More

    ಮುದ್ದೇಬಿಹಾಳ ತಾಲೂಕು ಮಟ್ಟದ 3ನೇ ಶರಣ ಸಾಹಿತ್ಯ ಸಮ್ಮೇಳನ ನಾಳೆ

    ಮುದ್ದೇಬಿಹಾಳ: ಪಟ್ಟಣದ ಎಪಿಎಂಸಿಯಲ್ಲಿರುವ ಬ್ಯಾಂಕ್‌ನ ಸಭಾ ಭವನದಲ್ಲಿ ೆ.4ರಂದು ತಾಲೂಕು ಮಟ್ಟದ ಮೂರನೇ ಶರಣ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

    ಬೆಳಗ್ಗೆ 7.30ಕ್ಕೆ ಅಹಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ರಾಷ್ಟ್ರಧ್ವಜಾರೋಹಣ ಮೂಲಕ ಚಾಲನೆ ನೀಡುವರು. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ ಪರಿಷತ್ತಿನ ಧ್ವಜಾರೋಹಣ ಮಾಡುವರು. ಗಣ್ಯರಾದ ಅಶೋಕ ತಡಸದ, ಕಾಶಿಬಾಯಿ ರಾಂಪುರ, ಸಂಗೀತಾ ನಾಡಗೌಡ, ಶರಣು ಸಜ್ಜನ ಸೇರಿ ಹಲವರು ಅತಿಥಿಗಳಾಗಿ ಭಾಗವಹಿಸುವರು.

    ಬೆಳಗ್ಗೆ 8 ಗಂಟೆಗೆ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಬಸವೇಶ್ವರ ವೃತ್ತ, ದುರ್ಗಾದೇವಿ ಗುಡಿ, ಲಕ್ಷ್ಮೀ ಗುಡಿ, ಶಾರದಾದೇವಿ ಗುಡಿ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಎಪಿಎಂಸಿಗೆ ಆಗಮಿಸಲಿದೆ. ಮೆರವಣಿಗೆಯನ್ನು ಗಣ್ಯ ವರ್ತಕ ಬಸವರಾಜ ಮೋಟಗಿ ಉದ್ಘಾಟಿಸುವರು.
    ಬೆಳಗ್ಗೆ 10.30ಕ್ಕೆ ಸಮ್ಮೇಳನವನ್ನು ಶಾಸಕ ಸಿ.ಎಸ್.ನಾಡಗೌಡ ಉದ್ಘಾಟಿಸುವರು.

    ಯಶವಂತ ಶರಣರು ಸಾನ್ನಿಧ್ಯ ವಹಿಸುವರು. ಹಿರಿಯ ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಸಮ್ಮುಖ ವಹಿಸುವರು. ಚಂದ್ರಶೇಖರ ಇಟಗಿ ಸರ್ವಾಧ್ಯಕ್ಷತೆ ವಹಿಸುವರು. ಪ್ರಭುಗೌಡ ದೇಸಾಯಿ ಗ್ರಂಥ ಲೋಕಾರ್ಪಣೆಗೊಳಿಸುವರು. ಪರಿಷತ್ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಬಸವ ಭಾವಪೂಜೆ ನೆರವೇರಿಸುವರು. ರುದ್ರೇಶ ಕಿತ್ತೂರ ಆಶಯ ನುಡಿ ಹೇಳುವರು. ಗಣ್ಯರಾದ ಎಂ.ಬಿ.ನಾವದಗಿ, ಶಿವಣ್ಣಶರಣರು ಗುಡಗುಂಟಿ, ಬಸವರಾಜ ನಾಲತವಾಡ, ಶಂಕರಗೌಡ ಹಿರೇಗೌಡರ, ಸತೀಶ ಓಸ್ವಾಲ್ ಉಪಸ್ಥಿತರುವರು. ಜೋದಾಬಿ ಬೀಳಗಿ ಅವರ ಅರಿವೇ ಗುರು, ಎಸ್.ಎ.ಬೇವಿನಗಿಡದ ಅವರ ಮಹಾಸಂಗಮ ಗ್ರಂಥ ಲೋಕಾರ್ಪಣೆಗೊಳ್ಳಲಿವೆ.

    ಮಧ್ಯಾಹ್ನ ಎರಡು ಗೋಷ್ಠಿಗಳು ನಡೆಯಲಿದ್ದು ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಕುರಿತು ಶಹಾಪುರದ ಅನುಭಾವಿ ವಿಶ್ವಾರಾಧ್ಯ ಸತ್ಯಂಪೇಟೆ, ಭವಿಷ್ಯತ್ತಿನ ಭಾರತಕ್ಕೆ ವಚನ ಸಾಹಿತ್ಯ ಕುರಿತು ಡಾ.ಉಷಾದೇವಿ ಹಿರೇಮಠ ವಿಷಯ ಮಂಡಿಸುವರು. ಸಂಜೆ 5 ಗಂಟೆಗೆ ಸನ್ಮಾನ ಮತ್ತು ಸಮಾರೋಪ ನಡೆಯಲಿದೆ. ಇಳಕಲ್ಲನ ಗುರುಮಹಾಂತ ಶಿವಯೋಗಿಗಳು ದಿವ್ಯ ಸಾನ್ನಿಧ್ಯ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅಧ್ಯಕ್ಷತೆ ವಹಿಸುವರು. ನಂತರ ಸರ್ವಾಧ್ಯಕ್ಷರ ನುಡಿ ಇರಲಿದ್ದು ಬಾಪುಗೌಡ ಪಾಟೀಲ ಅವರು ನಿರ್ಣಯಗಳನ್ನು ಮಂಡಿಸುವರು.

    • ಸರ್ವಾಧ್ಯಕ್ಷರ ಪರಿಚಯ: ಮುದ್ದೇಬಿಹಾಳ ತಾಲೂಕು ಕೋಳೂರು ಗ್ರಾಮದ ಚಂದ್ರಶೇಖರ ಬ. ಇಟಗಿ ಅವರು 1 ಮಾರ್ಚ್ 1946 ರಂದು ಜನಿಸಿದರು. ಎಂಎ, ಎಂಇಡಿ ಪದವೀಧರರಾಗಿರುವ ಅವರು 1968 ರಿಂದ ನಾಲತವಾಡದ ವೀರೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಉಪ ಪ್ರಾಂಶುಪಾಲರಾಗಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಶರಣರ ಸಾಹಿತ್ಯವನ್ನು ನಿರಂತರ ಅಧ್ಯಯನ ಮಾಡಿ ಅನೇಕ ಸಾಹಿತ್ಯ ಕೃತಿಗಳು ಹಾಗೂ ಲೇಖನಗಳನ್ನು ರಚಿಸಿದ್ದಾರೆ. ಮೂಗು ಕಚ್ಚಿದ ಕಡಬು, ಶಾಂತಿ, ವೀರೇಶ ಚರಿತೆ, ಅಜಂತಾ ಗುಹಾಉಂಗಳು, ತೆರಹು-ಮರಹು (ಏಕಾಂಕ ನಾಟಕ), ಶಿಕ್ಷಕ ಪಾಲಕ ಮತ್ತು ಮಗು, ಉದ್ಧರಣೆ ಸಾಹಿತ್ಯ ಪರಿಚಯ, ಲಿಂಗಾಯತ ಧರ್ಮ-ಸ್ವಸ್ತಿ ಮಂತ್ರ, ಲಿಂಗಾಯತ ಷಟಸ್ಥಲ ಧ್ವಜ ಇವು ಪ್ರಮುಖ ಬರಹಗಳಾಗಿವೆ. ಬಸವಾದಿ ಶರಣರ ವಚನಸಾರ, ಸಿದ್ದರಾಮ ಸಾಹಿತ್ಯ ಸಂಗ್ರಹ, ಹುಟ್ಟು ಹೊಂದಳಿದ ಹಡಪದ ಅಪ್ಪಣ್ಣನವರ ವಚನಗಳು, ಮೈಲಾರ ಬಸವಲಿಂಗ ಶರಣರ ಗುರುಕರಣ ತ್ರಿವಿಧಿಗಳು, ವಿರುಪಣ್ಣಯ್ಯ ಕವಿಕೃತ ವೀರಭದ್ರ ಕಲ್ಯಾಣ, ಜಟ್ಟಿಕಾಯಕದ ಶೀಲವಂತಯ್ಯನ ತ್ರಿವಿಧಿ ಇವರ ಸಂಪಾದಿತ ಕೃತಿಗಳಾಗಿವೆ. ಆದರ್ಶ ಶಿಕ್ಷಕ, ಬಸವಬಂಧು ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಲವು ಸಾಹಿತ್ಯಪರ ಸಂಘಟನೆಗಳ ಚುಕ್ಕಾಣಿ ಹಿಡಿದು ಮುನ್ನಡೆಸಿರುವ ಅನುಭವ ಹೊಂದಿದವರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts