More

    ಮುತ್ತಗಿಗೆ ಕಾಲಿಟ್ಟ ಕರೊನಾ

    ಕಲಘಟಗಿ: ತಾಲೂಕಿನ ಮುತ್ತಗಿ ಗ್ರಾಮದಲ್ಲಿ 49 ವರ್ಷದ ಪುರುಷ (ಪಿ-7385)ಗೆ ಕರೊನಾ ಸೋಂಕು ತಗುಲಿದ್ದು, ಇದರಿಂದಾಗಿ ತಾಲೂಕಿನಲ್ಲಿ ಕರೊನಾ ಪೀಡಿತರ ಸಂಖ್ಯೆ ಒಟ್ಟು 9ಕ್ಕೇರಿಕೆಯಾಗಿದೆ.

    ಕೋವಿಡ್-19 ಸೋಂಕಿತ ವ್ಯಕ್ತಿ ಹಾಗೂ ಆತನ ಪತ್ನಿ ಗುಜರಾತ್​ನಿಂದ ಜೂ. 13ರಂದು ತಾಲೂಕಿನ ಮುತ್ತಗಿ ಗ್ರಾಮಕ್ಕೆ ಆಗಮಿಸಿದ್ದರು. ಅವರಿಬ್ಬರನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಪತ್ನಿಯ ತಾಯಿ ಜೂ. 11ರಂದು ನಿಧನರಾಗಿದ್ದರಿಂದ ತವರು ಮನೆ ಮುತ್ತಗಿ ಗ್ರಾಮಕ್ಕೆ ಆಗಮಿಸಿದ್ದರು. ಅವರ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಪುರುಷನ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನನ್ನು ಮಂಗಳವಾರ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿದೆ.

    ಗ್ರಾಮದಲ್ಲಿ ಮೊದಲ ಕರೊನಾ ಪ್ರಕರಣ ಕಾಣಿಸಿದ್ದರಿಂದ ಸೋಂಕಿತ ವ್ಯಕ್ತಿ ಮನೆ ಸುತ್ತಲಿನ ಕುರುಬರ ಓಣಿ, ಗೌಡ್ರ ಓಣಿ, ಗ್ರಾಪಂ ಓಣಿ, ಕಲಘಟಗಿ-ಧಾರವಾಡ ರಸ್ತೆ ಹಾಗೂ ಸುತ್ತಮುತ್ತಲಿನ 1 ಕಿಮೀ ಪ್ರದೇಶವನ್ನು ಮಂಗಳವಾರ ಸೀಲ್​ಡೌನ್ ಮಾಡಲಾಗಿದೆ. ಜಿಲ್ಲಾಧಿಕಾರಿ ನಿರ್ದೇಶನದನ್ವಯ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts