More

    ಮೇಲಧಿಕಾರಿಗಳಿಗೆ ಮನವಿ ರವಾನೆ

    ಕುಮಟಾ: ತಾಲೂಕಿನ ಹೊಳೆಗದ್ದೆ ಟೋಲ್​ಗೇಟ್​ನಲ್ಲಿ ಕಳೆದ 2 ದಿನಗಳಿಂದ ಸ್ಥಳೀಯ ವಾಹನಗಳಿಗೂ ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ಟ್ಯಾಕ್ಸಿ ಚಾಲಕ ಮಾಲೀಕರ ಸಂಘ, ಮ್ಯಾಕ್ಸಿ ಕ್ಯಾಬ್ ಚಾಲಕ ಮಾಲೀಕರ ಸಂಘ, ಲಗೇಜ್ ರಿಕ್ಷಾ ಚಾಲಕ ಮಾಲೀಕರ ಸಂಘ ಹಾಗೂ ಇತರ ಸ್ಥಳೀಯ ವಾಹನ ಸವಾರರು ಸೋಮವಾರ ಟೋಲ್ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.

    ಸ್ಥಳಕ್ಕೆ ತಹಸೀಲ್ದಾರ್ ಮೇಘರಾಜ ನಾಯ್ಕ ಆಗಮಿಸಿ ಐಆರ್​ಬಿ ಕಂಪನಿಯ ಅಧಿಕಾರಿಗಳೊಂದಿಗೆ ರ್ಚಚಿಸಿದರು. ಬಳಿಕ ಸೋಮವಾರ ಒಂದು ದಿನ ಮಾತ್ರ ಶುಲ್ಕ ವಸೂಲಾತಿಯಲ್ಲಿ ರಿಯಾಯಿತಿ ನೀಡಲು ಒಪ್ಪಿಗೆ ಸೂಚಿಸಿದ ಐಆರ್​ಬಿ ಅಧಿಕಾರಿಗಳು, ಪ್ರತಿಭಟನಾಕಾರರು ಅಧಿಕೃತ ಮನವಿ ಪತ್ರ ನೀಡಿದರೆ ಅದನ್ನು ಮೇಲಧಿಕಾರಿಗಳಿಗೆ ಕಳುಹಿಸಿ ಮಂಗಳವಾರ ಮೇಲಧಿಕಾರಿಗಳಿಂದ ಆದೇಶ ಹೊರಬರುತ್ತಲೆ ಅದರಂತೆ ಕ್ರಮವಹಿಸುವುದಾಗಿ ತಿಳಿಸಿದರು.

    ಅಧಿಕಾರಿಗಳ ಮಾತಿಗೆ ಸಮ್ಮತಿ ಸೂಚಿಸಿದ ಪ್ರತಿಭಟನಾಕಾರರು ಮಂಗಳವಾರ ಅಧಿಕೃತ ಆದೇಶ ಬರುವವರೆಗೆ ಪ್ರತಿಭಟನೆ ಮುಂದೂಡುವುದಾಗಿ ಎಚ್ಚರಿಸಿ ವಾಪಸಾದರು.

    ಸೂರಜ ನಾಯ್ಕ, ಮಂಜುನಾಥ ಭಟ್ ಸುವರ್ಣಗದ್ದೆ, ಕೃಷ್ಣ ನಾಯ್ಕ, ಸುರೇಶ ಹರಿಕಂತ್ರ ಸೇರಿ ನೂರಾರು ಸಾರ್ವಜನಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts