More

    ಮೇ 7 ರಂದು ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ: ವೈಶಾಲಿ

    ಗದಗ: ಇದೇ ಮೇ 7 ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ತಿಳಿಸಿದ್ದಾರೆ.
    ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
    ಲೋಕಸಭಾ ಚುನಾವಣೆ ಸಂಬಂಧ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸಜ್ಜುಗೊಂಡಿದೆ ಎಂದು ಜಿಲ್ಲಾದಿಕಾರಿ ಅವರು ಹೇಳಿದರು.
    ಜಿಲ್ಲೆಯಲ್ಲಿ ಒಟ್ಟು 8,90,768 ಮತದಾರರು ಇದ್ದು, 4,44,185 ಪುರುಷರು ಮತ್ತು 4,46,522 ಮಹಿಳಾ ಮತದಾರರು ಇದ್ದು, 61 ಇತರ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

    ಜಿಲ್ಲೆಯಲ್ಲಿ 961 ಮತಗಟ್ಟೆಗಳಿದ್ದು, 4232 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇವರಲ್ಲಿ 1058 ಪಿಆರ್‍ಒ , 1058 ಎಪಿಆರ್‍ಒ ಮತ್ತು 2116 ಪಿಒ ಅವರನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.
    ಜಿಲ್ಲೆಯಲ್ಲಿ ಸ್ಥಾಪಿತ ಪ್ರತಿ ಮತಗಟ್ಟೆಗೆ ಅಧ್ಯಕ್ಷಾಧಿಕಾರಿಗಳು, ಸಹಾಯಕ ಅಧ್ಯಕ್ಷಾಧಿಕಾರಿ ಹಾಗೂ ಮತದಾನ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿರುತ್ತದೆ. ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ ಎಂದರು.
    ಮತದಾನಾಧಿಕಾರಿಗಳು ತಾವು ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರದಿಂದ ಹೊರಗಡೆ ನಿಯೋಜಿಸಲ್ಪಟ್ಟಿದಲ್ಲಿ, ಆ ವಿಧಾನಸಭಾ ಕ್ಷೇತ್ರಗಳಿಗೆ ತಲುಪಲು ಸಾರಿಗೆ ಬಸ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಸಂಬಂಧಪಟ್ಟ ಮಸ್ಟರಿಂಗ್ ಕೇಂದ್ರಗಳಿಂದ ಮೇ 6 ರಂದು ಬೆಳಗ್ಗೆ 6 ಗಂಟೆಗೆ ಬಸ್‍ಗಳು ಹೊರಡಲಿವೆ.

     ಮಸ್ಟರಿಂಗ್ ಡಿಮಸ್ಟರಿಂಗ್ ಕೇಂದ್ರಗಳು :  
     ಲೋಕಸಭಾ ಚುನಾವಣೆ ಸಂಬಂಧ ಶಿರಹಟ್ಟಿಯ ಎಫ.ಎಂ.ಡಬಾಲಿ ಪಿ.ಯು.ಕಾಲೇಜು, ಗದಗ ನಗರದ ಗುರುಬಸವ ಸಿ.ಬಿ.ಎಸ್.ಇ.ಶಾಲೆ, ರೋಣದ ಡಿಪೌಲ್ ಅಕಾಡೆಮಿ ಮತ್ತು ನರಗುಂದದ ಸರ್ಕಾರಿ ಎಂಜನೀಯರಿಂಗ್ ಕಾಲೇಜು ಈ ಕೇಂದ್ರಗಳಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

    ಮತದಾನ ಸಮಯ:
    ಮತದಾನವು ಮೇ 7 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ಮತ ಚಲಾಯಿಸಿದ ಮತದಾರರಿಗೆ ಅಳಿಸಲಾಗದ ಶಾಹಿಯನ್ನು ಎಡಗೈ ತೋರು ಬೆರಳಿಗೆ ಹಾಕಲಾಗುತ್ತದೆ ಎಂದು ವಿವರಿಸಿದರು.
    ಹಾಗೆಯೇ ಗದಗ ಜಿಲ್ಲೆಯ ಮತಗಟ್ಟೆ ಅಧಿಕಾರಿಗಳಿಗೆ ಮತಗಟ್ಟೆಗಳಿಗೆ ತಲುಪಲು ಜಿಲ್ಲೆಯಲ್ಲಿ ಒಟ್ಟು 189 ಮಾರ್ಗಗಳನ್ನು ಗುರುತಿಸಲಾಗಿದ್ದು, ಈ ಮಾರ್ಗಗಳಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸು, ಜೀಪ್‍ಗಳು ಹಾಗೂ ಮಿನಿ ಬಸ್ ಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.
    ವಿದ್ಯುನ್ಮಾನ ಮತಯಂತ್ರಗಳು

    ಗದಗ ಜಿಲ್ಲೆಗೆ ಸಂಬಂಧಿಸಿದಂತೆ ಮೀಸಲು ಮತಯಂತ್ರಗಳು ಸೇರಿದಂತೆ ವಿದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸುತ್ತಿದ್ದು, ಈ ವಿದ್ಯುನ್ಮಾನ ಮತಯಂತ್ರಗಳನ್ನು ಇ.ಸಿ.ಐ.ಎಲ್ ಸಂಸ್ಥೆಯ ಎಂಜಿನಿಯರ್‍ಗಳಿಂದ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮೊದಲನೇ ಹಂತದ ಪರಿಶೀಲನೆ ನಡೆಸಿ, ವಿದ್ಯುನ್ಮಾನ ಮತಯಂತ್ರಗಳು ಮತದಾನಕ್ಕೆ ಯೋಗ್ಯವಾಗಿದೆ ಎಂದು ದೃಢೀಕರಿಸಿರುತ್ತಾರೆ.

    ವಿದ್ಯುನ್ಮಾನ ಮತಯಂತ್ರಗಳನ್ನು ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಲಾಗಿದ್ದು, ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಅಭ್ಯರ್ಥಿಗಳು/ ಅವರ ಏಜೆಂಟರು/ ಅಧಿಕೃತ ವ್ಯಕ್ತಿಗಳ ಸಮ್ಮುಖದಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಸಿದ್ದಪಡಿಸುವ ಕಾರ್ಯವನ್ನು ಸಹ ಪೂರ್ಣಗೊಳಿಸಲಾಗಿರುತ್ತದೆ. ವಿದ್ಯುನ್ಮಾನ ಮತಯಂತ್ರದ ಸಿದ್ದತೆ ಸಂಬಂಧ ಎಲ್ಲಾ ಪ್ರಕ್ರಿಯೆನ್ನು ಸಿ.ಸಿ.ಟಿ.ವಿ ಚಿತ್ರೀಕರಣ/ ವಿಡಿಯೋ ಚಿತ್ರೀಕರಣ ಸಹ ಮಾಡಿಸಲಾಗಿರುತ್ತದೆ.
    ಅಭ್ಯರ್ಥಿಗಳ ಬೂತ್‍ಗಳು:
    ಸ್ಪರ್ಧಿಸಿರುವ ಅಭ್ಯರ್ಥಿಗಳು ಚುನಾವಣಾಧಿಕಾರಿ ಹಾಗೂ ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆದು ಮತಗಟ್ಟೆ ಸ್ಥಳದಿಂದ ಕನಿಷ್ಠ ಎರಡು ನೂರು ಮೀಟರ್ ದೂರದಲ್ಲಿ ತಮ್ಮ ಬೂತ್ ಗರಿಷ್ಟ 10×10 ft ಸ್ಥಾಪಿಸಲು ಮಾತ್ರ ಅವಕಾಶವಿದೆ. ಮತದಾರರಿಗೆ ನೀಡುವ ಸ್ಲಿಪ್‍ನಲ್ಲಿ ಅವರು ಮತದಾರರ ಭಾಗ ಸಂಖ್ಯೆ, ಕ್ರಮಸಂಖ್ಯೆ ಮಾತ್ರ ಬರೆಯಬಹುದಾಗಿದ್ದು ಯಾವುದೇ ರೀತಿಯ ಚಿಹ್ನೆಗಳು, ಅಭ್ಯರ್ಥಿಗಳ ಹೆಸರು, ಭಾವಚಿತ್ರಗಳು ಇರದಂತೆ ಎಚ್ಚರ ವಹಿಸಲು ಸೂಚಿಸಿದೆ. 2 ಚೇರ್, 1 ಮೇಜು, ಒಂದು ಬ್ಯಾನರ್ (4 x 8 ft ) ಹಾಗೂ ಒಂದು ಪ್ಲಾಗ್ ಹಾಕಿಕೊಳ್ಳಲು ಅವಕಾಶವಿದೆ.

    ಪೋಲಿಂಗ್ ಎಜೆಂಟ್‍ನ ನೇಮಕಾತಿ:-
    ಎಲ್ಲಾ ಅಭ್ಯರ್ಥಿಗಳು ಚುನಾವಣಾ ಏಜೆಂಟರ ಮತಗಟ್ಟೆಗೆ ಒಬ್ಬರಂತೆ ಮತದಾನ ಎಜೆಂಟರನ್ನು ನೇಮಿಸಬಹುದಾಗಿದೆ. ಈ ಎಜೆಂಟರು ಮತಗಟ್ಟೆಯಲ್ಲಿ ಕುಳಿತುಕೊಳ್ಳಲು ಮತದಾನಾಧಿಕಾರಿಗಳು ಅವಕಾಶವನ್ನು ಮಾಡಿಕೊಡುತ್ತಾರೆ. ಬದಲಿ ಎಜೆಂಟರನ್ನು ನೇಮಿಸಿಕೊಂಡಿದ್ದರೂ ಸಹ ಏಕಕಾಲದಲ್ಲಿ ಒಬ್ಬ ಎಜೆಂಟ್ ಮಾತ್ರ ಮತಗಟ್ಟೆಯಲ್ಲಿ ಇರಲು ಅವಕಾಶವಿರುತ್ತದೆ.

    ಚುನಾವಣಾ ಬಹಿರಂಗ ಪ್ರಚಾರ ಅಂತ್ಯ

    ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಸಂಬಂಧ ಮತದಾನ ಅಂತ್ಯಗೊಳ್ಳುವುದಕ್ಕೆ ನಿಗದಿಯಾಗಿರುವ ಸಮಯದ 48 ಗಂಟೆಗಳ ಮೊದಲು ಎಲ್ಲಾ ರೀತಿಯ ಬಹಿರಂಗ ಪ್ರಚಾರ ನಿಷೇಧಿಸಿರುವುದರಿಂದ ಬಹಿರಂಗ ಪ್ರಚಾರ ಮೇ 5 ರ ಸಂಜೆ 6 ಗಂಟೆಗೆ ಅಂತ್ಯಗೊಳ್ಳಲಿದೆ ಎಂದು ತಿಳಿಸಿದರು.
    ಈ 48 ಗಂಟೆಗಳ ಅವಧಿಯಲ್ಲಿ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರುವ ಎಲ್ಲಾ ರೀತಿಯ ಬಹಿರಂಗ ಪ್ರಚಾರ ಟೆಲಿವಿಷನ್/ ರೇಡಿಯೋ ಹಾಗೂ ಕೇಬಲ್ ನೆಟ್‍ವರ್ಕ್ ಸೋಷಿಯಲ್ ಮೀಡಿಯಾ ಇಂತಹ ಇತರೆ ಮಾಧ್ಯಮದಲ್ಲಿ ಚುನಾವಣಾ ವಿಷಯ ಚರ್ಚೆ, ಪ್ರಚಾರ, ಸಂದರ್ಶನ, ಜಾಹೀರಾತು ಹಾಗೂ ಚುನಾವಣೆ ಸಂಬಂಧಿತ ಅಭಿಪ್ರಾಯಗಳ ಪ್ರಸಾರಗಳು ಈ ನಿಷೇಧಕ್ಕೆ ಒಳಪಡಲಿವೆ.

    ಇದೇ ಮೇ 6 ಮತ್ತು 7 ರಂದು ಮುದ್ರಣ/ ಪತ್ರಿಕಾ ಮಾಧ್ಯಮದಲ್ಲಿ ಪ್ರಕಟವಾಗುವ ಯಾವುದೇ ರೀತಿಯ ಚುನಾವಣಾ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಬೇಕಿದ್ದಲ್ಲಿ/ ನೀಡಬೇಕಾಗಿದ್ದಲ್ಲಿ, ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ (ಎಂ.ಸಿ.ಎಂ.ಸಿ) ತಂಡದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
    ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತ್ತು ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ ಸೆಕ್ಷನ್ 144 ಅನ್ನು ಮೇ 5 ರ ಸಂಜೆ 6 ಗಂಟೆಯಿಂದ ಜಾರಿ ಮಾಡಲಾಗಿದ್ದು, ಈ ಸಮಯದಲ್ಲಿ 5 ಜನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರತಕ್ಕದ್ದಲ್ಲ. ಇದು ಚುನಾವಣಾ ಪ್ರಚಾರಕ್ಕೆ ತೆರಳುವವರಿಗೆ ಅನ್ವಯಿಸುವುದಿಲ್ಲ ಎಂದರು.

    ಮತಗಟ್ಟೆ ನಿರ್ಗಮನ ಸಮೀಕ್ಷೆ ಪ್ರಸಾರಕ್ಕೆ ನಿರ್ಬಂಧ

    ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನವು ದೇಶದಾದ್ಯಂತ ವಿವಿಧ ಹಂತಗಳಲ್ಲಿ ನಡೆಯುವುದರಿಂದ ಕೊನೆಯ ಹಂತದ ಮತದಾನ ಮುಕ್ತಾಯಗೊಂಡ ಅರ್ಧ ತಾಸಿನವರೆಗೆ ಯಾವುದೇ ರೀತಿಯ ಮತಗಟ್ಟೆ ನಿರ್ಗಮನ ಸಮೀಕ್ಷೆ ನಡೆಸುವುದಾಗಲಿ ಅಥವಾ ಅದನ್ನು ಮುದ್ರಣ, ಪತ್ರಿಕಾ, ವಿದ್ಯುನ್ಮಾನ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಿದೆ.
    ಕ್ಷೇತ್ರದ ಮತದಾರರಲ್ಲದ ವ್ಯಕ್ತಿಗಳು ಬಹಿರಂಗ ಪ್ರಚಾರದ ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೆ ಮತಕ್ಷೇತ್ರವನ್ನು ಬಿಟ್ಟು ತೆರಳಲು ಭಾರತ ಚುನಾವಣಾ ಆಯೋಗದ ನಿರ್ದೇಶನವಿರುತ್ತದೆ.
    ಮದ್ಯ ಮಾರಾಟ ನಿಷೇಧ ಮತ್ತು ಸಂತೆÉ ಜಾತ್ರೆ ಮುಂದೂಡಿರುವುದು
    ಮೇ 5 ರಂದು ಸಂಜೆ 6 ರಿಂದ ಮೇ 08 ರ ಬೆಳಗ್ಗೆ 6 ಗಂಟೆ ವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿತ ದಿನ ( Dry day ) ಎಂದು ಘೋಷಿಸಲಾಗಿದೆ. ಹಾಗೆಯೇ ಮೇ 7 ರಂದು ನಡೆಯುವ ಎಲ್ಲಾ ಸಂತೆ ಜಾತ್ರೆ ಮತ್ತು ಉತ್ಸವಗಳನ್ನು ಮುಂದೂಡಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

    ಮತಗಟ್ಟೆಗಳಲ್ಲಿ ಮೊಬೈಲ್ ಫೋನ್, ಕ್ಯಾಮರಾ ಇತ್ಯಾದಿ ನಿಷೇಧ
    ಮೇ 7 ರಂದು ನಡೆಯಲಿರುವ ಮತದಾನದ ದಿನದಂದು ಮತದಾರರು ಮೊಬೈಲ್ ಫೋನ್‍ಗಳನ್ನಾಗಲೀ ಅಥವಾ ಕ್ಯಾಮರಾಗಳನ್ನಾಗಲೀ ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗುವಂತಿಲ್ಲ. ಪ್ರಜಾಪ್ರಾತಿನಿಧ್ಯ ಅಧಿನಿಯಮ 1951 ರ ಸೆಕ್ಷನ್ 128 ಮತ್ತು ಚುನಾವಣೆ ನಡೆಸುವ ನಿಯಮ 39 ರಂತೆ ಮೊಬೈಲ್ ಫೋನ್‍ಗಳನ್ನು ಮತ್ತು ಕ್ಯಾಮರಾಗಳನ್ನು ತೆಗೆದುಕೊಂಡು ಛಾಯಾ ಚಿತ್ರಗಳನ್ನು ತೆಗೆಯುವುದು ಮತದಾನದ ರಹಸ್ಯ ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ಮತದಾರರ ಮತಗಟ್ಟೆಗಳಿಗೆ ಮೊಬೈಲ್ ಫೋನ್ ಅಥವಾ ಕ್ಯಾಮರಾಗಳನ್ನು ತೆಗೆದುಕೊಂಡು ಹೋದಲ್ಲಿ ಇವುಗಳನ್ನು ಅಧ್ಯಕ್ಷಾಧಿಕಾರಿಗಳು ಪರಿಶೀಲಿಸಿ ವಶಪಡಿಸಿಕೊಳ್ಳುವರು.
    ಮತಗಟ್ಟೆಗಳಿಗೆ ಭದ್ರತಾ ವ್ಯವಸ್ಥೆಗಳು:
    ಮತದಾನದ ದಿನದಂದು ಮತ ಕೇಂದ್ರಗಳಲ್ಲಿ ಪೊಲೀಸ್ ಸಿಬ್ಬಂಧಿ / ಹೊಮ್ ಗಾಡ್ರ್ಸ / ಗಳನ್ನು ಭದ್ರತಾ ದೃಷ್ಟಿಯಿಂದ ನೇಮಕ ಮಾಡಲಾಗುತ್ತಿದ್ದು ಹಾಗೂ ಎಲ್ಲಾ ಕ್ರಿಟಿಕಲ್ ಮತಗಟ್ಟೆಗಳಲ್ಲಿ ಮೈಕ್ರೊಅಬ್ಸರ್ವರ್‍ಗಳ ನೇಮಕ ಮಾಡಲಾಗಿರುತ್ತದೆ, ಕ್ಲಸ್ಟರ್ ಮತಗಟ್ಟೆಗಳಲ್ಲಿ (ಮೂರು ಮತ್ತು ಹೆಚ್ಚು) ವೀಡಿಯೋ ಚೀತ್ರೀಕರಣದ ವ್ಯವಸ್ಥೆಯನ್ನು ಜರುಗಿಸಲಾಗುತ್ತದೆ ಹಾಗೂ ಜಿಲ್ಲೆಯಲ್ಲಿ ಬಹುತೇಕ ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

    ಮತದಾರರ ಗುರುತಿಗಾಗಿ ಪೂರಕ ದಾಖಲೆಗಳು
    ಮತದಾನ ಮಾಡಲು ಮತಗಟ್ಟೆಗೆ ಬರುವ ಮತದಾರರು ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಗುರುತಿಗಾಗಿ ಹಾಜರುಪಡಿಸುವುದು. ಅದು ಇಲ್ಲದ ಮತದಾರರು 12 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಮತಗಟ್ಟೆ ಅಧಿಕಾರಿಗಳಿಗೆ ಗುರುತಿಗಾಗಿ ತೋರಿಸಬÉೀಕು.

       ಮತದಾರರ ಭಾವಚಿತ್ರವಿರುವ ಅದಿsಕೃತ ವೋಟರ್ ಸ್ಲಿಫ್, ಆಧಾರ್ ಕಾರ್ಡ್,  ಭಾವಚಿತ್ರವಿರುವ ಉದ್ಯೋಗ ಕಾರ್ಡ್, ಭಾವಚಿತ್ರವಿರುವ ಬ್ಯಾಂಕ್/ ಅಂಚೆ ಕಚೇರಿ ಪಾಸ್ ಪುಸ್ತಕ,  ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆ ಸ್ಮಾರ್ಟ್ ಕಾರ್ಡ್‍ಗಳು (ಕಾರ್ಮಿಕ ಮಂತ್ರಾಲಯ ಯೋಜನೆ), ಡ್ರೈವಿಂಗ್ ಲೈಸನ್ಸ್, ಆದಾಯ ತೆರಿಗೆ ಶಾಶ್ವತ ಖಾತೆ ಸಂಖ್ಯೆ,  ರಾಷ್ಟ್ರೀಯ ಜನಸಂಖ್ಯೆ ನೋಂದಣಿ ವಹಿ ಯೋಜನೆಯಡಿ ಆರ್ ಜಿಐ ವಿತರಿಸಿರುವ ಸ್ಮಾರ್ಟ್ ಕಾರ್ಡಗಳು, ಇಂಡಿಯನ್ ಪಾಸ್‍ಪೆÇೀರ್ಟ್,  ಸಕ್ಷಮ ಫ್ರಾದಿsಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು, ರಾಜ್ಯ/ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ಧಿಮೆಗಳು ಅಥವಾ ಇತರೆ ಖÁಸಗಿ ಔಧ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಂಸದರು, ವಿಧಾನಸಭಾ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರದಿಂದ ನೀಡಿರುವ ಗುರುತಿನ ಚೀಟಿ, ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಮಂತ್ರಾಲಯದಿಂದ ವಿತರಿಸಲಾಗಿರುವ ಅನನ್ಯ ಅಂಗವೈಕಲ್ಯ ಗುರುತಿನ ಚೀಟಿ.

    ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾದ ನಂತರ ರಾಜಕೀಯ ಚಟುವಟಿಕೆಗಳ ನಿಷೇಧ
    ಮತದಾನದ ಮುಕ್ತಾಯಕ್ಕೆ 48 ಗಂಟೆಯು ಮುಂಚಿತವಾಗಿ 65-ಶಿರಹಟ್ಟಿ, 66-ಗದಗ ಮತ್ತು 67-ರೋಣ ವಿಧಾನಸಭಾ ಕ್ಷೇತ್ರದಲ್ಲಿ 10-ಹಾವೇರಿ ಲೋಕಸಭಾ ಕ್ಷೇತ್ರದ ಮತದಾರರರಲ್ಲದವರು ಹಾಗೂ 68-ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 3-ಬಾಗಲಕೋಟ ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ಬಹಿರಂಗ ಪ್ರಚಾರ ಅಂತ್ಯವಾದ ನಂತರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗುವಂತಿಲ್ಲ. ಆದ್ದರಿಂದ ಈ ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ತಮ್ಮ ಕ್ಷೇತ್ರಕ್ಕೆ ತೆರಳತಕ್ಕದ್ದು. (ಚುನಾವಣಾ ಪ್ರಚಾರ ಉದ್ದೇಶಕ್ಕಾಗಿ ಬಂದಿರುವವರಿಗೆ ಮಾತ್ರ ಅನ್ವಯಿಸುವುದು).

    • ಕಲ್ಯಾಣ ಮಂಟಪ, ಸಮುದಾಯ ಭವನ, ವಸತಿ ಗೃಹಗಳು, ಅತಿಥಿ ಗೃಹಗಳು (ಖಾಸಗಿ), ಗಳಲ್ಲಿ ಈ ಕ್ಷೇತ್ರದ ಮತದಾರರಲ್ಲದವರು ವಾಸ್ತವ್ಯ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಹಾಗೂ ತೀವ್ರ ನಿಗಾ ಇಡಲಾಗುವುದು.
    • 48 ಗಂಟೆಯ ಅವಧಿಯಲ್ಲಿ ಲೌಡ್ ಸ್ಪಿಕರ್ ಅನುಮತಿ ಇರುವುದಿಲ್ಲ
    • ಮತಗಟ್ಟೆಯ 100 ಮೀ. ಸುತ್ತಳತೆಯಲ್ಲಿ ಪ್ರಚಾರ ಮಾಡುವಂತಿಲ್ಲ
    • ಮತದಾನದ ದಿನದಂದು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ವಿಚಾರಣೆ, ದೂರುಗಳನ್ನು 1950 ಮುಖಾಂತರ ನಿರ್ವಹಿಸಲಾಗುವುದು.

    ಭದ್ರತಾ ಕೊಠಡಿ:-
    ಮತದಾನವು ಪೂರ್ಣಗೊಂಡ ನಂತರ ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು (ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಮತ್ತು ವಿವಿಪ್ಯಾಟ್) ಹಾಗೂ ಚುನಾವಣಾ ಕಾಗದ ಪತ್ರಗಳನ್ನು ಡಿ.ಮಸ್ಟರಿಂಗ್ ಸ್ಥಳದಿಂದ ಸಂಬಂಧಪಟ್ಟ ಲೋಕಸಭಾ ಕ್ಷೇತ್ರಗಳ ಎಣಿಕೆ ಕೇಂದ್ರಗಳಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳ ತಲುಪಿಸಲಾಗುವುದು.
    ಮತದಾನ ಎಲ್ಲರ ಸಾಂವಿಧಾನಕ ಹಕ್ಕು, ದಿನಾಂಕ 07.05.2024 ರಂದು ನಡೆಯಲಿರುವ ಮತದಾನದ ದಿನದಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಹಾಗೂ ಸಾರ್ವಜನಿಕರು, ಅಭ್ಯರ್ಥಿಗಳು, ಚುನಾವಣಾ ಏಜೆಂಟರು ಹಾಗೂ ಮಾಧ್ಯಮ ಪ್ರತಿನಿಧಿಗಳು ಚುನಾವಣೆ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಮತ್ತು ಸುಗಮವಾಗಿ ನಡೆಸಲು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಅವರು ಕೋರಿದರು.

          ಜಿ.ಪಂ.ಸಿಇಒ ಎಸ್ ಭರತ್ ಅವರು ಮಾತನಾಡಿ ಜಿಲ್ಲೆಯಲ್ಲಿ 20 ಸಖಿ ಬೂತ್‍ಗಳು,  ಸಾಂಪ್ರದಾಯಿಕ ಮತಗಟ್ಟೆಗಳು, ವಿಶೇಷ ಚೇತನ ಮತಗಟ್ಟೆಗಳು, ಯುವ ಮತದಾರರ ಬೂತ್‍ಗಳು, ಥೀಮ್ ಬೇಸಡ್ ಬೂತ್ ಗಳು , ತಲಾ 4 ಬೂತ್‍ಗಳನ್ನು ಸ್ಥಾಪಿಸಲಾಗುತ್ತದೆ. ಒಟ್ಟು 35 ವಿಶೇಷ ಮತಗಟ್ಟೆಗಳನ್ನು  ಸ್ಥಾಪಿಸಲಾಗುತ್ತದೆ ಎಂದು ಅವರು ವಿವರಿಸಿದರು.  
          ಎಲ್ಲಾ ಮತಗಟ್ಟೆಗಳಿಗೆ ವಿಲ್‍ಚೇರ್ ಹಾಗೂ ಬೂತಗನ್ನಡಿ ( ಮ್ಯಾಗ್ನಿಫೈಯಿಂಗ್ )  ಸರಬರಾಜು ಮಾಡಲು ಕ್ರಮವಹಿಸಲಾಗಿದೆ. ಅಂಗವಿಕಲರು ಮತ್ತು ಹಿರಿಯ ನಾಗರೀಕರಿಗೆ ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ದೃಷ್ಠಿ ದೋಷವುಳ್ಳವರಿಗೆ ಸಹಾಯವಾಗಲು ಬ್ರೈಲ್ ಬ್ಯಾಲೆಟ್ ಪೇಪರ್ ಅನ್ನು ಸಹ ಪ್ರತಿ ಮತಗಟ್ಟೆಗೆ ಸರಬರಾಜು ಮಾಡಲಾಗಿದೆ.

    ಮಾದರಿ ನೀತಿ ಸಂಹಿತೆ
    ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣೆ ಪ್ರಕ್ರಿಯೆ ಜಾರಿಗೊಂಡ ನಂತರ ಗದಗ ಜಿಲ್ಲೆಯಲ್ಲಿ ಒಟ್ಟು 06 ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ( FIR ) ದಾಖಲಾಗಿರುತ್ತವೆ ಹಾಗೂ ಮೇ 3 ರವರೆಗೆ ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದಂತೆ ಪ್ರಕರಣಗಳಲ್ಲಿ 01 ಎಫ್.ಐ.ಆರ್‍ಗಳು ಹಾಗೂ ಅಬಕಾರಿ ಕಾಯ್ದೆಯ ಉಲ್ಲಂಘನೆಯಡಿ 53 ಎಫ್.ಐ.ಆರ್.ಗಳು ದಾಖಲಾಗಿರುತ್ತದೆ, ಒಟ್ಟು 54 ಎಫ್.ಐ.ಆರ್. ಗಳು ದಾಖಲಾಗಿರುತ್ತದೆ. ಒಟ್ಟು 62,58,560/- ನಗದು, 13727.765 ಲೀ. (ಅಂದಾಜು ಬೆಲೆ ರೂ. 37,87,668.45/-ಗಳನ್ನು) ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆÉ., ಡ್ರಗ್ಸ್ ಮತ್ತು ನಾರ್ಕೋಟಿಕ್ಸ್ 0.506 ಕೆ.ಜಿ ವಶಪಡಿಸಿಕೊಳ್ಳಲಾಗಿದೆ (ಅಂದಾಜು ಮೌಲ್ಯ ರೂ. 21,040/-), ಬೆಳ್ಳಿ 2474 ಗ್ರಾಂ ವಶಪಡಿಸಿಕೊಳ್ಳಲಾಗಿದೆ (ಅಂದಾಜು ಮೌಲ್ಯ ರೂ. 2,05,000/-) ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅದರ ಅಂದಾಜು ಬೆಲೆ ರೂ. 42,350/- ರೂಗಳಾಗಿರುತ್ತದೆ ಎಂದು ಜಿ.ಪಂ.ಸಿಇಒ ಅವರು ಮಾಹಿತಿ ನೀಡಿದರು.

    ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಅವರು ಮಾತನಾಡಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಶಾಂತಿಯುವ ಚುನಾವಣೆಗೆ ಅಗತ್ಯ ಪೊಲೀಸ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದರು.

    ಮತದಾರರು ನಿರ್ಭಿತಿಯಿಂದ ಮತ ಚಲಾಯಿಸಲು ಪೊಲೀಸ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts