More

    ಮುಗಿದ ರಜೆ, ಶಾಲೆ ಪುನರಾರಂಭ

    ಗದಗ: ದಸರಾ ರಜೆಯ ಬಳಿಕ ಶಾಲೆಗಳ ಬಾಗಿಲುಗಳು ತೆರೆದಿದ್ದು, ಕನ್ನಡ ರಾಜ್ಯೋತ್ಸವ ದಿನದಂದಲೇ ಜಿಲ್ಲೆಯ ಶಿಕ್ಷಕರು ಕಾರ್ಯವನ್ನು ಆರಂಭಿಸಿದ್ದಾರೆ. ಸೋಮವಾರ ಸಹ ಶಾಲೆಯಲ್ಲಿ ಶಿಕ್ಷಕರು ಮುಖಕ್ಕೆ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಿದರು.

    ಕರೊನಾ ಕುರಿತು ಬಹುತೇಕ ಶಿಕ್ಷಕರಲ್ಲಿ ಭಯ ಇಲ್ಲವಾಗಿದೆ. ಆದರೆ, ವಯಸ್ಸಾಗರುವ ಶಿಕ್ಷಕರಲ್ಲಿ ಕೊಂಚ ಕರೊನಾ ಭಯ ಇದೆ. ಕಣ್ಣಿಗೆ ಕಾಣದ ವೈರಸ್ ಅನೇಕ ಜೀವ ಕಳೆದಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಕಾಯಿಲೆವುಳ್ಳವರು ಹಾಗೂ 50 ವರ್ಷ ಮೀರಿದ ಶಿಕ್ಷಕರಿಗೆ ವೈರಸ್ ಬಗ್ಗೆ ಆತಂಕ ಇನ್ನೂ ಇದೆ.

    ಸರ್ಕಾರದ ಆದೇಶವನ್ನು ಮೀರುವಂತಿಲ್ಲ. ಇಲ್ಲಿಯವರೆಗೆ ಮನೆಯಲ್ಲಿರಲು ಅವಕಾಶ ನೀಡಿರುವುದೇ ಹೆಚ್ಚು, ಇನ್ನೂ ಮನೆಯಲ್ಲಿ ಕುಳಿತು ಕಾಲಹರಣ ಮಾಡುವುದು ತರವಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕೆಲಸ ಮಾಡಲು ಸಿದ್ಧ ಅನೇಕ ಶಿಕ್ಷಕರು ಹೇಳಿದರು.

    ಜಿಲ್ಲೆಯಲ್ಲಿ ಕಳೆದ ಅ. 31ರಿಂದಲೇ ಸರ್ಕಾರಿ ಶಾಲೆಗಳು ಬಾಗಿಲು ತೆರೆದಿವೆ. ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಶಿಕ್ಷಕರು ಶಾಲೆಗಳಿಗೆ ಆಗಮಿಸಿ ಮಕ್ಕಳಿಗೆ ಶಿಕ್ಷಣ ನೀಡುವ ಕುರಿತು ಚರ್ಚೆ ಆರಂಭಿಸಿದ್ದಾರೆ. ಮಕ್ಕಳು ಶಾಲೆಗೆ ಬರಲು ಅವಕಾಶವಿಲ್ಲ. ಖಾಸಗಿ ಶಾಲೆಗಳ ಮಾದರಿಯಲ್ಲಿ ಸರ್ಕಾರಿ ಶಾಲೆಗಳಲ್ಲೂ ಆನ್​ಲೈನ್ ಶಿಕ್ಷಣ ನೀಡುವ ಕುರಿತು ಚಿಂತನೆ ನಡೆಸಲಾಗುತ್ತದೆ. ಕರೊನಾ ಭಯದಿಂದ ಯಾವುದೇ ಶಿಕ್ಷಕರು ರಜೆ ತೆಗೆದುಕೊಂಡಿಲ್ಲ. ಎಲ್ಲರೂ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ.
    | ಬಸವಲಿಂಗಪ್ಪ, ಡಿಡಿಪಿಐ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts