More

    ಮೆಡಿಕಲ್ ಕಾಲೇಜು ಸ್ಥಾಪನೆಗೆ‌ ಎಎಪಿ ಉಪವಾಸ ಸತ್ಯಾಗ್ರಹ

    ಬಾಗಲಕೋಟೆ: ಮಹಾತ್ಮಾ ಗಾಂಧೀಜಿ, ಲಾಲ್ ಬಹದ್ದೂರ ಶಾಸ್ತ್ರೀ ಜಯಂತಿ ಅಂಗವಾಗಿ ಬಾಗಲಕೋಟೆಗೆ ೨೦೧೪-೧೫ನೇ ಸಾಲಿನಲ್ಲಿ ಘೋಷಣೆಯಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಆಗ್ರಹಿಸಿ ಎಎಪಿ ಕಾರ್ಯಕರ್ತರ ಜಿಲ್ಲಾಡಳಿತ ಭವನ ಎದುರು ಭಾನುವಾರ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಿದರು.
    ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಎದುರು ಪೆಂಡಾಲ ಹಾಕಿ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ ಶಾಸ್ತ್ರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಎಎಪಿ ಕಾರ್ಯಕರ್ತರು ಸಂಜೆ ವರೆಗೆ ಉಪವಾಸ ಸತ್ಯಾಗ್ರಹ ಧರಣಿಯಲ್ಲಿ ನಿರತರಾದರು. ಈ ವೇಳೆ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಎಎಪಿ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾಗಿ ೨೫ ವರ್ಷ ಪೂರ್ಣಗೊಂಡಿದೆ. ಈ ವರೆಗೆ ಇಲ್ಲಿ ಸರ್ಕಾರಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಗಿಲ್ಲ. ಈಗಾಗಲೇ ನವನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು ೪೮ ಎಕರೆ ಜಮೀನು ನಿಗಧಿಪಡಿಸಲಾಗಿದೆ. ಭಾರತೀಯ ಮೆಡಿಕಲ್ ಕೌನ್ಸಿಲ್ ದಿಂದ ವಿಕ್ಷಣೆ ಕೂಡಾ ಪೂರ್ಣಗೊಂಡಿದೆ. ಆದರು ಸಹ ೨೦೧೪ ರಲ್ಲಿ ಘೋಷಣೆಯಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈಗಾಗಲೇ ಕಾಲೇಜು ಸ್ಥಾಪನೆಗೆ ಬೂಟ ಪಾಲಿಷ್, ದೇಣಿಗೆ ಸಂಗ್ರಹ ಸೇರಿದಂತೆ ನಾನಾ ಹೋರಾಟ ನಡೆಸಲಾಗಿದೆ. ಮುಳಗಡೆ ಜಿಲ್ಲೆಯಾಗಿರುವ ಬಾಗಲಕೋಟೆಗೆ ಸರ್ಕಾರಿ ಮಡಿಕಲ್ ಕಾಲೇಜು ಅವಶ್ಯಕವಾಗಿದೆ. ಯಾವುದೇ ಕಾರಣಕ್ಕೂ ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜು ಸ್ಥಾಪಿಸಬಾರದು. ಸರ್ಕಾರದ ಮಾಲೀಕತ್ವದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು. ಅಲ್ಲದೆ ಮುಳಗಡೆ ಸಂತಸ್ತರ ಸಮಸ್ಯೆಗಳನ್ನು ಪರಿಹರಿಸಬೇಕು, ನವನಗರದಲ್ಲಿರುವ ಗ್ರೀನ್ ಫುಡ್ ಪಾರ್ಕ ಜಮೀನಿನಲ್ಲಿ ಸಂತ್ರಸ್ತರಿಗೆ ಸಣ್ಣ ಉದ್ಯಮ ಸ್ಥಾಪಿಸಲು ಅವಕಾಶ ನೀಡಬೇಕು. ಬೇರೆಯವರಿಗೆ ಭೂಮಿ ನೀಡಬಾರದು ಎಂದು ಆಗ್ರಹಿಸಿದರು.
    ಮುಖಂಡರಾದ ಭೀಮನಗೌಡ ಭಜನ್ನವರ, ಭಾಗ್ಯಾ ಬೆಟಗೇರಿ, ವೀರನಗೌಡ ಕೋಮಾರ, ಮಾಧವಿ ರಾಠೋಡ, ಅರವಿಂದ ಮುಚಖಂಡಿ ಸೇರಿದಂತೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts