More

    ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹ

    ಬೆಳಗಾವಿ: ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಂಚಾರಿ ಕಾಯಂ ಪೀಠ ಬೆಳಗಾವಿಗೆ ಮಂಜೂರಾಗಿ ಆರು ತಿಂಗಳು ಗತಿಸಿದರೂ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಕೀಲರು ಕೋರ್ಟ್ ಎದುರಿನ ರಸ್ತೆಯಲ್ಲಿ ಶುಕ್ರವಾರ ವಾಹನಗಳ ಸಂಚಾರ ತಡೆದು ಪ್ರತಿಭಟಿಸಿದರು.

    ಕಲಬುರಗಿಗೆ ಮಂಜೂರಾಗಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಂಚಾರಿ ಕಾಯಂ ಪೀಠಕ್ಕೆ ಈಗಾಗಲೇ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ, ಬೆಳಗಾವಿಯಲ್ಲಿ ಪೀಠ ಮಂಜೂರಾಗಿ ಆರು ತಿಂಗಳು ಗತಿಸಿದರೂ ಯಾವುದೇ ರೀತಿಯ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲ. ಈ ಕೂಡಲೇ ಪೀಠ ಕಾರ್ಯಾರಂಭ ಮಾಡುವುದಕ್ಕೆ ಜಿಲ್ಲಾ ಕೋರ್ಟ್ ಆವರಣದಲ್ಲೇ ಕಟ್ಟಡದ ವ್ಯವಸ್ಥೆ ಮಾಡಬೇಕು.

    ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರಭು ಯತ್ನಟ್ಟಿ, ಗಿರೀಶ ಪಾಟೀಲ, ಎನ್.ಆರ್.ಲಾತೂರ್, ಸಚಿನ ಶಿವಣ್ಣವರ, ಸುಧೀರ ಚವ್ಹಾಣ, ಕಪಾಯಿ ಭಂಟಿ, ಎಂ.ಎಸ್. ನಂದಗಾವಿ, ಸಿದ್ದು ತುಗಶೆಟ್ಟಿ, ಡಿ.ಆರ್.ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts