೆಪ್ಪ ಧರ್ಮ, ಶಿವರಾಜ ಬುಣಗೆ, ವಿಶ್ವನಾಥ ಬುಣಗೆ, ಸಿದ್ದಯ್ಯ ಸ್ವಾಮಿ, ಗ್ರಾಪಂ ಅಧ್ಯಕ್ಷ ಝರೆಪ್ಪ ಸಿಂಗೆ, ಶಿವರಾಜ, ಕೆಎಎಸ್ ಅಧಿಕಾರಿ ಖಾಜಾ ಖಲೀಲುಲ್ಲಾ, ಪ್ರಕಾಶ ಮೇತ್ರೆ, ಮಲ್ಲಿಕಾರ್ಜುನ ಬುಶೆಟ್ಟೆ, ಮಲ್ಲಪ್ಪ ನೇಳಗೆ, ಚಂದ್ರಕಾಂತ ಫುಲೆ, ರತಿಕಾಂತ ನೇಳಗೆ, ವೀರಪ್ಪ ಖಾನಾಪುರೆ, ನವೀಲಕುಮಾರ ಉತ್ಕಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts