More

    ಮೇ.23 ರಂದು ಬುದ್ಧ ಜಯಂತಿ ಆಚರಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬೌದ್ಧ ಮಹಾಸಭಾ ಮಂಗಳೂರು ಮತ್ತು ಅಭಯ ಆಶ್ರಯ ಅಸೈಗೋಳಿ ಜಂಟಿ ಆಶ್ರಯದಲ್ಲಿ 2568ನೇ ಬುದ್ಧ ಜಯಂತಿ ಆಚರಣೆ ಕಾರ್ಯಕ್ರಮ ಮೇ 23ರಂದು ವೈಶಾಖ ಹುಣ್ಣಿಮೆಯ ದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಅಸೈಗೋಳಿ ಅಭಯ ಆಶ್ರಯದಲ್ಲಿ ನಡೆಯಲಿದೆ. ಬೆಳಗ್ಗೆ 10ಕ್ಕೆ ಅಸೈಗೋಳಿ ಬಸ್‌ನಿಲ್ದಾಣದಿಂದ ಅಭಯ ಆಶ್ರಯದವರೆಗೆ ಲೋಕಶಾಂತಿಗಾಗಿ ಸೌಹಾರ್ದ ನಡಿಗೆ ಮೆರವಣಿಗೆ ನಡೆಯಲಿದೆ. ಮೈಸೂರು ಕೊಳ್ಳೇಗಾಲ ಜೇತವನದ ಪೂಜ್ಯ ಧಮ್ಮತಿಸ್ಸ ಭಂತೇಜಿ ಅವರ ಸಾನಿಧ್ಯದಲ್ಲಿ ಬುದ್ಧ ಜಯಂತಿ ಆಚರಿಸಲಾಗುವುದು. ಈ ಸಂದರ್ಭ ಬುದ್ಧ ವಂದನೆ, ಸುತ್ತ ಪಠಣ, ಧ್ಯಾನ, ಮೈತ್ರಿಧ್ಯಾನ ಮತ್ತು ಧಮ್ಮೋಪದೇಶ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts