More

    ಮೆಕಾನಿಕ್​ಗಳಿಗೆ ಹೆಚ್ಚಿದ ಬೇಡಿಕೆ

    ಕಾರವಾರ: ನೆರೆ ಬಂದು ಹೋದ ನಂತರ ಕಾರವಾರದ ಕೆಲ ಭಾಗಗಳಲ್ಲಿ ಮೆಕಾನಿಕ್​ಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಕಾರವಾರ ತಾಲೂಕಿನ ಕದ್ರಾ, ಮಲ್ಲಾಪುರ, ಗ್ರಾಪಂಗಳು ಸಂಪೂರ್ಣ ಮುಳುಗಡೆಯಾಗಿದ್ದವು. ಮನೆಗಳಿಗೆ ನೀರು ನುಗ್ಗಿತ್ತು. ಎದುರು ಇಟ್ಟ ಕಾರು, ಬೈಕ್​ಗಳು ನೀರಿನೊಳಗೆ ಸೇರಿದ್ದವು. ಇದರಿಂದ ಅವುಗಳ ರಿಪೇರಿಗೆ ಜನ ಮುಗಿಬಿದ್ದಿದ್ದಾರೆ.

    ಇದ್ದಕ್ಕಿದ್ದಂತೆ ನೀರು ಬಂದಿದ್ದರಿಂದ ಟಿವಿ, ಫ್ರಿಜ್, ಮಿಕ್ಸರ್ ಮುಂತಾದ ವಸ್ತುಗಳನ್ನೂ ಸುರಕ್ಷಿತ ಸ್ಥಳಕ್ಕಿಡಲಾಗಿರಲಿಲ್ಲ. ಎರಡು ದಿನ ನೀರಿನಲ್ಲಿ ಇದ್ದು ಎಲ್ಲವೂ ಹಾಳಾಗಿವೆ. ಇನ್ನು ವಾಹನಗಳದ್ದೂ ಇದೇ ಪರಿಸ್ಥಿತಿ. ಮಲ್ಲಾಪುರ ಒಂದರಲ್ಲೇ 30 ಕ್ಕೂ ಹೆಚ್ಚು ಕಾರುಗಳು ರಿಪೇರಿಗೆ ಬಂದಿವೆ. ಕದ್ರಾ, ಕುರ್ನಿಪೇಟೆ, ಮಲ್ಲಾಪುರ ಭಾಗದಲ್ಲಿ ಓಡಾಡಿದರೆ ಗ್ಯಾರೇಜ್​ಗಳ ಎದುರು ಬೈಕ್, ಕಾರುಗಳ ಸಾಲು ಕಂಡುಬರುತ್ತಿವೆ. ಕಾರುಗಳನ್ನು ಸರ್ವೀಸ್ ಸ್ಟೇಶನ್​ಗೆ ಎಳೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ. ಇಲೆಕ್ಟ್ರಾನಿಕ್ಸ್ ಅಂಗಡಿಗಳ ಎದುರು ಗುಜರಿ ಸಾಮಗ್ರಿಗಳಂತೆ ಇಲೆಕ್ಟ್ರಾನಿಕ್ಸ್ ವಸ್ತುಗಳು ಬಿದ್ದುಕೊಂಡಿವೆ. ನೀರು ಮಾತ್ರವಲ್ಲ ರಾಡಿ ನೀರು ತುಂಬಿಕೊಂಡಿದ್ದರಿಂದ ಯಾವುದೇ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ರಿಪೇರಿ ಮಾಡುವ ಪರಿಸ್ಥಿತಿ ಇಲ್ಲ ಎನ್ನುತ್ತಾರೆ ಇಲೆಕ್ಟ್ರಾನಿಕ್ಸ್ ಅಂಗಡಿಕಾರ ಬಾಬು ನಾಯ್ಕ.

    ದಾಖಲೆಗಳಿಗಾಗಿ ಪರದಾಟ
    ನೆರೆ ಇಳಿದು 10 ದಿನ ಕಳೆದರೂ ಅದು ಮಾಡಿದ ಹಾನಿಗಳನ್ನು ಸರಿಮಾಡಿಕೊಳ್ಳಲು ಜನರಿಗೆ ಆಗುತ್ತಿಲ್ಲ. ಅಂಕೋಲಾ ತಾಲೂಕಿನ ಗಂಗಾವಳಿ ನದಿಯ ಇಕ್ಕೆಲಗಳ ಹಲವು ಗ್ರಾಮಗಳಲ್ಲಿ ಮನೆಗಳು ಸಂಪೂರ್ಣ ಮುಳುಗಿದ್ದವು. ಇದರಿಂದ ದಾಖಲೆಗಳೂ ನಾಪತ್ತೆಯಾಗಿವೆ. ಆಧಾರ ಕಾರ್ಡ್, ರೇಶನ್ ಕಾರ್ಡ್ ಕೂಡ ಕೆಲವರಿಗೆ ಸಿಗುತ್ತಿಲ್ಲ. ಇನ್ನು ಕೆಲವರ ಮನೆಗಳಲ್ಲಿ ದಾಖಲೆಗಳಿದ್ದರೂ ಅವೆಲ್ಲ ಒದ್ದೆ, ಮುದ್ದೆಯಾಗಿವೆ. ಮನೆಗಳ ಎದುರು ದಾಖಲೆಗಳು, ಪುಸ್ತಕಗಳನ್ನು ಒಣಗಿಸುತ್ತಿರುವುದು ಸಾಮಾನ್ಯವಾಗಿದೆ.



    ನೆರೆ ಪೀಡಿತ ಪ್ರದೇಶಗಳ ಹಲವರ ಸರ್ಕಾರಿ ದಾಖಲೆಗಳಿಗೆ ಹಾನಿಯಾಗಿರುವುದು ಗಮನಕ್ಕೆ ಬಂದಿದೆ. ಇದರಿಂದ ನಾವು ಕೆಲವೇ ದಿನಗಳಲ್ಲಿ ಸಂಬಂಧಪಟ್ಟ ಊರಿಗೇ ತೆರಳಿ ಕ್ಯಾಂಪ್ ಮಾಡಿ ದಾಖಲೆಗಳನ್ನು ಅಪ್​ಲೋಡ್ ಮಾಡಲು ನಿರ್ಣಯಿಸಿದ್ದೇವೆ. ಮನೆಗಳ ಸರ್ವೆ ಕಾರ್ಯ ಮುಗಿದ ತಕ್ಷಣ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿದ್ದೇವೆ.
    | ಕೃಷ್ಣಮೂರ್ತಿ ಎಚ್.ಕೆ. ಅಪರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts