More

    ಮುಂದಿನ ಪ್ರಥಮ ಪ್ರಜೆ ಯಾರು?

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ

    ನಗರಸಭೆ ಅಧ್ಯಕ್ಷ ಸ್ಥಾನದ ಅವಧಿ ಪೂರ್ಣಗೊಳ್ಳದಿದ್ದರೂ ಈ ಹಿಂದೆ ಬಿಜೆಪಿ ವರಿಷ್ಠರು ನಿಗದಿಪಡಿಸಿದ್ದ ಡೆಡ್ಲೈನ್ ಮುಗಿದಿದ್ದರಿಂದ ಹಾಲಿ ಅಧ್ಯಕ್ಷ ವಿಲಾಸ್ ಬಿ.ಪಾಟೀಲ್ ರಾಜೀನಾಮೆ ನೀಡುವ ಸಾಧ್ಯತೆ ಇದೆ.

    ಅಧ್ಯಕ್ಷ ಸ್ಥಾನದ ಅವಧಿ ಎರಡೂವರೆ ವರ್ಷವಾಗಿದ್ದರೂ ಪಕ್ಷದಲ್ಲಿ ದುಡಿದವರಿಗೆ ಅವಕಾಶ ಕೊಡಬೇಕೆಂಬ ಕಾರಣಕ್ಕೆ ಸ್ಥಳೀಯ ಹೈಕಮಾಂಡ್ ಪ್ರತಿಯೊಬ್ಬರಿಗೂ 15 ತಿಂಗಳ ಅವಧಿ ನಿಗದಿಪಡಿಸಿ ಫರ್ಮಾನು ಹೊರಡಿಸಿದೆ. ಹೀಗಾಗಿ ವಿಲಾಸ್ ಪಾಟೀಲ್ ಅವಧಿ ಮುಗಿಯುತ್ತಿರುವುದರಿಂದ ರಾಜೀನಾಮೆ ಪಡೆಯಲು ಮುಂದಾಗಿದೆ ಎಂಬ ಮಾತುಗಳು ಪಕ್ಷದ ಮೊಗಸಾಲೆಯಲ್ಲಿ ಕೇಳಿಬರುತ್ತಿವೆ.

    31 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ 16, ಕಾಂಗ್ರೆಸ್ 11, ಜೆಡಿಎಸ್ 2 ಮತ್ತು ಒಬ್ಬ ಪಕ್ಷೇತರ ಸದಸ್ಯರಿದ್ದು, ಬಹುಮತ ಹೊಂದಿರುವ ಕೇಸರಿ ಪಾಳಯಕ್ಕೆ ಅಧಿಕಾರದ ಗಾದಿ ಸಿಕ್ಕಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿ ಸರ್ಕಾರ ಈ ಹಿಂದೆ ಆದೇಶಿಸಿತ್ತು. ಅದರಂತೆ ಸಾಮಾನ್ಯ ವರ್ಗದ ವಿಲಾಸ್ ಸಲೀಸಾಗಿ ಅಧ್ಯಕ್ಷರಾದರೆ, ಹಿಂದುಳಿದ ವರ್ಗದ ಪ್ರಭಾವತಿ ಕಲಾಲ್ ಉಪಾಧ್ಯಕ್ಷರಾದರು.

    ವಿಲಾಸ್ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಲ್ಲಿ ತೆರವಾದ ಸ್ಥಾನಕ್ಕೆ ಆಕಾಂಕ್ಷಿಗಳ ದಂಡೇ ಇದೆ. ಮುಂಚೂಣಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಸುರೇಶ ಅಂಬಿಗೇರ ಇದ್ದರೆ, ಹಿರಿಯ ಸದಸ್ಯರಾದ ಲಲಿತಾ ಅನಪುರ, ಸ್ವಾಮಿದೇವ ದಾಸನಕೇರಿ, ಹಣಮಂತ ಇಟಗಿ ಕೂಡ ರೇಸ್ನಲ್ಲಿದ್ದಾರೆ. ನಗರದ ಪ್ರಥಮ ಪ್ರಜೆಯಾಗಲಿರುವ ಅಧ್ಯಕ್ಷ ಸ್ಥಾನ ಅತ್ಯಂತ ಮಹತ್ತರವಾಗಿದೆ. ಈ ಸ್ಥಾನಕ್ಕೆ ಕೂಡಿಸಬೇಕಾದರೆ ಜಾತಿ, ಹಣ ಮತ್ತು ತೋಳ್ಬಲ ಎಲ್ಲವನ್ನೂ ಗಮನಿಸುವುದು ಸಾಮಾನ್ಯ.

    ಸದ್ಯ ಬಿಜೆಪಿಯಲ್ಲಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಮತ್ತು ಮಾಜಿ ಶಾಸಕ ಡಾ.ವೀರಬಸವಂರಡ್ಡಿ ಮುದ್ನಾಳ್, ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ನಿಧರ್ಾರವೇ ಫೈನಲ್ ಎನ್ನಲಾಗುತ್ತಿದ್ದು, ಅವರು ಸೂಚಿಸುವ ಸದಸ್ಯರಿಗೆ ಅಧಿಕಾರದ ಗದ್ದುಗೆ ಸಿಗುವುದು ಖಚಿತವಾಗಿದೆ.

    ಅಖಾಡಕ್ಕಿಳಿಯುವರೆ ಲಲಿತಾ ಅನಪುರ?
    ನಗರಸಭೆಗೆ ಮೂರನೇ ಸಲ ಸದಸ್ಯರಾಗಿರುವ ಲಲಿತಾ ಅನಪುರ ಎರಡು ಬಾರಿ ಅಧ್ಯಕ್ಷರಾಗಿ ಕಾರ್ಯಭಾರ ಮಾಡಿದ್ದಾರೆ. ಹೀಗಾಗಿ ಮೂರನೇ ಬಾರಿ ಅಧ್ಯಕ್ಷ ಸ್ಥಾನಕ್ಕೇರಲು ಅಖಾಡಕ್ಕಿಳಿಯಲಿದ್ದಾರೆ ಎಂಬ ಗುಸುಗುಸು ಚರ್ಚೆ ಶುರುವಾಗಿದೆ. ಅನಪುರ ಕಳೆದ ಬಾರಿ ಬಿಎಸ್ಆರ್ ಕಾಂಗ್ರೆಸ್ನಿಂದ ಸ್ಪಧರ್ಿಸಿ ಗೆದ್ದಿದ್ದರು. ಈ ಸಲ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಅನಪುರ ಅಧ್ಯಕ್ಷ ಸ್ಥಾನಕ್ಕೆ ಮನಸ್ಸು ಮಾಡಿದರೆ ಕೆಲ ಸದಸ್ಯರು ಬೆಂಬಲ ಕೊಡಲು ಸಿದ್ಧರಿದ್ದಾರೆ. ರಾಜಕೀಯದಲ್ಲಿ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿದ್ದು, ಅನಪುರ ಮುಂದಿನ ನಡೆ ಏನಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಸಂಘ ನಿಷ್ಠ ಅಂಬಿಗೇರ
    15 ವರ್ಷದಿಂದ ಕೇಸರಿ ಪಾಳಯದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತಿರುವ ಸುರೇಶ ಅಂಬಿಗೇರ ಈ ಬಾರಿ ಅವಕಾಶ ಕೊಡಲೇಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಯುವ ಮೋರ್ಚಾ ಜಿಲ್ಲಾಧ್ಯಕ್ಷ, ನಗರ ಮಂಡಲ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿದ್ದಾರೆ. ಇದಲ್ಲದೆ ಬಿ.ಎಸ್. ಯಡಿಯೂರಪ್ಪ ಹಿಂದೆ ಕೆಜೆಪಿ ಸ್ಥಾಪನೆ ಮಾಡಿದಾಗ ಎಷ್ಟೇ ಒತ್ತಡ ಬಂದರೂ ಬಿಜೆಪಿಯಲ್ಲೇ ಉಳಿಯುವ ಮೂಲಕ ಪಕ್ಷನಿಷ್ಠೆ ತೋರಿದವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts