More

    ಮುಖ್ಯ ರಸ್ತೆಯಲ್ಲಿ ಮಿಂಚಿನ ಪ್ರತಿಭಟನೆ

    ಕಲಬುರಗಿL ಹೀರಾಪುರ ಬಡಾವಣೆಗೆ ಹೊಂದಿಕೊಂಡ ಪ್ರಮುಖ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ನೂರಾರು ಮಹಿಳೆಯರು ಮುಖ್ಯ ರಸ್ತೆಯಲ್ಲಿ ಕುಳಿತು ಬುಧವಾರ ಮಿಂಚಿನ ಪ್ರತಿಭಟನೆ ನಡೆಸಿದರು.
    ಬಡಾವಣೆ (ವಾರ್ಡ 38) ಹತ್ತಿರದ ಮುಖ್ಯ ರಸ್ತೆಯಲ್ಲಿ ಉಸುಕಿನ ಲಾರಿ ಟೈರ್ ಒಡೆದು ಸಿಡಿದ ಹಳ್ಳಗಳು ತಮ್ಮ ಮನೆ ಎದುರು ಕುಳಿತಿದ್ದ ಇಬ್ಬರು ವೃದ್ಧೆಯರ ಕಣ್ಣಿನ ಪಕ್ಕ, ಮುಖ, ಕೈ ಮತ್ತು ಕಾಲಿಗೆ ಬಡಿದಿವೆ. ಇದರಿಂದ ಇಬ್ಬರೂ ವೃದ್ಧರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗೊತ್ತಾಗಿದೆ.
    ಆಗಾಗ್ಗೆ ಎದುರಾಗುತ್ತಿರುವ ಇಂಥ ಸಮಸ್ಯೆಯಿಂದ ರೋಸಿ ಹೋಗಿರುವ ಬಡಾವಣೆ ಜನ ಮಹಿಳೆಯರು ಮತ್ತು ಮಕ್ಕಳೊಂದಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಕೂಡಲೇ ಭಾರಿ ಗಾತ್ರದ ವಾಹನ ಸಂಚಾರವನ್ನು ಈ ಮಾರ್ಗದಲ್ಲಿ ನಿಷೇಧಿಸಬೇಕು ಎಂದು ಗ್ರಾಮೀಣ ಮತ್ತು ಸಂಚಾರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಮನವಿ ಮಾಡಿದರು.
    ಹಿಂದಿನ ಜಿಲ್ಲಾಧಿಕಾರಿ ಶರತ್ ಬಿ. ಹೀರಾಪುರ ಬಡಾವಣೆಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿ ಈ ಪ್ರಮುಖ ರಸ್ತೆಯಲ್ಲಿ ಭಾರಿ ಗಾತ್ರದ ವಾಹನ ಸಂಚಾರ ನಿಲ್ಲಿಸಬೇಕೆಂದು ಸಂಬಂಧಿತ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಕೆಕೆಆರ್ಡಿಬಿ ಅಧ್ಯಕ್ಷರಿಗೂ ಮನವಿಪತ್ರ ಸಲ್ಲಿಸಲಾಗಿದೆ. ಸಂಸದ ಡಾ.ಉಮೇಶ ಜಾಧವ್ ಅವರಿಗೂ ಮನವಿ ಮಾಡಿ ಸಂಪೂರ್ಣ ಕೆಟ್ಟು ಹೋಗಿರುವ ಬಡಾವಣೆ ರಸ್ತೆ ದುರಸ್ತಿ ಮಾಡಿಸಬೇಕೆಂದು ಕೋರಲಾಗಿತ್ತು. ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ ಈಗ ಮರೆತಂತಿದೆ ಎಂದು ನಿವಾಸಿಗಳು ಕಿಡಿಕಾರಿದರು.
    ಬಡಾವಣೆ ಪ್ರಮುಖರಾದ ಸಂತೋಷ ಮೇಲ್ಮನಿ, ಭೀಮು ಹೀರಾಪುರ, ಬಸವರಾಜ ಬಿರಾದಾರ, ಸಂಗಣ್ಣ ಮೇಳಕುಂದಿ ಮೊದಲಾದವರು ಪಾಲ್ಗೊಂಡಿದ್ದರು. ಶರಣ ಅಲ್ಲಮಪ್ರಭು ಪಾಟೀಲ್ ಇವರಿಗೆ ಸಾಥ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts