More

    ಮೆಮು ರೈಲು ಸಂಚಾರ 26ರಿಂದ

    ಕಾರವಾರ: ಸಂಪೂರ್ಣ ವಿದ್ಯುದೀಕರಣಗೊಂಡಿರುವ ಕೊಂಕಣ ರೈಲ್ವೆ ಮಾರ್ಗದಲ್ಲಿ ಕಾಯಂ ಆಗಿ ಮೆಮು ರೈಲು ಓಡಾಟ ಸೆ. 26 ರಿಂದ ಪ್ರಾರಂಭವಾಗಲಿದೆ. ಮಡಗಾಂವ-ಕಾರವಾರ ನಡುವೆ ಸಂಚರಿಸುತ್ತಿರುವ ಡೀಸೆಲ್ ಮಲ್ಟಿಪಲ್ ಯುನಿಟ್(ಡೆಮು) ರೈಲನ್ನು ಬದಲಿಸಿ ಮೇನ್​ಲೈನ್ ಇಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (ಮೆಮು) ರೈಲು ಓಡಿಸಲಾಗುತ್ತಿದೆ. ಸೋಮವಾರ ಸಂಜೆ 7.5ಕ್ಕೆ ಮಡಗಾಂವ ಜಂಕ್ಷನ್ ಬಿಡುವ ಮೊದಲ ಮೆಮು ರೈಲು (70101) ರಾತ್ರಿ 8.40ಕ್ಕೆ ಕಾರವಾರ ತಲುಪಲಿದೆ. ಸೆ. 27ರ ಬೆಳಗ್ಗೆ (70102) 6 ಗಂಟೆಗೆ ಕಾರವಾರ ಬಿಡುವ ರೈಲು 7.10 ಕ್ಕೆ ಮಡಗಾಂವ ತಲುಪಲಿದೆ. ಸೆ. 31ರವರೆಗೂ ಮಳೆಗಾಲದ ವೇಳಾಪಟ್ಟಿಯಂತೆ ಪ್ರತಿದಿನ ಇದೇ ವೇಳೆಯಲ್ಲಿ ರೈಲು ಸಂಚರಿಸಲಿದೆ.

    ಅ. 1ರಿಂದ ಸಾಮಾನ್ಯ ವೇಳಾಪಟ್ಟಿ ಪ್ರಾರಂಭವಾಗಲಿದ್ದು, ಸಂಜೆ 7ಕ್ಕೆ ಮಡಗಾಂವ ಬಿಡುವ ರೈಲು 8.30ಕ್ಕೆ ಕಾರವಾರ ತಲುಪಲಿದೆ. ಬೆಳಗ್ಗೆ 6ಕ್ಕೆ ಹೊರಟು 7.5ಕ್ಕೆ ಮಡಗಾಂವ ತಲುಪಲಿದೆ. ರೈಲು ಬಾಳ್ಳಿ, ಕಾಣಕೋಣ, ಲೋಲೆಂ, ಅಸ್ನೋಟಿ ನಿಲ್ದಾಣಗಳಲ್ಲಿ ನಿಲ್ಲಲಿದೆ. ಇನ್ನು 01499 ಹಾಗೂ 01500 ಡೆಮು ರೈಲುಗಳ ಓಡಾಟ ಇರುವುದಿಲ್ಲ. ಹೊಸ ಮೆಮು ರೈಲು ಒಟ್ಟು 8 ಬೋಗಿಗಳನ್ನು ಹೊಂದಿದೆ. ಗೋವಾಕ್ಕೆ ಉದ್ಯೋಗಕ್ಕೆ ತೆರಳುವ ಸಾವಿರಾರು ಜನರಿಗೆ ಇದೇ ರೈಲು ಆಧಾರವಾಗಿದೆ.

    ಇದೇ ಮೊದಲು: ಕಳೆದ ಜುಲೈನಲ್ಲಿ ರೋಹಾ ಹಾಗೂ ಚಿಪ್ಳುಣ್ ನಡುವೆ ಚೌತಿ ವಿಶೇಷ ಮೆಮು ರೈಲು ಓಡಿಸಲಾಗಿತ್ತು. ಕಾಯಂ ಆಗಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಇದೇ ಮೊದಲ ಬಾರಿಗೆ ಮೆಮು ರೈಲು ಓಡಿಸಲಾಗಿತ್ತಿದೆ. ರೈಲು ಗಂಟೆಗೆ 110 ಕಿಮೀವರೆಗೂ ಸಂಚರಿಸುವ ಸಾಮರ್ಥ್ಯ ಹೊಂದಿದೆ. 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ವಿದ್ಯುದೀಕರಣಗೊಂಡು ಕೆಲ ತಿಂಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಂಡಿರುವ ಕೊಂಕಣ ರೈಲ್ವೆ ಮಾರ್ಗದಲ್ಲಿ ಈಗ 4 ಪ್ರಯಾಣಿಕರ ರೈಲುಗಳು ಇಲೆಕ್ಟ್ರಿಕ್ ಲೋಕೋ ಮೂಲಕ ಓಡಾಟ ನಡೆಸಿವೆ.

    ಹಜರತ್ ನಿಜಾಮುದ್ದೀನ್-ತಿರುವನಂತಪುರಂ ಸೆಂಟ್ರಲ್ ರಾಜಧಾನಿ ಎಕ್ಸ್​ಪ್ರೆಸ್ (12432 /12431) ರೈಲುಗಳು ಹಜರತ್ ನಿಜಾಮುದ್ದೀನ್-ಮಡಗಾಂವ ರಾಜಧಾನಿ ಎಕ್ಸ್​ಪ್ರೆಸ್ (22414/22413) ರೈಲುಗಳು ಸೆ. 20 ರಿಂದ ಈಗಾಗಲೇ ಇಲೆಕ್ಟ್ರಿಕ್ ಲೋಕೋ ಮೂಲಕ ಓಡಾಟ ಪ್ರಾರಂಭಿಸಿವೆ. ಬೆಂಗಳೂರು-ಕಾರವಾರ ರೈಲೂ ಮಂಗಳೂರಿನಿಂದ ಇಲೆಕ್ಟ್ರಿಕ್ ಲೋಕೋದೊಂದಿಗೆ ನಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts