More

    ಮೆಗ್ಗಾನ್​ನಲ್ಲಿ ಹತ್ತೇ ನಿಮಿಷಕ್ಕೆ ಕರೊನಾ ಫಲಿತಾಂಶ

    ಶಿವಮೊಗ್ಗ: ಜಿಲ್ಲೆಯಲ್ಲಿ ಕರೊನಾ ಸೋಂಕಿತರನ್ನು ಶೀಘ್ರವೇ ಪತ್ತೆ ಹಚ್ಚುವ ಉದ್ದೇಶದಿಂದ ತಪಾಸಣೆಗೆ ಒಳಪಟ್ಟವರ ಫಲಿತಾಂಶ ಪಾಸಿಟಿವ್ ಅಥವಾ ನೆಗೆಟಿವ್ ಎಂಬುದನ್ನು ಕೇವಲ ಹತ್ತು ನಿಮಿಷದಲ್ಲಿ ಖಚಿತಪಡಿಸುವ ವ್ಯವಸ್ಥೆ ಮೆಗ್ಗಾನ್ ಕರೊನಾ ಆಸ್ಪತ್ರೆಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಸೋಂಕಿತರಿಗೆ ಕಲ್ಪಿಸಿರುವ ವ್ಯವಸ್ಥೆ ಪರಿಶೀಲಿಸಿದ ಅವರು, ರ್ಯಾಪಿಡ್ ಆಂಟಿಜನ್ ಟೆಸ್ಟ್ ಮೂಲಕ ಕರೊನಾ ಪರೀಕ್ಷೆ ಫಲಿತಾಂಶವನ್ನು ಸಂಬಂಧಪಟ್ಟವರ ಮೊಬೈಲ್​ಗೆ ಕಳಿಸಲಾಗುತ್ತಿದೆ. ಆರೋಗ್ಯ ಇಲಾಖೆ ಸಿದ್ಧಪಡಿಸಿರುವ ವೆಬ್​ಸೈಟ್​ನಲ್ಲಿ 32 ಗಂಟೆಯೊಳಗೆ ಪೂರ್ಣ ಫಲಿತಾಂಶ ದೊರೆಯಲಿದೆ ಎಂದರು.

    ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರೊನಾ ಪಾಸಿಟಿವ್ ವ್ಯಕ್ತಿಗಳಿಗೆ ಗುಣಮಟ್ಟದ ಚಿಕಿತ್ಸೆ ಖಾತ್ರಿಪಡಿಸಲು ವಾರ್ಡ್​ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು ಕಾರ್ಯ ಚಟುವಟಿಕೆಗಳನ್ನು ನಿರಂತರವಾಗಿ ಗಮನಿಸಲಾಗುತ್ತಿದೆ. ಕರೊನಾ ವಾರ್ಡ್​ನಲ್ಲಿ ಮೈಕ್ ಕೂಡ ಅಳವಡಿಸಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿರುವ ಕಂಟ್ರೋಲ್ ರೂಂನಿಂದ ನೇರವಾಗಿ ವೈದ್ಯರು ಅಥವಾ ಕರ್ತವ್ಯದಲ್ಲಿರುವ ದಾದಿಯರೊಂದಿಗೆ ಮಾತುಕತೆ ನಡೆಸಲಾಗುವುದು. ಈ ಸೌಲಭ್ಯವನ್ನು ರೋಗಿಗಳು ಸಹ ಬಳಸಿಕೊಳ್ಳಬಹುದು ಎಂದು ಹೇಳಿದರು.

    ವಾರ್ಡ್​ನಲ್ಲಿ ಟೆಲಿಫೋನ್ ವ್ಯವಸ್ಥೆ ಸಹ ಕಲ್ಪಿಸಲಾಗಿದೆ. ರೋಗಿಗಳ ಸಂಬಂಧಿಕರು ಈ ಮೂಲಕ ತಮ್ಮವರ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

    13 ಸಾವಿರ ಲೀ. ಆಕ್ಸಿಜನ್ ಪ್ಲಾಂಟ್: ಮೆಗ್ಗಾನ್ ಆವರಣದಲ್ಲಿ 13 ಸಾವಿರ ಲೀ. ಸಾಮರ್ಥ್ಯದ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಆರಂಭಿಸಿರುವುದನ್ನು ಪರಿಶೀಲಿಸಿದ ಸಚಿವರು, ಜಿಲ್ಲೆಯಲ್ಲಿ ಇನ್ಮುಂದೆ ಆಕ್ಸಿಜನ್ ಕೊರತೆ ಇರಲಾರದು. ಇದರಿಂದ ಆಕ್ಸಿಜನ್ ಬೇಡಿಕೆ ಪೂರೈಸಲು ಸಾಧ್ಯ. ಕರೊನಾ ಪೀಡಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಲಭ್ಯತೆ ಖಾತ್ರಿಪಡಿಸಲು ಪ್ಲಾಂಟ್ ಅಳವಡಿಸಲಾಗಿದೆ ಎಂದರು.

    ಡಿಸಿ ಕೆ.ಬಿ.ಶಿವಕುಮಾರ್, ಮೆಗ್ಗಾನ್ ನಿರ್ದೇಶಕ ಡಾ. ಒ.ಎಸ್.ಸಿದ್ದಪ್ಪ, ಜಿಲ್ಲಾ ಸರ್ಜನ್ ಡಾ. ಆರ್.ರಘುನಂದನ್, ವೈದ್ಯಕೀಯ ಅಧೀಕ್ಷಕ ಡಾ. ಶ್ರೀಧರ್, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಸಿಮ್್ಸ ಸಲಹಾ ಮಂಡಳಿ ಸದಸ್ಯ ಡಾ. ಗೌತಮ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts