More

    ಮೆಕ್ಕೆಜೋಳ ಬೆಳೆಗಾರರಿಗೆ ಪರಿಹಾರ ಬಿಡುಗಡೆ ಆಗ್ರಹಿಸಿ ಪ್ರತಿಭಟನೆ; ತಕ್ಷಣ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ತೆರೆಯಲು ಆಗ್ರಹ

    ಶಿರಾಳಕೊಪ್ಪ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯಿಂದ ಮೆಕ್ಕೆಜೋಳ ಸಂಪೂರ್ಣ ಹಾಳಾಗಿದ್ದು, ಈವರೆಗೆ ಬೆಳೆ ಪರಿಹಾರ ರೈತರಿಗೆ ಸರಿಯಾಗಿ ತಲುಪಿಲ್ಲ. ಹಾಗೆಯೇ ರೈತರ ಹಲವಾರು ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕಿದೆ ಎಂದು ಒತ್ತಾಯಿಸಿ ಪಟ್ಟಣದ ನಾಡಕಚೇರಿ ಎದುರು ರಾಜ್ಯ ರೈತಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
    ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಪುಟ್ಟನಗೌಡ ಮಾತನಾಡಿ, ರೈತ ದೇಶದ ಬೆನ್ನೆಲುಬು ಎಂದು ಹೇಳುವ ರಾಜಕೀಯ ಪಕ್ಷಗಳು ರೈತರನ್ನು ಶೋಷಿಸುತ್ತಿವೆ. ಕಳೆದ 1 ವಷರ್ದಿಂದ ಕೃಷಿ ಉಪಕರಣಗಳಿಗೆ ಸಹಾಯಧನ ಸಿಕ್ಕಿಲ್ಲ, ಭತ್ತ ಮತ್ತು ಜೋಳ ಕಟಾವಿಗೆ ಬಂದಿದ್ದು ಕೂಡಲೆ ಬೆಂಬಲ ಬೆಲೆ ಘೋಷಿಸಿ ತಕ್ಷಣ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು.
    ರೈತ ಸಂಘದ ಮುಖಂಡ ಶಾಂತಣ್ಣ ಮಾತನಾಡಿ, ಕಳೆದ ವಷರ್ ರೈತರು ವಿಮಾ ಕಂತು ಕಟ್ಟಿದ್ದಾರೆ. ಆದರೂ ಕೆಲವೇ ಕೆಲವೇ ರೈತರಿಗೆ ಪರಿಹಾರ ಪಾವತಿಸಿದ್ದಾರೆ. ಇಂತಹ ಸಂಗತಿ ಹೇಳಿದರೆ ರಾಜಕಾರಣಿಗಳು, ರೈತರಿಗೆ ಕೆಲಸವಿಲ್ಲ ಹೋರಾಟ ಮಾಡುತ್ತಿದ್ದಾರೆ ಎಂದು ಹಗುರವಾಗಿ ಮಾತನಾಡುತ್ತಾರೆ. ಆದ್ದರಿಂದ ರೈತರು ನ್ಯಾಯಕ್ಕಾಗಿ ಬೀದಿಗೆ ಇಳಿಯುವ ಕಾಲ ಸನ್ನ್ನಿಹಿತವಾಗಿದೆ ಎಂದರು.
    ಕಡೇನಂದಿಹಳ್ಳಿ ರಾಜು ಮಾತನಾಡಿ, ಇಂದು ನಮ್ಮ ಪಕ್ಕದ ಹಿರೇಕೆರೂರು ತಾಲೂಕಿನಲ್ಲಿ ಎಲ್ಲ ರೈತರಿಗೆ ಬೆಳೆ ಪರಿಹಾರ ಬಂದಿದೆ. ಆದರೆ ನಮ್ಮ ತಾಲೂಕಿನಲ್ಲಿ ಈವರೆಗೆ ಬಂದಿಲ್ಲ. ಸುಣ್ಣದಕೊಪ್ಪ ಕೆನರಾ ಬ್ಯಾಂಕಿನಲ್ಲಿ ರೈತ ಕಲ್ಲಪ್ಪ ಬುರಡಿಕಟ್ಟಿ ಅವರು ಬೆಳೆಸಾಲ ಪಡೆದಿದ್ದಾರೆ ಎಂದು ಅವರ ಹೆಸರಿನ ಹಾಲಿನ ಹಣ, ಬಂಗಾರದ ಸಾಲ ಕಟ್ಟಿಲ್ಲ ಎಂದು ಕಿರುಕುಳ ಕೊಡುತ್ತಿದ್ದಾರೆ ಎಂದು ಹೇಳಿದರು.
    ತಾಲೂಕು ರೈತಸಂಘದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಮಾತನಾಡಿ, ಕಳೆದ ತಿಂಗಳು ನಾವು ಬೆಳೆಪರಿಹಾರ ಸೇರಿದಂತೆ ಕೆಲವು ವಿಷಯಗಳನ್ನು ತಕ್ಷಣ ಈಡೇರಿಸುವಂತೆ ಒತ್ತಾಯಿಸಿ ಮನವಿ ಕೊಡಲಾಗಿತ್ತು, ಆದರೆ ಸರ್ಕಾರ ಈವರೆಗೆ ಮಳೆಯಿಂದ ಹಾನಿಯಾದ ರೈತರಿಗೆ ಪರಿಹಾರ ಕೊಡಿಸುವಲ್ಲಿ ವಿಫಲವಾಗಿದೆ ಎಂದರು.
    ಮನವಿ ಸ್ವೀಕರಿಸಿದ ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ಕೃಷಿ ಅಧಿಕಾರಿ ಕಿರಣ್‌ಕುಮಾರ್ ಅವರ ಶ್ರಮದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಶಿಕಾರಿಪುರ ತಾಲೂಕಿಗೆ ಹೆಚ್ಚಿನ ಬೆಳೆ ಪರಿಹಾರ ಬಂದಿದೆ. ನಿಮ್ಮ ಕೆಲ ಬೇಡಿಕೆಗಳನ್ನು ಸರ್ಕಾರದ ಗಮನ್ಕಕೆ ತರಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts