More

    ಮೂಕಪ್ಪ ಶ್ರೀಗಳ ಕ್ರಿಯಾ ಸಮಾಧಿ

    ಬ್ಯಾಡಗಿ: ಸುಕ್ಷೇತ್ರ ಗುಡ್ಡದಮಲ್ಲಾಪುರ ಸಂಸ್ಥಾನ ದಾಸೋಹಮಠದ ಹಿರಿಯ ಮೂಕಪ್ಪ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಶುಕ್ರವಾರ ಕ್ರಿಯಾ ಸಮಾಧಿ ಕಾರ್ಯಕ್ರಮ ನಡೆಸಲಾಯಿತು. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ಧಾರ್ವಿುಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.

    ವಿವಿಧ ಶ್ರೀಗಳಿಂದ ದರ್ಶನ: ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶದ ತತ್ತ್ವವನ್ನು ಹೊಂದಿದ ಇಲ್ಲಿನ ಗುರುಪರಂಪರೆಗೆ ಎಲ್ಲ ಧರ್ಮದ ಶ್ರೀಗಳು ಆಗಮಿಸುವುದು ವಿಶೇಷ. ಗುರುವಾರ ಶ್ರೀಗಳ ಅಂತಿಮದರ್ಶನಕ್ಕಾಗಿ ಕಡೇನಂದಿಹಳ್ಳಿಯ ರೇವಣಸಿದ್ಧ ಶ್ರೀಗಳು, ಕೂಡಲದ ಮಹೇಶ್ವರ ಶ್ರೀಗಳು, ಮಡ್ಲೂರು ಮುರುಘರಾಜೇಂದ್ರ ಶ್ರೀಗಳು, ಪುಷ್ಪಗಿರಿ ಬೃಹನ್ಮಠದ ಶ್ರೀಗಳು, ಹಿರೇಮಾಗಡಿಯ ಶಿವಾಚಾರ್ಯರು, ಶಾಂತಪುರ ಹಿರೇಮಠದ ಶ್ರೀಗಳು, ತೊಗರ್ಶಿ ಮಳೆಮಠದ ಶ್ರೀಗಳು, ಹರಸೂರು ಬಣ್ಣದ ಮಠದ ಶಿವಾಚಾರ್ಯರು, ಹಿರೂರು ನಂಜುಂಡೇಶ್ವರ ಶ್ರೀಗಳು, ಸೇರಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಯು.ಬಿ. ಬಣಕಾರ, ಬಸವರಾಜ ಶಿವಣ್ಣನವರ, ಎಸ್.ಆರ್. ಪಾಟೀಲ ಆಗಮಿಸಿದ್ದರು.

    ವಿಭೂತಿ, ಬಿಲ್ವಪತ್ರಿ, ರುದ್ರಾಕ್ಷಿಗಳಿಂದ ಕ್ರಿಯಾಸಮಾಧಿ: ವೀರಶೈವ ಪರಂಪರೆಯ ಗುರುಗಳ ಸಂಸ್ಕಾರದ ವಿಧಿಯಂತೆ ಇಲ್ಲಿನ ಶ್ರೀಗಳಿಗೂ ಪದ್ಧತಿ ಆಚರಿಸಲಾಗುತ್ತಿದೆ. ಶ್ರೀಮಠದ ಆವರಣದಲ್ಲಿ ಜರುಗಿದ ಸಂಸ್ಕಾರಕ್ಕೆ ವಿಭೂತಿ, ಹೂವು, ಬಿಲ್ವಪತ್ರಿ ಸೇರಿ ರುದ್ರಾಕ್ಷಿಗಳನ್ನು ಹಾಕಲಾಯಿತು. ಶಾಸ್ತ್ರೋಕ್ತವಾಗಿ ಮಂತ್ರ, ಘೊಷಣೆ ಹಾಗೂ ಸಂಪ್ರದಾಯ ಬದ್ಧವಾಗಿ ಕಾರ್ಯಕ್ರಮಗಳು ಜರುಗಿದವು. ‘ಹರಹರ ಮಹಾದೇವ’ ಉದ್ಗೋಷ ಮುಗಿಲು ಮುಟ್ಟಿತ್ತು. ಇದಕ್ಕೂ ಮುನ್ನ ಗ್ರಾಮದ ವಿವಿಧ ಬೀದಿಗಳಲ್ಲಿ ವಾದ್ಯ ವೃಂದಗಳೊಂದಿಗೆ ಅಂತಿಮದರ್ಶನದ ಮೆರವಣೆಗೆ ಜರುಗಿತು. ದೂರದ ಊರುಗಳಿಂದ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

    ಕಾರ್ಯಕ್ರಮ ಬಳಿಕ ಮಾತನಾಡಿದ ಶ್ರೀಮಠದ ಧರ್ಮಾಧಿಕಾರಿ ವೇ.ಮೃತ್ಯುಂಜಯ್ಯ ಶ್ರೀಗಳು ದಾಸೋಹಮಠ, ಹಿರಿಯ ಶ್ರೀಗಳು 5 ವರ್ಷಗಳಲ್ಲಿ ಮಠದ ಅಭಿವೃದ್ಧಿಯಲ್ಲಿ ಮುಂಚೂಣಿ ವಹಿಸಿದ್ದರು. ರಾಜ್ಯ ಅಲ್ಲದೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿ ಹಲವೆಡೆ ಭಕ್ತರ ಭಿನ್ನಹದ ಮೇರೆಗೆ ಪೂಜೆಗೆ ತೆರಳುತ್ತಿದ್ದರು. ಶ್ರೀಗಳು ಕೋಟಿ ರೂ. ವೆಚ್ಚದ ಬೃಹತ್ ಅನ್ನದಾನ ಮಹಲ್ ನಿರ್ವಿುಸಲು ಭೂಮಿ ಪೂಜೆ ಕೈಗೊಳ್ಳುವ ಮೂಲಕ ಕಟ್ಟಡಕ್ಕೆ ಚಾಲನೆ ನೀಡಿದ್ದರು. ಪೂರ್ವ ಪ್ರಾಥಮಿಕ ಶಾಲೆ ಕೂಡ ಇವರ ಅವಧಿಯಲ್ಲಿ ಆರಂಭಗೊಂಡಿದ್ದು, ನಾಡಿನಲ್ಲಿ ವಿಶಿಷ್ಟ ಪರಂಪರೆಯ ಮಠವೆಂದು ಖ್ಯಾತಿ ಪಡೆದಿದೆ. ಶ್ರೀಗಳ ಅಗಲಿಕೆ ಮಠದ ಭಕ್ತರಿಗೆ ನೋವುಂಟು ಮಾಡಿದ್ದು, ಅವರ ಆತ್ಮಕ್ಕೆ ಶಾಂತಿ ಲಭಿಸಲಿ. ಪುನಃ ಶ್ರೀಗಳು ಪುನರ್ಜನ್ಮ ತಾಳಲಿದ್ದಾರೆ ಎಂದು ತಿಳಿಸಿದರು.

    ಶ್ರೀಗಳ ಹಿನ್ನೆಲೆ: 2014 ರಲ್ಲಿ ಸೊರಬ ತಾಲೂಕು ಬೆಟ್ಟದಕೂರ್ಲಿ ಗ್ರಾಮದಲ್ಲಿ ಜನಿಸಿದ್ದ ಶ್ರೀಗಳು, ಮಠದ ನೂತನ ಪೀಠಾಧಿಪತಿಗಳಾಗಿ ಶ್ರೀಶೈಲ ಜಗದ್ಗುರುಗಳಿಂದ ಪಟ್ಟಾಧಿಕಾರ ನಡೆದಿತ್ತು. 5 ವರ್ಷಗಳ ಕಾಲ ಮಠದ ಭಕ್ತರ ಉದ್ಧಾರಕ್ಕಾಗಿ ಶ್ರಮಿಸಿದ್ದರು. ಗ್ರಾಮ ಪಟ್ಟಣಗಳೆನ್ನದೆ ಎಲ್ಲ ಧರ್ವಿುಯರ ಪಾದಪೂಜೆ ಗೃಹಪ್ರವೇಶ, ವೈವಾಹಿಕ, ಜಾತ್ರೆ, ಉತ್ಸವ ಸೇರಿ ಎಲ್ಲ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಭಕ್ತರ ಭಿನ್ನಹದ ಮೇರೆಗೆ ಆಗಮಿಸುತ್ತಿದ್ದರು. ಕಳೆದ ಬಾರಿ ಜಾತ್ರೋತ್ಸವ ಅಂಗವಾಗಿ 12ನೇ ನಾಣ್ಯಗಳ ತುಲಾಭಾರ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ನಾಡಿನ ಲಕ್ಷಾಂತರ ಭಕ್ತರನ್ನು ತನ್ನಡೆಗೆ ಸೆಳೆದಿದ್ದರು. ಇಲ್ಲಿನ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಗೂ ಪ್ರತಿದಿನ ಬಂದು ಹೋಗುವ ನೂರಾರು ಭಕ್ತರಿಗೆ ಮೂಕಪ್ಪ ಶ್ರೀಗಳ ಧಾರ್ವಿುಕ ಬಿಕ್ಷಾಟನೆಯಿಂದ ಪ್ರಸಾದ ನಡೆಯುತ್ತಿರುವುದು ವಿಶೇಷವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts